ನವದೆಹಲಿ: ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ಅವರು ಭಾರತದ ವಿರುದ್ಧದ ತಮ್ಮ ಮೊದಲ ಸ್ಪೆಲ್ನಲ್ಲಿ ಓಪನರ್ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದರು.
ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಶಾಹಿನ್ ಎಸೆದ ಆ ಬಾಲ್ ನೋಬಾಲ್ ಆಗಿತ್ತು, ಆದಾಗ್ಯೂ ಅಂಪೈರ್ ಔಟ್ ನೀಡಿದ್ದಕ್ಕೆ ಈಗ ಅಭಿಮಾನಿಗಳು ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.ಶಾಹಿನ್ ಎಸೆದ ಆ ಎಸೆತದ ಗತಿಯನ್ನು ಗುರುತಿಸಲು ವಿಫಲರಾದ ಕೆ.ಎಲ್ ರಾಹುಲ್ (KL Rahul) ಕ್ಲೀನ್ ಬೌಲ್ಡ್ ಆಗಿದ್ದರು, ಆದರೆ ಅಫ್ರಿದಿ ಅವರ ಪಾದ ಕ್ರೀಸ್ನ ಹೊರಗಿದೆ ಎನ್ನುವುದನ್ನು ಈಗ ಅಭಿಮಾನಿಗಳು ಹಂಚಿಕೊಂಡಿರುವ ಸ್ಕ್ರೀನ್ ಶಾಟ್ ನಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ICC T20 World Cup 2021: ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಪ್ರಕಟಗೊಂಡಿದೆ ಈ ಭವಿಷ್ಯವಾಣಿ, ಈ ತಂಡದ ಗೆಲುವು ನಿಶ್ಚಿತ!
ಕೆ.ಎಲ್.ರಾಹುಲ್ ತಮ್ಮ ವಿಕೆಟ್ ಕಳೆದುಕೊಂಡಾಗ ಎಂಟು ಎಸೆತಗಳಿಗೆ ಮೂರು ರನ್ ಗಳಿಸಿ ಪೆವಲಿನ್ ಗೆ ಹಿಂತಿರುಗಿದರು.ಭಾರತ ತಂಡಕ್ಕೆ ಶಾಹಿನ್ ಆಫ್ರಿದಿ ನೀಡಿದ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು.ಮಧ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರಿಶಬ್ ಪಂತ್ ಅವರ ಬ್ಯಾಟಿಂಗ್ ನಿಂದಾಗಿ ಭಾರತ ನಂತರ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಲು ಸಾಧ್ಯವಾಯಿತು.
No ball what the hell is icc umpiring doing #klrahul #noball pic.twitter.com/tUK8Xn3ESg
— cricnewz😃😃 (@Asmita31175941) October 24, 2021
ಆದರೆ ಈಗ ಕೆ.ಎಲ್ ರಾಹುಲ್ ಅವರು ವಿಚಾರದಲ್ಲಿನ ಕಳಪೆ ಅಂಪೈರಿಂಗ್ ವಿಚಾರದಲ್ಲಿ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ.ಕೆಲವರು ಇಂತಹ ಪ್ರಮುಖ ಪಂದ್ಯಗಳಲ್ಲಿ ಈ ಪ್ರಮಾದಗಳು ಸಂಭವಿಸಕೊಡದು ಎಂದು ಹೇಳಿದ್ದಾರೆ.
ಇದನ್ನೂ ಓದಿ-Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.