ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯ ಅಂತ್ಯದೊಂದಿಗೆ ವಿರಾಟ್ ಕೊಹ್ಲಿ ಅವರ ಸೀಮಿತ ಮಾದರಿಯ ನಾಯಕತ್ವವು ಕೂಡ ಕೊನೆಗೊಳ್ಳಲಿದೆ.ಇದಾದ ನಂತರ ನವೆಂಬರ್ 17 ರಿಂದ ಜೈಪುರದಲ್ಲಿ ಪ್ರಾರಂಭವಾಗುವ ಮೂರು T20I ಪಂದ್ಯಗಳಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಒಂದು ವೇಳೆ ಭಾರತ ತಂಡವು ಈಗ ಹೇಗಾದರೂ ಮಾಡಿ ಫೈನಲ್ ಗೆ ಲಗ್ಗೆ ಇಟ್ಟರೆ ನಂತರ ಅವರು ತವರಿನಲ್ಲಿ ನಡೆಯುವ ಟೂರ್ನಿಗೆ ಆಡಲು ಹೆಚ್ಚಿನ ಕಾಲಾವಕಾಶ ಇರುವುದಿಲ್ಲ.ಹಾಗಾಗಿ ಈಗ ಭಾರತ ತಂಡದ್ದು ಬಿಡುವಿಲ್ಲದ ವೇಳಾಪಟ್ಟಿಯಾಗಿದೆ.ಆದ್ದರಿಂದಾಗಿ ಈಗ ಬಿಸಿಸಿಐಯು ಶೀಘ್ರದಲ್ಲೇ ಹೊಸ ಟಿ20 ನಾಯಕನ ಹೆಸರನ್ನು ಘೋಷಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: Viral Video: ಪುಟ್ಟ ಹುಡುಗಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ವೀರೇಂದ್ರ ಸೆಹ್ವಾಗ್ ಫಿದಾ..!
ವಿಶೇಷವೆಂದರೆ ಮುಂಬರುವ ಸರಣಿಯಲ್ಲಿ ಹೊಸ ನಾಯಕ ಮತ್ತು ಹೊಸ ಕೋಚ್ ಇಬ್ಬರೂ ಅಧಿಕಾರವಹಿಸಿಕೊಳ್ಳಲಿದ್ದಾರೆ.ಈಗಾಗಲೇ ಹಲವು ಆಟಗಾರರು ಟಿ20 ಮಾದರಿಯಲ್ಲಿ ಕೆ.ಎಲ್.ರಾಹುಲ್ ಅಥವಾ ರಿಶಬ್ ಪಂತ್ ಗೆ ನಾಯಕತ್ವದ ಅವಕಾಶವನ್ನು ನೀಡಬೇಕು ಎಂದು ಹೇಳುತ್ತಿದ್ದಾರೆ.ಈ ಅಭಿಪ್ರಾಯಗಳ ಬೆನ್ನಲ್ಲೇ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ಮಾತ್ರ ಈ ಇಬ್ಬರೂ ಆಟಗಾರರನ್ನು ಹೊರತುಪಡಿಸಿ ರೋಹಿತ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಏಕೆಂದರೆ ಅವರು ವಿಶೇಷವಾಗಿ ಈ ಸ್ವರೂಪದಲ್ಲಿ ಸಾಬೀತಾದ ನಾಯಕರಾಗಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಶಮಿ ಬೆಂಬಲಿಕ್ಕೆ ಧಾವಿಸಿದ ವೀರೇಂದ್ರ ಸೆಹ್ವಾಗ್, ಭಜ್ಜಿ
ರೋಹಿತ್ ಈ ಹಿಂದೆ 2018 ರ ಏಷ್ಯಾಕಪ್ (50 ಓವರ್) ನಿದಾಹಾಸ್ ಟ್ರೋಫಿ (20 ಓವರ್) ನಲ್ಲಿ ಭಾರತವನ್ನು ಒಂದೆರಡು ಪಂದ್ಯಾವಳಿಗಳಲ್ಲಿ ಗೆಲುವಿನತ್ತ ಮುನ್ನಡೆಸಿದ್ದಾರೆ. ಅದೇ ರೀತಿಯಾಗಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನೆಡೆಸುವ ಮೂಲಕ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ತಮ್ಮ ಫೇಸ್ಬುಕ್ ಶೋ ವಿರುಗಿರಿ ಡಾಟ್ ಕಾಮ್ನಲ್ಲಿ ಮಾತನಾಡಿದ ಸೆಹ್ವಾಗ್,"ನಾಯಕನಾಗಲು ಅನೇಕ ಅಭ್ಯರ್ಥಿಗಳು ಇದ್ದಾರೆ ಎಂದು ನಾನು ಭಾವಿಸುತ್ತೇನೆ, ಆದರೆ ರೋಹಿತ್ ಅತ್ಯುತ್ತಮ ಅಭ್ಯರ್ಥಿಯಾಗಿದ್ದಾರೆ.ಏಕೆಂದರೆ ಅವರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.ಅವರು ಐದು ಬಾರಿ ಐಪಿಎಲ್ ಚಾಂಪಿಯನ್ಶಿಪ್ ಗೆದ್ದಿದ್ದಾರೆ.ಹಾಗಾಗಿ ನನ್ನ ಪ್ರಕಾರ ಟೀಮ್ ಇಂಡಿಯಾದ ಮುಂದಿನ ಟಿ20 ನಾಯಕ ರೋಹಿತ್ ಶರ್ಮಾ ಆಗಿರಬೇಕು" ಎಂದು ಹೇಳಿದರು.
ಇದನ್ನೂ ಓದಿ-Corona Vaccine: ಈ ಲಸಿಕೆಯಿಂದ ಎಚ್ಐವಿ ಅಪಾಯವಿದೆಯೇ? ದಕ್ಷಿಣ ಆಫ್ರಿಕಾದ ನಂತರ, ನಮೀಬಿಯಾದಲ್ಲಿ ಲಸಿಕೆ ನಿಷೇಧ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ