ನವದೆಹಲಿ : ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವೂ ಭಿನ್ನವಾಗಿರುತ್ತದೆ. ಕೆಲವು ಜನರು ತುಂಬಾ ಭಾವನಾತ್ಮಕವಾಗಿರುತ್ತಾರೆ ಇನು ಕೆಲವರು ಬಹಳ ಪ್ರಾಕ್ಟಿಕಲ್ ಆಗಿರುತ್ತಾರೆ. ವ್ಯಕ್ತಿಯ ಸ್ವಭಾವಕ್ಕೆ ಅವನಿರುವ ವಾತಾವರಣ, ಕುಟುಂಬದಿಂದ ಸಿಕ್ಕಿರುವ ಸಂಸ್ಕಾರ ಎಲ್ಲವೂ ಕಾರಣವಾಗಿರುತ್ತವೆ. ಅದರ ಜೊತೆಗೆ ಆತನ ರಾಶಿಚಕ್ರ ಚಿಹ್ನೆಯೂ ಕಾರಣವಾಗಿರುತ್ತದೆ. ಜ್ಯೋತಿಷ್ಯದಲ್ಲಿ (Astrology), ರಾಶಿಚಕ್ರ ಚಿಹ್ನೆಗಳ ಮೂಲಕವೇ ವ್ಯಕ್ತಿಯ ಸ್ವಭಾವವನ್ನು ಹೇಳಲಾಗಿದೆ.
ಈ ರಾಶಿಚಕ್ರದ ಜನರು ಪ್ರತಿಯೊಂದು ವಿಷಯದಲ್ಲೂ ಪ್ರಾಕ್ಟಿಕಲ್ ಆಗಿರುತ್ತಾರೆ :
ಕೆಲವು ರಾಶಿಚಕ್ರದ (Zodiac sign) ಜನರು ಇತರರ ಸಂತೋಷ ಮತ್ತು ದುಃಖದಿಂದ ಪ್ರಭಾವಿತರಾಗುತ್ತಾರೆ. ಆದರೆ ಅದು ಬಹಳ ಕಡಿಮೆ ಅವಧಿಗೆ ಮಾತ್ರ. ಅಂತಹ ಜನರು ಶೀಘ್ರದಲ್ಲೇ ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುತ್ತಾರೆ. ನಂತರ ತಮ್ಮ ಕೆಲಸದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ. ಇವರು, ಮತ್ತು ಹೃದಯದ ಬದಲು ಮನಸ್ಸಿನಿಂದ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ : Navratri Navami 2021 Puja Muhurat : ಇಂದು ಮಹಾನವಮಿ : ಪೂಜೆ-ಹವನ ಮಾಡುವ ವಿಧಿ-ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ಯಾ : ಕನ್ಯಾ ರಾಶಿಯ (Virgo) ಜನರು ತುಂಬಾ ವಿನಮೃರು, ಮೃದು ಹೃದಯಿಗಳು ಮತ್ತು ನೋಡುವುದಕ್ಕೆ ಭಾವನಾತ್ಮಕರಂತೆ ಕಾಣುತ್ತಾರೆ. ಆದರೆ ವಾಸ್ತವದಲ್ಲಿ ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರು ತಮ್ಮ ಇಮೇಜ್ ಅನ್ನು ಹೆಚ್ಚಿಸಲು ಇತರರ ಮುಂದೆ ಒಳ್ಳೆಯವರಾಗುತ್ತಾರೆ. ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರೂ, ತಮ್ಮ ಲಾಭವನ್ನು (Profit) ಮುಂದಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮ್ಮ ನಿರ್ಧಾರ ಇತರರಿಗೆ ಎಷ್ಟೇ ಹಾನಿ ಉಂಟು ಮಾಡಿದರೂ, ತಮಗೆ ಅನುಕೂಲವಾಗುತ್ತದೆ ಎಂದರೆ ಆ ನಿರ್ಧಾರದಿಂದ ಹಿಂದೆ ಸರಿಯುವುದೇ ಇಲ್ಲ.
ಕುಂಭ : ಕುಂಭ ರಾಶಿಯ (Aquarius) ಜನರು ಯಾವಾಗಲೂ ಸಮಯದೊಂದಿಗೆ ಮುನ್ನಡೆಯಲು ಇಷ್ಟಪಡುತ್ತಾರೆ. ಅವರು ಹೃದಯದ ಬದಲು ಮನಸ್ಸಿನ ಮಾತನ್ನು ಕೇಳುತ್ತಾರೆ. ಈ ರಾಶಿಯವರು (Zodiac sign) ಬುದ್ಧಿವಂತರು ಮತ್ತು ಯಾವ ಕೆಲಸ ಮಾಡಬೇಕು ಅಂದುಕೊಳ್ಳುತ್ತಾರೋ ಅದನ್ನು ಮಾಡಿಯೇ ಬಿಡುತ್ತಾರೆ. ಅವರು ತಮ್ಮ ಬುದ್ಧಿವಂತಿಕೆಯನ್ನು ತಮಗಾಗಿ ಮಾತ್ರವಲ್ಲದೆ ಇತರರ ಒಳಿತಿಗೂ ಬಳಸುತ್ತಾರೆ.
ಇದನ್ನೂ ಓದಿ : Navratri Mahanavami 2021: ಈ 4 ರಾಶಿಯವರ ಮೇಲೆ ದುರ್ಗಾ ದೇವಿಯ ವಿಶೇಷ ಅನುಗ್ರಹ
ಮಕರ : ಮಕರ ರಾಶಿಯವರು (Capricorn) ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಯಾವಾಗಲೂ ಮನಸ್ಸಿನ ಮಾತಿಗೆ ಪಾಮುಖ್ಯತೆ ನೀಡುತ್ತಾರೆ. ಈ ಜನರು ಅತ್ಯಂತ ಪ್ರಾಕ್ಟಿಕಲ್ ಆಗಿ ಯೋಚಿಸುವ ಜನರ ಗುಂಪಿನಲ್ಲಿ ಬರುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಅವರು ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ. ಇತರರಿಗೂ ಸಹಾಯ ಮಾಡುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ