Indian Railways New Rules: ಟಿಕೆಟ್ ಕಾಯ್ದಿರಿಸುವಾಗ ಈ ವಿಶೇಷ ಕೋಡ್ ನೆನಪಿನಲ್ಲಿಡಿ, ಇಲ್ಲದಿದ್ದರೆ ಸೀಟು ಸಿಗುವುದಿಲ್ಲ

ಭಾರತೀಯ ರೈಲ್ವೆ ಇಲಾಖೆಯು ಸೀಟುಗಳ ಬುಕಿಂಗ್ ಕೋಡ್ ಮತ್ತು ಕೋಚ್ ಕೋಡ್‌ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ.

Written by - Puttaraj K Alur | Last Updated : Nov 6, 2021, 01:29 PM IST
  • ಭಾರತೀಯ ರೈಲ್ವೆ ಇಲಾಖೆಯು ಹಲವು ಹೆಚ್ಚುವರಿ ಕೋಚ್‌ಗಳನ್ನು ರೈಲುಗಳಲ್ಲಿ ಪರಿಚಯಿಸಿದೆ
  • ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ವಿಸ್ಟಾಡೋಮ್ ಕೋಚ್ ಪರಿಚಯಿಸಿದೆ
  • ವಿಸ್ಟಾಡೋಮ್ ರೈಲಿನೊಳಗೆ ಕುಳಿತಾಗ ಪ್ರಯಾಣಿಕರು ಹೊರಗಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು
Indian Railways New Rules: ಟಿಕೆಟ್ ಕಾಯ್ದಿರಿಸುವಾಗ ಈ ವಿಶೇಷ ಕೋಡ್ ನೆನಪಿನಲ್ಲಿಡಿ, ಇಲ್ಲದಿದ್ದರೆ ಸೀಟು ಸಿಗುವುದಿಲ್ಲ title=
ಭಾರತೀಯ ರೈಲ್ವೆಯ ಹೊಸ ನಿಯಮ

ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಸುದ್ದಿಯಿದೆ. ಈಗ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ನೀವು ಕೆಲವು ವಿಶೇಷ ಕೋಡ್‌ಗಳನ್ನು ನೋಡಿಕೊಳ್ಳಬೇಕು. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ ಭಾರತೀಯ ರೈಲ್ವೆಯು(Indian Railways) ಸೀಟುಗಳ ಬುಕಿಂಗ್ ಕೋಡ್ ಮತ್ತು ಕೋಚ್ ಕೋಡ್‌ನಲ್ಲಿ ಕೆಲವು ಪ್ರಮುಖ ಬದಲಾವಣೆ(Indian Railways New Rule)ಗಳನ್ನು ಮಾಡಿದೆ. ಭಾರತೀಯ ರೈಲ್ವೆ ಇಲಾಖೆ ತನ್ನ ರೈಲುಗಳಲ್ಲಿ ಹೊಸ ರೀತಿಯ ಕೋಚ್ ಅನ್ನು ಪರಿಚಯಿಸಿದೆ. ಈ ವಿಶೇಷ ಕೋಡ್ ಮೂಲಕ ಪ್ರಯಾಣಿಕರ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ನಿಮ್ಮ ಆದ್ಯತೆಯ ಆಸನವನ್ನು ನೀವು ಆಯ್ಕೆ ಮಾಡಬಹುದು. ರೈಲ್ವೆ ಇಲಾಖೆಯು ದೇಶಾದ್ಯಂತ ಹಲವು ಮಾರ್ಗಗಳಲ್ಲಿ ವಿಸ್ಟಾಡೋಮ್ ಕೋಚ್‌ಗಳನ್ನು ಪ್ರಾರಂಭಿಸಿದೆ.

ಟಿಕೆಟ್ ಬುಕ್ ಮಾಡುವಾಗ ಈ ಕೋಡ್ ನೆನಪಿನಲ್ಲಿಡಿ

ರೈಲ್ವೆ ಇಲಾಖೆಯು(Indian Railways) ಹಲವು ಹೆಚ್ಚುವರಿ ಕೋಚ್‌ಗಳನ್ನು ರೈಲುಗಳಲ್ಲಿ ಪರಿಚಯಿಸಿದೆ. ಇದು AC-3 ಶ್ರೇಣಿಯ ಆರ್ಥಿಕ ವರ್ಗ(Economy Class of AC-3 Tier)ವನ್ನು ಸಹ ಒಳಗೊಂಡಿದೆ. ಈ ರೀತಿಯ ಕೋಚ್‌ನಲ್ಲಿ 83 ಬರ್ತ್‌ಗಳಿರುತ್ತವೆ. ಇವುಗಳ ಬಾಡಿಗೆಯೂ ತೀರಾ ಕಡಿಮೆಯಾಗಿದೆ.

ಇದನ್ನೂ ಓದಿ: Jan Dhan Account : ಈ ಬ್ಯಾಂಕ್‌ಗಳಲ್ಲಿ 'ಜನ್ ಧನ್ ಅಕೌಂಟ್' ಹೊಂದಿದ್ದರೆ, ಬರೀ ಒಂದು ಮಿಸ್ಡ್ ಕಾಲ್‌ನಲ್ಲಿ ಈ ರೀತಿಯ ಬ್ಯಾಲೆನ್ಸ್ ಪರಿಶೀಲಿಸಬಹುದು!

ವಿಸ್ಟಾಡೋಮ್ ಕೋಚ್ ತುಂಬಾ ವಿಶೇಷವಾಗಿದೆ

ವಾಸ್ತವವಾಗಿ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯು ಈ ರೀತಿಯ ಕೋಚ್ ಅನ್ನು ಪರಿಚಯಿಸಿದೆ. ವಿಸ್ಟಾಡೋಮ್ ಕೋಚ್‌(Vistadome  Coach)ನ ದೊಡ್ಡ ವೈಶಿಷ್ಟ್ಯವೆಂದರೆ ಪ್ರಯಾಣಿಕರು ರೈಲಿನೊಳಗೆ ಕುಳಿತಾಗ ಹೊರಗಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಕೋಚ್‌ಗಳ ಮೇಲ್ಛಾವಣಿಯೂ ಗಾಜಿನಿಂದ ಕೂಡಿರಲಿದೆ. ಭಾರತೀಯ ರೈಲ್ವೆಯು ಪ್ರತಿಯೊಂದು ರಾಜ್ಯದಲ್ಲೂ ಕನಿಷ್ಠ ಇಂತಹ ಒಂದು ರೈಲನ್ನಾದರೂ ಓಡಿಸಲಿದೆ.  ಪ್ರಸ್ತುತ ಈ ವಿಸ್ಟಾಡೋಮ್ ಕೋಚ್ ಮುಂಬೈನ ದಾದರ್‌ನಿಂದ ಗೋವಾದ ಮಡ್‌ಗಾಂವ್‌ಗೆ ಚಲಿಸುತ್ತದೆ.

ಬುಕ್ಕಿಂಗ್ ಹೇಗಿರುತ್ತದೆ?

ಈ ಎಲ್ಲಾ ವರ್ಗಗಳ ಕೋಚ್‌ಗಳು ಮತ್ತು ಸೀಟುಗಳ ಕೋಡ್ ಗಳ ಬಗ್ಗೆ ಎಲ್ಲಾ ವಲಯಗಳ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಮಾಹಿತಿ ನೀಡಲಾಗಿದೆ. ಇದರಡಿ 3ನೇ AC Class ಎಕಾನಮಿ ಕೋಚ್‌ನ ಬುಕಿಂಗ್ ಕೋಡ್ 3E ಆಗಿರುತ್ತದೆ ಮತ್ತು ಕೋಚ್‌ನ ಕೋಡ್ M ಆಗಿರುತ್ತದೆ. ಅದೇ ರೀತಿ ವಿಸ್ಡಮ್ AC ಕೋಚ್‌ನ ಕೋಡ್ ಅನ್ನು EV ಆಗಿ ಇರಿಸಲಾಗಿದೆ. ಯಾವ ಕೋಚ್‌ನ ಬುಕಿಂಗ್ ಕೋಡ್ ಏನು ಅನ್ನೋದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಇದನ್ನೂ ಓದಿ: Drop of Edible Oil : ಪೆಟ್ರೋಲ್-ಡೀಸೆಲ್ ನಂತರ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ! ಎಷ್ಟು ಗೊತ್ತಾ?    

ಹೊಸ ಬುಕಿಂಗ್ ಕೋಡ್ ಮತ್ತು ಕೋಚ್ ಕೋಡ್ ಯಾವುದು?

Coach Class Booking Code Coach Code
Vistadome AC VS  DV 
Sleeper SL S
AC Chaircar  CC C
Third AC 3A B
AC Three Tier Economy  3E M
Second AC 2A A
Garib Rath AC Three Tier  3A G
Garib Rath Chaircar CC J
First AC 1A H
Executive Class EC E
Cognition Class EA K
First Class FC F
Vistadome AC  EV EV

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News