ಎಚ್ಚರ..! ಈ ‘Paytm’ ಆಪ್ ಬಳಸಿದರೆ ಅನುಭವಿಸಬೇಕಾದೀತು ಜೈಲು ವಾಸ, ಸುರಕ್ಷಿತವಾಗಿರಲು ಹೀಗೆ ಮಾಡಿ

ಸ್ಪೂಫ್ ಪೇಟಿಎಂ ಕೇವಲ ಮೋಜಿಗಾಗಿ ಮಾಡಿದ ಆಪ್ ಆಗಿದೆ. ಆದರೆ ಇತ್ತೀಚೆಗೆ ಜನರು ಆನ್‌ಲೈನ್ ಪೇಮೆಂಟ್ ಮೂಲಕ ಜನರನ್ನು ವಂಚಿಸಲು ಮತ್ತು ಮೋಸ ಮಾಡಲು ಈ ಅಪ್ಲಿಕೇಶನ್ ಅನ್ನು ಬಳಸಲು ಪ್ರಾರಂಭಿಸಿದ್ದಾರೆ.   

Written by - Ranjitha R K | Last Updated : Nov 12, 2021, 02:53 PM IST
  • Paytm ನಕಲಿ ಆಪ್ ನಿಂದ ಇರಲಿ ಎಚ್ಚರ
  • ಹಣಕಾಸಿನ ವಂಚನೆ ನಡೆಸಲಾಗುತ್ತಿದೆ
  • ಜೈಲು ವಾಸ ಅನುಭವಿಸುವ ಸಾಧ್ಯತೆ
ಎಚ್ಚರ..! ಈ ‘Paytm’ ಆಪ್ ಬಳಸಿದರೆ ಅನುಭವಿಸಬೇಕಾದೀತು ಜೈಲು ವಾಸ, ಸುರಕ್ಷಿತವಾಗಿರಲು ಹೀಗೆ ಮಾಡಿ  title=
Paytm ನಕಲಿ ಆಪ್ ನಿಂದ ಇರಲಿ ಎಚ್ಚರ (file photo)

ನವದೆಹಲಿ : ಈಗ ಎಲ್ಲಾ ಕೆಲಸಗಳು ಆನ್‌ಲೈನ್‌ನಲ್ಲಿಯೇ ನಡೆದು ಹೋಗುತ್ತದೆ. ಇದರಲ್ಲಿ ಆನ್‌ಲೈನ್ ಪೇಮೆಂಟ್ ಗಳು ಕೂಡಾ ಸೇರಿವೆ. ಇದಕ್ಕಾಗಿ ಜನರು ಹಲವಾರು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ದೇಶದ ಅತ್ಯಂತ ಜನಪ್ರಿಯ ಆನ್‌ಲೈನ್ ಪೇಮೆಂಟ್ ಅಪ್ಲಿಕೇಶನ್‌ಗಳ ಬಗ್ಗೆಹೇಳುವುದಾದರೆ Paytm ಹೆಸರು ಮೊದಲು ಕೇಳಿಬರುತ್ತದೆ. ಆದರೆ ಇತ್ತೀಚೆಗೆ ‘ಸ್ಪೂಫ್ ಪೇಟಿಎಂ’ (Spoof Paytm) ಹೆಸರಿನ ಡುಪ್ಲಿಕೇಟ್ ಆ್ಯಪ್ ಮುನ್ನೆಲೆಗೆ ಬಂದಿರುವುದು ಗಮನಕ್ಕೆ ಬಂದಿದ್ದು, ಆನ್‌ಲೈನ್ ಪಾವತಿಯಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. 

ಏನಿದು ಸ್ಪೂಫ್ paytm :
ಸ್ಪೂಫ್ ಪೇಟಿಎಂ (Spoof Paytm) ಕೇವಲ ಮೋಜಿಗಾಗಿ ಮಾಡಿದ ಆಪ್ ಆಗಿದೆ. ಆದರೆ ಇತ್ತೀಚೆಗೆ ಜನರು ಆನ್‌ಲೈನ್ ಪೇಮೆಂಟ್ (Online payment) ಮೂಲಕ ಜನರನ್ನು ವಂಚಿಸಲು ಮತ್ತು ಮೋಸ ಮಾಡಲು ಈ ಅಪ್ಲಿಕೇಶನ್ ಅನ್ನು ಬಳಸಲು ಪ್ರಾರಂಭಿಸಿದ್ದಾರೆ. ಈ ಅಪ್ಲಿಕೇಶನ್ ಮೂಲ Paytm ಅಪ್ಲಿಕೇಶನ್‌ನಂತೆ ಕಾಣುತ್ತದೆ. ಪೇಮೆಂಟ್ ರಿಸೀಟ್ ಗಳು ಕೂಡಾ ಒರಿಜಿನಲ್ ಅಪ್ಲಿಕೇಶನ್‌ನಂತೆ   ಕಾಣುತ್ತವೆ.

ಇದನ್ನೂ ಓದಿ : Xiaomi ಸ್ಮಾರ್ಟ್ ವಾಚ್‌ನ ಕ್ರೇಜ್, ನಿಮಿಷಗಳಲ್ಲಿ ದಾಖಲೆಯ ಮಾರಾಟ

ಜೈಲು ತಲುಪಿಸಬಹುದು ಈ ಆಪ್ : 
ಈ ಆ್ಯಪ್ ಮೂಲಕ ಯಾರಿಗಾದರೂ ಮೋಸ ಮಾಡಲು ಪ್ರಯತ್ನಿಸಿದರೆ ಮತ್ತು ಆನ್‌ಲೈನ್ ಪಾವತಿ ವಂಚನೆಯ ಭಾಗವಾಗಿದ್ದರೆ,  ಜೈಲಿಗೆ ಹೋಗಬೇಕಾಗಬಹುದು. ಯಾರಿಗಾದರೂ ವಂಚಿಸಿ ನಿಮ್ಮ ವಿರುದ್ದ ದೂರು ನೀಡಿದರೆ, ಆರ್ಥಿಕ ವಂಚನೆಯ ಅಪರಾಧಕ್ಕಾಗಿ ಜೈಲು ವಾಸ ಅನುಭವಿಸಬೇಕಾಗುತ್ತದೆ. 

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಪಾಯಗಳು
ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ (App download) ಮಾಡುವಲ್ಲಿ ನೀವು ಹೆಚ್ಚಿನ ಅಪಾಯವನ್ನು ಎದುರಿಸಬಹುದು.  ಮೊದಲನೆಯದಾಗಿ, ಅದನ್ನು ಡೌನ್‌ಲೋಡ್ ಮಾಡುವ ವಿಧಾನವು ಸುರಕ್ಷಿತವಾಗಿಲ್ಲದ ಕಾರಣ, ಈ ಪ್ರಕ್ರಿಯೆಯಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್‌ಗಳಿಗೆ ನೀಡಬಹುದು. ಹಾಗೆಯೇ ವೈರಸ್‌ಗಳು (Virus) ಮತ್ತು ಮಾಲ್‌ವೇರ್‌ಗಳು ನಿಮ್ಮ ಫೋನ್‌ಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ಇದನ್ನೂ ಓದಿ : ಸ್ಪೋಟಗೊಂಡ OnePlus Nord 2, ಗಾಯಗೊಂಡ ವ್ಯಕ್ತಿ ವೆಚ್ಚ ಭರಿಸುವುದಾಗಿ ಹೇಳಿದ ಕಂಪನಿ ..!

ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ಡೌನ್‌ಲೋಡ್ ಮಾಡಿಕೊಳ್ಳುವುದು ಒಳ್ಳೆಯದು. ಯಾವಾಗಲೂ Google Play Store ಅಥವಾ App Store ನಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ. APK ಗಳು ಮತ್ತು ಥರ್ಡ್ ಪಾರ್ಟಿ ಮೂಲಕ ಆಪ್ ಡೌನ್ಲೋಡ್ ಮಾಡದಿರುವುದೇ ಸುರಕ್ಷಿತ ಮಾರ್ಗ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News