ಮೊಹಮ್ಮದ್ ಶಮಿ ಬೆಂಬಲಿಕ್ಕೆ ಧಾವಿಸಿದ ವೀರೇಂದ್ರ ಸೆಹ್ವಾಗ್, ಭಜ್ಜಿ

ಭಾನುವಾರದಂದು ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್‌ಗಳ ಸೋಲಿನ ನಂತರ ಆನ್‌ಲೈನ್ ಟ್ರೋಲ್‌ಗಳಿಗೆ ಗುರಿಯಾದ ವೇಗಿ ಮೊಹಮ್ಮದ್ ಶಮಿ ಬೆಂಬಲಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ನಿಂತಿದ್ದಾರೆ.

Written by - Zee Kannada News Desk | Last Updated : Oct 25, 2021, 07:26 PM IST
  • ಭಾನುವಾರದಂದು ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್‌ಗಳ ಸೋಲಿನ ನಂತರ ಆನ್‌ಲೈನ್ ಟ್ರೋಲ್‌ಗಳಿಗೆ ಗುರಿಯಾದ ವೇಗಿ ಮೊಹಮ್ಮದ್ ಶಮಿ ಬೆಂಬಲಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ನಿಂತಿದ್ದಾರೆ.
  • ಪಾಕ್ ವಿರುದ್ಧದ ಪಂದ್ಯದಲ್ಲಿ ಶಮಿ 3.5 ಓವರ್‌ಗಳಲ್ಲಿ 0/43 ನೀಡಿದ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ಟ್ರೋಲ್ ಮಾಡಲಾಗುತ್ತಿತ್ತು ,ಈಗ ಇದರ ವಿರುದ್ಧ ಸೆಹ್ವಾಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಶಮಿ ಬೆಂಬಲಿಕ್ಕೆ ಧಾವಿಸಿದ ವೀರೇಂದ್ರ ಸೆಹ್ವಾಗ್, ಭಜ್ಜಿ  title=
Photo Courtesy: Twitter

ನವದೆಹಲಿ: ಭಾನುವಾರದಂದು ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್‌ಗಳ ಸೋಲಿನ ನಂತರ ಆನ್‌ಲೈನ್ ಟ್ರೋಲ್‌ಗಳಿಗೆ ಗುರಿಯಾದ ವೇಗಿ ಮೊಹಮ್ಮದ್ ಶಮಿ ಬೆಂಬಲಕ್ಕೆ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ನಿಂತಿದ್ದಾರೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ಶಮಿ 3.5 ಓವರ್‌ಗಳಲ್ಲಿ 0/43 ನೀಡಿದ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ಟ್ರೋಲ್ ಮಾಡಲಾಗುತ್ತಿತ್ತು ,ಈಗ ಇದರ ವಿರುದ್ಧ ಸೆಹ್ವಾಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮೊಹಮ್ಮದ್ ಶಮಿ (Mohammed Shami) ಮೇಲಿನ ಆನ್‌ಲೈನ್ ದಾಳಿ ಆಘಾತಕಾರಿಯಾಗಿದೆ ಮತ್ತು ನಾವು ಅವರ ಬೆಂಬಲಕ್ಕೆ ನಿಂತಿದ್ದೇವೆ.ಅವರು ಚಾಂಪಿಯನ್ ಮತ್ತು ಭಾರತ ಕ್ಯಾಪ್ ಧರಿಸಿದ ಯಾರೊಬ್ಬರ ಹೃದಯದಲ್ಲಿ ಯಾವುದೇ ಆನ್‌ಲೈನ್ ಜನಸಮೂಹಕ್ಕಿಂತಲೂ ದೊಡ್ಡ ಭಾರತವಿದೆ.ನಿಮ್ಮೊಂದಿಗಿದ್ದೇವೆ ಶಮಿ, ಮುಂದಿನ ಪಂದ್ಯದಲ್ಲಿ ತೋರಿಸಿ ನಿಮ್ಮ ಆಟವನ್ನು" ಎಂದು ಸೆಹ್ವಾಗ್ ಶಮಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಭಾನುವಾರದ ಪಂದ್ಯದಲ್ಲಿ ಭಾರತದ ಎಲ್ಲ ಬೌಲರ್ ಗಳು ಪಾಕ್ ಬ್ಯಾಟ್ಸಮನ್ ಗಳನ್ನು ಔಟ್ ಮಾಡಲು ಹೆಣಗಾಡಿದರು.ಈ ಹಿನ್ನಲೆಯಲ್ಲಿ ಪಾಕಿಸ್ತಾನ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 152 ರನ್ ಗಳ ಗೆಲುವಿನ ದಡ ಸೇರಿತ್ತು.

ಕೇವಲ ಸೆಹ್ವಾಗ್ ಮಾತ್ರವಲ್ಲದೆ ಹರ್ಭಭಜನ್ ಸಿಂಗ್ ಹಾಗೂ ಚಹಾಲ್ ಕೂಡ ಶಮಿ ಬೆಂಬಲಕ್ಕೆ ಧಾವಿಸಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿರುವ ಭಜ್ಜಿ "ನಾವು ನಿಮ್ಮನ್ನು ಪ್ರೀತಿಸುತ್ತೇವೆ ಶಮಿ' ಎಂದು ಟ್ವೀಟ್ ಮಾಡಿದ್ದಾರೆ.ಚಹಾಲ್ ಅವರು ' ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಶಮಿ ಭಯ್ಯಾ ಎಂದು ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News