ನವದೆಹಲಿ : ಐಸಿಸಿ ಪುರುಷರ ಟಿ 20 ವಿಶ್ವಕಪ್ 2021 ರ ಭಾನುವಾರ (ಅಕ್ಟೋಬರ್ 24) ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತವು ಪಾಕಿಸ್ತಾನದೊಂದಿಗೆ ಸೆಣಸಲು ಸಜ್ಜಾಗಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಆಟವನ್ನ ನೋಡಿ ಕಣ್ಣು ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ವಿಶ್ವದಾದ್ಯಂತ ಅಭಿಮಾನಿಗಳು ಹೈ-ವೋಲ್ಟೇಜ್ ಮ್ಯಾಚ್ ನೋಡಲು ತಯಾರಿ ನಡೆಸುತ್ತಿರುವಾಗ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್(Imran Khan) ಶನಿವಾರ (ಅಕ್ಟೋಬರ್ 23) ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಟೀಂ ಇಂಡಿಯಾವನ್ನು ಸೋಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : T20 WORLD CUP 2021: India-Pakistan ಪಂದ್ಯಕ್ಕೂ ಮುನ್ನವೇ ಸೋಲೊಪ್ಪಿಕೊಂಡ Shahid Afridi, ಹೇಳಿದ್ದೇನು?
ಜಿಯೋ ಟಿವಿಗೆ ನೀಡಿದ ಹೇಳಿಕೆಯಲ್ಲಿ, "ಪಾಕ್ ತಂಡವು ಭಾರತವನ್ನು ಸೋಲಿಸುವ ಪ್ರತಿಭೆಯನ್ನು ಹೊಂದಿದೆ" ಎಂದು ಹೇಳಲಾಗಿದೆ. ಪಾಕಿಸ್ತಾನದ ಪ್ರಧಾನಿ, "ಇನ್ಶಾ ಅಲ್ಲಾ, ಪಾಕಿಸ್ತಾನ(Pakistan Team) ಖಂಡಿತವಾಗಿಯೂ ನಾಳೆ ಭಾರತವನ್ನು ಸೋಲಿಸುತ್ತದೆ" ಎಂದು ಹೇಳಿದ್ದಾರೆ.
ಟಿ 20 ವಿಶ್ವಕಪ್(ICC T20 World Cup 2021) ಅಥವಾ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಗಮನಿಸಬೇಕು. 50 ಓವರ್‌ಗಳ ವಿಶ್ವಕಪ್‌ನಲ್ಲಿ ಏಳು ಬಾರಿ ಮತ್ತು ಟಿ 20 ವಿಶ್ವಕಪ್‌ನಲ್ಲಿ ಐದು ಬಾರಿ ತಂಡಗಳು ಪರಸ್ಪರರ ವಿರುದ್ಧ ಆಡಿದ್ದು, ಈ ಎಲ್ಲಾ ಹಣಾಹಣಿಗಳಲ್ಲಿ ಭಾರತ ಗೆಲುವು ದಾಖಲಿಸಿದೆ.
ಇದನ್ನೂ ಓದಿ : T20 World Cup, Ind vs Pak: ಪಾಕ್ ವಿರುದ್ಧ ಜೈತ್ರಯಾತ್ರೆ ಮುಂದುವರೆಸುವುದೇ ಭಾರತ..?
ಇಮ್ರಾನ್ ಖಾನ್ ಜೊತೆಗೆ, ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಅಜಮ್(Babar Azam) ಕೂಡ ಭಾರತವನ್ನು ಸೋಲಿಸುವ ಪ್ರತಿಭೆಯನ್ನು ಪಾಕ್ ಟೀಂ ಆಟಗಾರರು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಪಂದ್ಯದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದದ್ದು ನಮ್ಮನ್ನು ಮೀರಿದೆ. ಪಂದ್ಯದ ದಿನದಂದು ನಾವು ನಮ್ಮ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಬಳಸುತ್ತೇವೆ ಇದರಿಂದ ನಾವು ಉತ್ತಮ ಫಲಿತಾಂಶವನ್ನು ಪಡೆಯಬಹುದು" ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.