ನವದೆಹಲಿ: Life And Accidental Insurance Schemes - ಕೊರೊನಾ ವೈರಸ್ (Coronavirus) ನಂತರ, ಜನರಲ್ಲಿ ವಿಮೆಯ (Insurance) ಬಗ್ಗೆ ಜಾಗೃತಿ ಹೆಚ್ಚಾಗಿದೆ. ಸಮಾಜದ ಪ್ರತಿಯೊಂದು ವಿಭಾಗವನ್ನು ತಲುಪಲು ಸರ್ಕಾರ ಕೂಡ ಕಡಿಮೆ ಮೊತ್ತಕ್ಕೆ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ. ಈ ಅನುಕ್ರಮದಲ್ಲಿ, ಸರ್ಕಾರದ (Modi Government) ಯೋಜನೆಗಳು, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಇವೆ, ಇವು ನಿಮಗೆ 4 ಲಕ್ಷ ರೂ.ಗಳವರೆಗೆ ಲಾಭ ನೀಡುತ್ತವೆ.
ಬ್ಯಾಂಕ್ ನೀಡುತ್ತಿದೆ 4 ಲಕ್ಷ ರೂ.ಗಳ ಸೌಲಭ್ಯ
4 ಲಕ್ಷ ರೂ.ಗಳ ಲಾಭ ಪಡೆಯಲು, ನೀವು ಸರ್ಕಾರದ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳಲ್ಲಿ (PMSBY) ಸ್ವಲ್ಪ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಅವುಗಳಿಂದ ಸಿಗುವ ಲಾಭಗಳನ್ನು ಪಡೆಯಬಹುದು. ಈ ಎರಡು ಯೋಜನೆಗಳಲ್ಲಿ, ಕೇವಲ 342 ರೂಪಾಯಿಗಳನ್ನು ವಾರ್ಷಿಕವಾಗಿ ಜಮಾ ಮಾಡಬೇಕು.
Enroll for PMJJBY and PMSBY and secure your future.@DFS_India#PMJJBY #PMSBY#CanaraBank #TogetherWeCan#AzadiKaAmritMahotsav #JansurakshaCampaign pic.twitter.com/VL93iJQCro
— Canara Bank (@canarabank) October 12, 2021
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (PMSBY)
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ, ಅಪಘಾತದಲ್ಲಿ ವಿಮೆ ಮಾಡಿದವರ ಸಾವು ಅಥವಾ ಸಂಪೂರ್ಣವಾಗಿ ಅಂಗವಿಕಲರಾದರೆ, ರೂ 2 ಲಕ್ಷ ಪರಿಹಾರ ಲಭ್ಯವಿದೆ ಎಂಬುದು ಇಲ್ಲಿ ವಿಶೇಷ. ಈ ಯೋಜನೆಯಡಿಯಲ್ಲಿ, ವಿಮಾದಾರರು ಭಾಗಶಃ ಅಥವಾ ಶಾಶ್ವತವಾಗಿ ಅಂಗವಿಕಲರಾದರೆ, ಅವರು 1 ಲಕ್ಷ ರೂ. ಸಿಗುತ್ತದೆ. ಇದರಲ್ಲಿ, 18 ರಿಂದ 70 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ರಕ್ಷಣೆ ಪಡೆಯಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೂಡ ಕೇವಲ 12 ರೂ. ಆಗಿದೆ.
ಇದನ್ನೂ ಓದಿ-ಮತ್ತೆ ದೇಶಾದ್ಯಂತ ಜಾರಿಯಾಗಲಿದೆಯೇ Lockdown? ರೈಲು ಸಂಚಾರದಲ್ಲೂ ವ್ಯತ್ಯಯ ? ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನಾ (PMJJBY)
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿಯೂ ಕೂಡ ನಾಮಿನಿಗೆ ವಿಮಾದಾರನ ಸಾವಿನ ನಂತರ 2 ಲಕ್ಷ ರೂ. ರಕ್ಷಣೆ ಸಿಗುತ್ತದೆ. 18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಗೆ ನೀವು ಕೇವಲ ರೂ .330 ವಾರ್ಷಿಕ ಪ್ರೀಮಿಯಂ ಪಾವತಿಸಬೇಕು. ಇವೆರಡೂ ಪಾಲಸಿಗಳು ಟರ್ಮ್ ಪಾಲಸಿಗಳಾಗಿವೆ (Term Policy).
ಇದನ್ನೂ ಓದಿ-ITR filing FY 2020-21: ಎಸ್‌ಬಿಐ ಯೋನೋ ಆ್ಯಪ್ ಬಳಸಿ ಉಚಿತವಾಗಿ ತೆರಿಗೆ ರಿಟರ್ನ್ ಸಲ್ಲಿಸಿ, ಹೇಗೆಂದು ತಿಳಿಯಿರಿ
ಜೂನ್ 1 ರಿಂದ ಮೇ 31ರವರೆಗೆ ವಿಮಾ ರಕ್ಷಣೆ
ಈ ವಿಮಾ ರಕ್ಷಣೆಯು ಜೂನ್ 1 ರಿಂದ ಮೇ 31 ರವರೆಗೆ ಇರುತ್ತದೆ. ಇದಕ್ಕಾಗಿ ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಪ್ರೀಮಿಯಂ ಕಡಿತದ ಸಮಯದಲ್ಲಿ ಬ್ಯಾಂಕ್ ಖಾತೆ ಬಂದ್ ಆಗಿರುವುದು ಅಥವಾ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿರುವುದು, ವಿಮೆಯನ್ನು ಸಹ ರದ್ದುಗೊಳಿಸಬಹುದು. ಆದ್ದರಿಂದ, ವಿಮೆಯನ್ನು ತೆಗೆದುಕೊಳ್ಳುವ ಮೊದಲು, ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುವುದು ತುಂಬಾ ಮುಖ್ಯ.
ಇದನ್ನೂ ಓದಿ-Good news...! ಕೇವಲ 634 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.