ನವದೆಹಲಿ : ಐಪಿಎಲ್ 2022 (IPL 2022) ಪ್ರಾರಂಭವಾಗುವ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ಬಾರಿಯಂತೆ ಮತ್ತೊಮ್ಮೆ ಎಲ್ಲಾ ತಂಡಗಳು ಆಟಗಾರರ ಮೇಲೆ ಕೋಟ್ಯಂತರ ರೂ. ಸುರಿಯಲಿದೆ. ಮೆಗಾ ಹರಾಜಿನಲ್ಲಿ (IPL mega auction) ಯಾರು ಹೆಚ್ಚು ದುಬಾರಿ ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಕೆಎಲ್ ರಾಹುಲ್ (KL Rahul) ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಅತ್ಯಧಿಕ ಮೊತ್ತ ಹೂಡಿಕೆಯಾಗಲಿದೆ ಎನ್ನಲಾಗಿದೆ. ಇದೆ ವೇಳೆ, ಹರಾಜಿನಲ್ಲಿ ಎಲ್ಲಾ ದಾಖಲೆಗಳನ್ನು ಮುರಿಯಬಲ್ಲ ಮತ್ತೊಬ್ಬ ಆಟಗಾರನಿದ್ದಾನೆ.
ಮುರಿಯಲಿದೆಯೇ ಎಲ್ಲಾ ದಾಖಲೆ ? :
ಐಪಿಎಲ್ 2022 ರ (IPL 2022) ಮೊದಲು ನಡೆಯಲಿರುವ ಮೆಗಾ ಹರಾಜಿನಲ್ಲಿ ಕೆಲವು ದೊಡ್ಡ ಬಿಡ್ಗಳನ್ನು ಕಾಣಬಹುದು. ಅದರಲ್ಲೂ ಟಿ20 ವಿಶ್ವಕಪ್ನಲ್ಲಿ (T20 World cup) ಮಿಂಚು ಹರಿಸಿದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಏಡನ್ ಮಾರ್ಕ್ರಾಮ್ (Aiden Markram) ಅತ್ಯಧಿಕ ಮೊತ್ತಕ್ಕೆ ಮಾರಾಟವಾಗುವ ಸಂಭವ ಇದೆ. T20 ವಿಶ್ವಕಪ್ 2021 ರಲ್ಲಿ ಮಾರ್ಕ್ರಾಮ್ ಕೇವಲ 5 ಪಂದ್ಯಗಳಲ್ಲಿ 162 ರನ್ ಗಳಿಸಿದ್ದಾರೆ. ಈ 5 ಪಂದ್ಯಗಳಲ್ಲಿ ಮಾರ್ಕ್ರಾಮ್ , ಎರಡು ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಬ್ಯಾಟ್ಸ್ಮನ್ನ ವಿಶೇಷವೆಂದರೆ ಮಧ್ಯಮ ಕ್ರಮಾಂಕದಲ್ಲಿ ಬಂದು ಕೆಲವೇ ಓವರ್ಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಚಾಕಚಕ್ಯತೆ ಹೊಂದಿದ್ದಾರೆ.
ಇದನ್ನೂ ಓದಿ : "ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಹೋರಾಟದ ಮನೋಭಾವ ಮತ್ತು ಉತ್ಸಾಹವನ್ನು ತಂದಿದ್ದಾರೆ"
2021 ರಲ್ಲಿ ಪಂಜಾಬ್ ಕಿಂಗ್ಸ್ನ ಭಾಗವಾಗಿದ್ದ ಆಟಗಾರ :
ಮಾರ್ಕ್ರಾಮ್ IPL 2021 ರಲ್ಲಿ ಪಂಜಾಬ್ ಕಿಂಗ್ಸ್ನ (Punjab Kings) ಭಾಗವಾಗಿದ್ದರು. ದ್ವಿತೀಯಾರ್ಧದಲ್ಲಿ ಅವರನ್ನು ಇದ್ದಕ್ಕಿದ್ದಂತೆ ತಂಡಕ್ಕೆ ಸೇರಿಸಲಾಯಿತು. ಪಂಜಾಬ್ ಕಿಂಗ್ಸ್ ಪ್ಲೇಆಫ್ ತಲುಪಲು ಸಾಧ್ಯವಾಗದಿದ್ದರೂ, ಮಾರ್ಕ್ರಾಮ್ ಉತ್ತಮ ಪ್ರದರ್ಶನ ನೀಡಿದ್ದರು. ಪಂಜಾಬ್ ತಂಡ ಅವರನ್ನು ಕೈಬಿಟ್ಟರೆ, ಈ ಬ್ಯಾಟ್ಸ್ಮನ್ ಐಪಿಎಲ್ ಮೆಗಾ ಹರಾಜಿನಲ್ಲಿ (IPL Mega Auction) ದಾಖಲೆಗಳನ್ನು ಮುರಿಯುವುದು ಸ್ಪಷ್ಟವಾಗಿದೆ.
ರಾಹುಲ್-ಹಾರ್ದಿಕ್ ಮೇಲೂ ಕಣ್ಣು :
ಇನ್ನು ಮೆಗಾ ಹರಾಜಿನಲ್ಲಿ ಎಲ್ಲರ ಕಣ್ಣುಗಳು ಅತ್ಯುತ್ತಮ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ (KL Rahul) ಮತ್ತು ವೇಗದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮೇಲೂ ಇರಲಿದೆ. ವರದಿಗಳ ಪ್ರಕಾರ, ಪಂಜಾಬ್ ಕಿಂಗ್ಸ್ ಮುಂದಿನ ವರ್ಷ ಕೆಎಲ್ ರಾಹುಲ್ ಅವರನ್ನು ಕೈಬಿಡಬಹುದು. ಹೀಗಾದಲ್ಲಿ ಈ ಆಟಗಾರನ ವಿಚಾರದಲ್ಲಿ ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ. ಅತ್ಯುತ್ತಮ ಬ್ಯಾಟಿಂಗ್ ಜೊತೆಗೆ ನಾಯಕತ್ವದ ಜವಾಬ್ದಾರಿಯನ್ನೂ ರಾಹುಲ್ ನಿಭಾಯಿಸಬಲ್ಲರು. ಮತ್ತೊಂದೆಡೆ, ಹಾರ್ದಿಕ್ ಕೆಲವೇ ಓವರ್ಗಳಲ್ಲಿ ಆಟದ ದಿಕ್ಕು ಬದಲಾಯಿಸಬಲ್ಲ ಆಟಗಾರ. ಆದರೆ, ಮುಂಬೈ ಮುಂದಿನ ವರ್ಷ ಹಾರ್ದಿಕ್ ಅವರನ್ನು ಕೈಬಿಡಬಹುದು ಎನ್ನಲಾಗಿದೆ.
ಇದನ್ನೂ ಓದಿ : ಆಟಗಾರರರು ಐಪಿಎಲ್ ಗಿಂತ ದೇಶಕ್ಕೆ ಹೆಚ್ಚಿನ ಪ್ರಾಧ್ಯಾನತೆ ನೀಡಬೇಕು-ಕಪಿಲ್ ದೇವ್
ಮತ್ತೆ ನಡೆಯಲಿದೆ ಐಪಿಎಲ್ ಹರಾಜು :
ಐಪಿಎಲ್ 2022 ಕ್ಕೆ ತಾಜಾ ಆಟಗಾರರನ್ನು ಬಿಡ್ ಮಾಡಲಾಗುತ್ತದೆ. ಕೆಲವು ಕ್ರಿಕೆಟಿಗರನ್ನು ಈಗಾಗಲೇ ಉಳಿಸಿಕೊಳ್ಳಲಾಗುತ್ತದೆ. ಅಹಮದಾಬಾದ್ ಮತ್ತು ಲಕ್ನೋ ರೂಪದಲ್ಲಿ ಹೊಸ ತಂಡಗಳು ಸೇರಿಕೊಂಡಿವೆ. ಈ ಎರಡೂ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ಮುಂಚಿತವಾಗಿ ಖರೀದಿಸುವ ಅವಕಾಶ ಪಡೆಯಬಹುದು. ಮೆಗಾ ಹರಾಜಿನಲ್ಲಿ ತಂಡಗಳು ಯಾವ ಆಟಗಾರನ ಮೇಲೆ ಹೆಚ್ಚು ಬಿಡ್ ಮಾಡುತ್ತವೆ ಎಂಬುದನ್ನು ನೋಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.