Navratri Money Remedies: ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತಾನು ಶ್ರೀಮಂತನಾಗಬೇಕು ಎಂಬ ಕನಸು ಕಾಣುತ್ತಾನೆ. ಸುಖ-ಶಾಂತಿ ನೆಮ್ಮದಿಯಿಂದ ಜೀವನದಲ್ಲಿ ಯಾವುದೇ ಕೊರತೆ ಇಲ್ಲದೆ ಬದುಕಬೇಕು ಎಂಬುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಇದಕ್ಕಾಗಿ, ಕಠಿಣ ಪರಿಶ್ರಮ, ಬುದ್ಧಿವಂತಿಕೆಯ ಬಳಕೆಯೊಂದಿಗೆ, ದೇವರ ಅನುಗ್ರಹವನ್ನು ಪಡೆಯುವುದು ಸಹ ಬಹಳ ಮುಖ್ಯವಾಗಿದೆ. ಈ ಕೆಲಸಕ್ಕೆ ನವರಾತ್ರಿಯ ಹಬ್ಬವನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ದುರ್ಗಾ ಮಾತೆ ಭೂಮಿಯಲ್ಲಿ ಸಂಚರಿಸಲು ಬರುತ್ತಾಳೆ. ಆದ್ದರಿಂದ, ಈ ಸಮಯದಲ್ಲಿ ದುರ್ಗಾದೇವಿಯನ್ನು ಪೂಜಿಸುವ ಮೂಲಕ ಅಪಾರ ಸಂಪತ್ತನ್ನು ಪಡೆಯಬಹುದು ಮತ್ತು ಶ್ರದ್ಧಾ ಭಕ್ತಿಯಿಂದ ತಾಯಿಯ ನವ ಅವತಾರಗಳನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಯಾಗಳಿವೆ ಎಂಬ ನಂಬಿಕೆ ಇದೆ. ನೀವೂ ಕೂಡ ಶ್ರೀಮಂತರಾಗಲು ಬಯಸಿದರೆ, ಅಕ್ಟೋಬರ್ 7 ರಿಂದ 9 ದಿನಗಳ ಕಾಲ ಈ ಪರಿಹಾರಗಳನ್ನು ತಪ್ಪದೇ ಮಾಡಿ.
ನಿಮಗೂ ಸಿರಿವಂತರಾಗುವ ಆಸೆ ಇದ್ದರೆ ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಿ:
ಮನೆಯ ಮುಂದೆ ರಂಗೋಲಿ ಹಾಕಿ:
ಸಾಮಾನ್ಯವಾಗಿ ಪ್ರತಿಯೊಬ್ಬರೂ ನಿತ್ಯ ತಮ್ಮ ಮನೆ ಮುಂದೆ ನೀರು ಹಾಕಿ, ರಂಗೋಲಿ ಬಿಡಿಸುತ್ತಾರೆ. ನವರಾತ್ರಿಯಲ್ಲಿ ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಮನೆಯ ಮುಂದೆ ಸ್ವಚ್ಚಗೊಳಿಸಿ ಅಂದ-ಚಂದದ ರಂಗೋಲಿ ಹಾಕುವುದು ಒಳ್ಳೆಯದು. ಇದು ತಾಯಿಯನ್ನು ಮನೆಗೆ ಸ್ವಾಗತಿಸುವ ಶುಭ ಸಂಕೇತವಾಗಿದೆ.
ಇದನ್ನೂ ಓದಿ- Tuesday Tips: ಮಂಗಳವಾರ ನೀವೂ ಈ ಕೆಲಸ ಮಾಡುತ್ತಿದ್ದರೆ ಹುಷಾರ್! ದೊಡ್ಡ ನಷ್ಟವಾಗಬಹುದು
ಬಾಗಿಲಿನಲ್ಲಿ ಇರಲಿ ಸ್ವಸ್ತಿಕ್ ಚಿಹ್ನೆ:
ಸ್ವಸ್ತಿಕದ ಚಿಹ್ನೆಯು ಸಂತೋಷ (Happiness) ಮತ್ತು ಸಮೃದ್ಧಿಯ ಸಂಕೇತವಾಗಿದೆ. ನವರಾತ್ರಿಯ ಸಮಯದಲ್ಲಿ, ನಿಮ್ಮ ಮುಖ್ಯ ದ್ವಾರದಲ್ಲಿ ಪ್ರತಿದಿನ ಅರಿಶಿನ ಅಥವಾ ಕುಂಕುಮದೊಂದಿಗೆ ಸ್ವಸ್ತಿಕ ಚಿಹ್ನೆಯನ್ನು ಮಾಡಿ. ಇದರಿಂದ ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ ಎನ್ನುವ ನಂಬಿಕೆ ಇದೆ.
ದುರ್ಗಾ ಮಂತ್ರವನ್ನು ಜಪಿಸಿ:
ನವರಾತ್ರಿಯಲ್ಲಿ (Navratri) ಗರಿಷ್ಠ ಸಮಯವನ್ನು ತಾಯಿಯ ಪೂಜೆಯಲ್ಲಿ ಕಳೆಯುವುದರಿಂದ ತಾಯಿಗೆ ಸಂತೋಷವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ದುರ್ಗಾ ಮಂತ್ರವನ್ನು ಜಪಿಸಲು ಪ್ರಯತ್ನಿಸಿ.
ಇದನ್ನೂ ಓದಿ- Healthy Foods During Navratri 2021: ಉಪವಾಸದ ವೇಳೆ ಲವಲವಿಕೆಯಿಂದಿರಲು ನವರಾತ್ರಿಯಲ್ಲಿ ಈ ಆಹಾರ ಸೇವಿಸಿ
ದೇವಿಯನ್ನು ಪೂಜಿಸಿ:
ನಿಮಗೆ ಮನೆಯಲ್ಲಿ ನವರಾತ್ರಿಯಲ್ಲಿ ದೇವಿಯ ನವ ಅವತಾರಗಳನ್ನು ಸ್ಥಾಪಿಸಿ ಪೂಜಿಸಲು ಸಾಧ್ಯವಾಗದಿದ್ದರೂ, ಪ್ರತಿ ದಿನ ದೇವಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ. ನವದುರ್ಗೆಯರ ಆಶೀರ್ವಾದ ಪಡೆಯಿರಿ.
ಬಾಲಕಿಯರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಆಶೀರ್ವಾದ ಪಡೆಯಿರಿ:
ಕರೋನಾ ಸಾಂಕ್ರಾಮಿಕದ ದೃಷ್ಟಿಯಿಂದ ಈ ವರ್ಷ ಕನ್ಯೆಯರನ್ನು ಪೂಜಿಸಿ ಅವರಿಗೆ ಆಹಾರ ನೀಡುವುದು ಸೂಕ್ತವಲ್ಲ. ಆದರೆ ಕನ್ಯಾ ಪೂಜೆಯ ಬಳಿಕ ಉಡುಗೊರೆಗಳನ್ನು ನೀಡುವ ಮೂಲಕ ಅವರ ಆಶೀರ್ವಾದವನ್ನು ಪಡೆಯಿರಿ. ಈ ಕೆಲಸವನ್ನು ನೀವು ಎಲ್ಲಿ ಬೇಕಾದರೂ ಮಾಡಬಹುದು.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.