ಕಾಶ್ಮೀರ ಕಣಿವೆಗೆ ಹೋಗುವ ಪ್ರವಾಸಿಗರಿಗೆ ಇಲ್ಲೊಂದು ಸಂತಸದ ಸುದ್ದಿ..!

ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಕಾಶ್ಮೀರ ಕಣಿವೆಗೆ ಬರುವ ಪ್ರವಾಸಿಗರಿಗೆ ಭಾರಿ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿದೆ.ಹೋಟೆಲ್‌ಗಳು ಮತ್ತು ಹೌಸ್‌ಬೋಟ್‌ಗಳ ದರಗಳಲ್ಲಿ ಸುಮಾರು  ಶೇ 40 ರಷ್ಟು ಕಡಿತವನ್ನು ಘೋಷಿಸಲಾಗಿದೆ.

Written by - Zee Kannada News Desk | Last Updated : Nov 2, 2021, 01:20 AM IST
  • ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಕಾಶ್ಮೀರ ಕಣಿವೆಗೆ ಬರುವ ಪ್ರವಾಸಿಗರಿಗೆ ಭಾರಿ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿದೆ.ಹೋಟೆಲ್‌ಗಳು ಮತ್ತು ಹೌಸ್‌ಬೋಟ್‌ಗಳ ದರಗಳಲ್ಲಿ ಸುಮಾರು ಶೇ 40 ರಷ್ಟು ಕಡಿತವನ್ನು ಘೋಷಿಸಲಾಗಿದೆ.
 ಕಾಶ್ಮೀರ ಕಣಿವೆಗೆ ಹೋಗುವ ಪ್ರವಾಸಿಗರಿಗೆ ಇಲ್ಲೊಂದು ಸಂತಸದ ಸುದ್ದಿ..!  title=
ಸಾಂದರ್ಭಿಕ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಕಾಶ್ಮೀರ ಕಣಿವೆಗೆ ಬರುವ ಪ್ರವಾಸಿಗರಿಗೆ ಭಾರಿ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿದೆ.ಹೋಟೆಲ್‌ಗಳು ಮತ್ತು ಹೌಸ್‌ಬೋಟ್‌ಗಳ ದರಗಳಲ್ಲಿ ಸುಮಾರು ಶೇ 40 ರಷ್ಟು ಕಡಿತವನ್ನು ಘೋಷಿಸಲಾಗಿದೆ.

ದೀಪಾವಳಿ ಉಡುಗೊರೆಯಾಗಿ ಈ ರಿಯಾಯಿತಿ ನೀಡಲಾಗುತ್ತಿದೆ.ಮತ್ತು ಈ ಕೊಡುಗೆಗಳಿಂದಾಗಿ ವರ್ಷಗಳ ನಂತರ ಶರತ್ಕಾಲದ ಋತುವಿನಲ್ಲಿ ಕಾಶ್ಮೀರ ಪ್ರವಾಸೋದ್ಯಮವು ಉತ್ತಮಗೊಳ್ಳುತ್ತಿದೆ.ಇದು ವರ್ಷಗಳ ನಂತರ, ಶರತ್ಕಾಲದ ಅವಧಿಯಲ್ಲಿ ಇಂತಹ ಹಲವಾರು ಪ್ರವಾಸಿಗರ ಆಗಮನ ಮತ್ತು ಬುಕಿಂಗ್ ಮಾಡಲಾಗಿದೆ.

ಇದನ್ನೂ ಓದಿ-Pakistan: ಐಎಸ್‌ಐ ಮುಖ್ಯಸ್ಥರ ರಾಜೀನಾಮೆಗೆ ಹೆಚ್ಚಿದ ಬೇಡಿಕೆ

'ಸರಕಾರವು ದೇಶದ ವಿವಿಧ ಭಾಗಗಳಲ್ಲಿ ಪ್ರಚಾರಗಳನ್ನು ಮಾಡಿದೆ. ಅಲ್ಲಿ ಹೌಸ್‌ಬೋಟ್ ಪ್ರದರ್ಶನವನ್ನು ಆಯೋಜಿಸಲಾಗಿದ್ದು,ಇದು ಸಹ ಈಗ ಸಹಾಯ ಮಾಡಿದೆ.ದೀಪಾವಳಿ ಹತ್ತಿರದಲ್ಲಿದೆ ಮತ್ತು ಸಿಂಧು ದರ್ಶನ ಎಂಬ ಮತ್ತೊಂದು ಆಚರಣೆ ಇದೆ.ಹಬ್ಬ ಹರಿದಿನಗಳಲ್ಲಿ ಸಾಕಷ್ಟು ಪ್ರವಾಸಿಗರನ್ನು ನಿರೀಕ್ಷಿಸುತ್ತಿದ್ದೇವೆ. ಹಾಗಾಗಿ ನಾವು ವಿಶೇಷ ರಿಯಾಯಿತಿಗಳನ್ನು ನೀಡುತಿದ್ದೇವೆ, ಹೌಸ್‌ಬೋಟ್‌ಗಳಲ್ಲಿ ತಂಗುವ ಪ್ರವಾಸಿಗರಿಗೆ ಸುಮಾರು ಶೇ 40 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.ಪ್ರಪಂಚದಾದ್ಯಂತದ ಜನರು ಆರ್ಥಿಕ ಮುಗ್ಗಟ್ಟನ್ನು ಹೊಂದಿದ್ದರು ಮತ್ತು ಅದಕ್ಕಾಗಿಯೇ ನಾವು ಅಂತಹ ಕೊಡುಗೆಗಳನ್ನು ನೀಡುತ್ತಿದ್ದೇವೆ.ಇದು ಕಾಶ್ಮೀರ ಪ್ರವಾಸೋದ್ಯಮಕ್ಕೆ ನೆರವಾಗಲಿದೆ ಎಂದು ಹೌಸ್ ಬೋಟ್ ಅಸೋಸಿಯೇಷನ್ ​​ಕಾಶ್ಮೀರದ ಉಪಾಧ್ಯಕ್ಷ ಮಂಜೂರ್ ಅಹ್ಮದ್ ಪಖ್ತೂನ್ ಹೇಳಿದರು.

ಇದನ್ನೂ ಓದಿ-ICC T20 World Cup 2021: Ind vs Pak ಪಂದ್ಯಕ್ಕೂ ಮುನ್ನ ಬೋಲ್ಡ್ ಹೇಳಿಕೆ ನೀಡಿದ ಪಾಕ್ ಪಿಎಂ!

ಕಾಶ್ಮೀರದಲ್ಲಿರುವ ಪ್ರವಾಸಿಗರು ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡಲು ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಸ್ವಾಗತಿಸುತ್ತಿದ್ದಾರೆ.ಈಗಾಗಲೇ ಸುಮಾರು ಶೇ 50 ಆಕ್ಯುಪೆನ್ಸಿ ಇದೆ, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬೆಳೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.ಕಣಿವೆಯಲ್ಲಿರುವ ಪ್ರವಾಸಿಗರು ಈಗಾಗಲೇ ಈ ಕೊಡುಗೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಹಬ್ಬದ ಋತುವಿನಲ್ಲಿ ಕಣಿವೆಗೆ ಭೇಟಿ ನೀಡುವಂತೆ ಪ್ರವಾಸಿಗರು ಇತರರನ್ನು ವಿನಂತಿಸಿಕೊಳ್ಳುತ್ತಿದ್ದಾರೆ. "ಕಾಶ್ಮೀರ ಪದಗಳಿಗೆ ಮೀರಿದ್ದು. ಪ್ರತಿಯೊಬ್ಬ ಪ್ರವಾಸಿಗರು ಈ ಸ್ಥಳದ ಸೌಂದರ್ಯವನ್ನು ಆನಂದಿಸಬೇಕಾಗಿದೆ ಮತ್ತು ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರ್ಕಾರವು ಭಾರಿ ರಿಯಾಯಿತಿಯನ್ನು ನೀಡಿದೆ ಮತ್ತು ಜನರು ಭೇಟಿ ನೀಡಬೇಕಾಗಿದೆ. ಕಾಶ್ಮೀರ ಮತ್ತು ದೀಪಾವಳಿ ಆಚರಣೆಗಳು ಹಬ್ಬದ ಋತುವಿಗೆ ಇನ್ನಷ್ಟು ಸೇರ್ಪಡೆಯಾಗುತ್ತಿವೆ.ಈ ಸ್ಥಳದ ಸೌಂದರ್ಯ, ಶಿಕಾರಗಳನ್ನು ನಾವು ಆನಂದಿಸುತ್ತಿದ್ದೇವೆ,'' ಎಂದು ಪ್ರವಾಸಿಗರಾದ ಕುಶ್ ಕಾಂತ್ ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಸರ್ಕಾರವೂ ಚಳಿಗಾಲದ ಪ್ರವಾಸೋದ್ಯಮಕ್ಕೆ ಸಿದ್ಧತೆ ನಡೆಸುತ್ತಿದೆ.ಈ ಋತುವಿನಲ್ಲಿ ವಿಶೇಷ ಸಾಹಸ ಕ್ರೀಡಾ ಚಟುವಟಿಕೆಗಳನ್ನು ಸಹ ಪರಿಚಯಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.

ಇದನ್ನೂ ಓದಿ-Inflation in Pakistan: ಪಾಕಿಸ್ತಾನದಲ್ಲಿ ಒಂದು ಕಪ್ ಚಹಾದ ಬೆಲೆ ಎಷ್ಟೆಂದು ಕೇಳಿದರೆ ಶಾಕ್ ಆಗ್ತೀರಾ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

Trending News