ನವದೆಹಲಿ: ಮಾರಕ ಕೊರೊನಾ ವೈರಸ್ ನ 3ನೇ ಅಲೆ(Covid 3rd Wave) ತಡೆಯಲು ಲಸಿಕೆಯೊಂದಿಗೆ ಜಗತ್ತು ತಯಾರಿ ನಡೆಸುತ್ತಿದೆ. ಆದರೆ ಕೋವಿಡ್-19 ತನ್ನ ರೂಪವನ್ನು ಬದಲಾಯಿಸಿದ್ದು, ಹೆಚ್ಚು ಅಪಾಯಕಾರಿಯಾಗಿದೆ. ಕೊರೊನಾದ 'ಓಮಿಕ್ರಾನ್' ರೂಪಾಂತರದಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಇದುವರೆಗಿನ ಎಲ್ಲಾ ರೂಪಾಂತರಗಳಿಗಿಂತಲೂ ಇದು ಹೆಚ್ಚು ಅಪಾಯಕಾರಿ ಮತ್ತು ಲಸಿಕೆ ಪಡೆದ ಜನರಿಗೂ ಇದು ತಗಲುವ ಸಂಭವವಿದೆ ಎಂದು ಹೇಳಲಾಗುತ್ತಿದೆ. 'ಒಮಿಕ್ರಾನ್ ವೈರಸ್'(Coronavirus New Variant Omicron) ಎದುರಿಸಲು ಇಡೀ ಜಗತ್ತೇ ಸಜ್ಜಾಗಿದೆ. ಈ ಹೊಸ ರೂಪಾಂತರದ ಬಗ್ಗೆ ಭಾರತವೂ ಚಿಂತಿಸುತ್ತಿದೆ.
ಈ ದೇಶಗಳಲ್ಲಿ ವಿಮಾನ ಹಾರಾಟ ರದ್ದು
ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾದ ಹೊಸ ರೂಪಾಂತರ(Coronavirus New Variant)ವಾದ ಓಮಿಕ್ರಾನ್ ಭಾರತ ಸೇರಿದಂತೆ ಇಡೀ ಪ್ರಪಂಚದ ಆತಂಕವನ್ನು ಹೆಚ್ಚಿಸಿದೆ. ಬ್ರಿಟನ್, ಆಸ್ಟ್ರಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ನೆದರ್ಲ್ಯಾಂಡ್ಸ್ ಆಫ್ರಿಕನ್ ದೇಶಗಳಿಂದ ಬರುವ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಅಮೆರಿಕ, ಸೌದಿ ಅರೇಬಿಯಾ, ಶ್ರೀಲಂಕಾ, ಬ್ರೆಜಿಲ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ ಹಲವಾರು ಇತರ ದೇಶಗಳು ಸಹ ವಿಮಾನಗಳ ಹಾರಾಟವನ್ನು ನಿಷೇಧಿಸಲು ನಿರ್ಧರಿಸಿವೆ.
ಇದನ್ನೂ ಓದಿ: IMD Alert For Heavy Rainfall: 8 ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಕೊರೊನಾ(CoronaVirus)ದ ಹೊಸ ರೂಪಾಂತರ ಓಮಿಕ್ರಾನ್ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿದೇಶಿ ವಿಮಾನಗಳಿಗೆ ನೀಡಲಾದ ಸಡಿಲಿಕೆಯನ್ನು ಪರಿಶೀಲಿಸಲು ಮತ್ತು ಹೆಚ್ಚಿನ ನಿಗಾ ವಹಿಸುವಂತೆ ಪ್ರಧಾನಿ ಮೋದಿ ಸೂಚನೆಗಳನ್ನು ನೀಡಿದ್ದಾರೆ.
'ಒಮಿಕ್ರಾನ್'(Omicron)ನ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಅನೇಕ ರಾಜ್ಯಗಳು ಮತ್ತೆ ಕಟ್ಟುನಿಟ್ಟಿನ ಕೊರೊನಾ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿವೆ. ದಕ್ಷಿಣ ಆಫ್ರಿಕಾ ಸೇರಿದಂತೆ ವಿದೇಶದಿಂದ ಮುಂಬೈಗೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾಗುತ್ತದೆ. ಕರ್ನಾಟಕ ಸರ್ಕಾರ ಸೇರಿದಂತೆ ಅನೇಕ ರಾಜ್ಯಗಳು ಕೂಡ ಹೊಸ ವೈರಸ್ ಕುರಿತು ಚರ್ಚಿಸಲು ಸಭೆ ಕರೆದಿವೆ.
ಓಮಿಕ್ರಾನ್ ರೂಪಾಂತರ ಏಕೆ ಹೆಚ್ಚು ಮಾರಕ?
ಕೊರೊನಾ ಈ ರೂಪಾಂತರವು ಹೆಚ್ಚು ಅಪಾಯಕಾರಿಯಾಗಿದೆಯಂತೆ. ಏಕೆಂದರೆ ಇದು 50ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಇದು ಅತ್ಯಂತ ವೇಗವಾಗಿ ಹರಡುವ ಸಾಧ್ಯತೆ ಇದ್ದು, 'ಓಮಿಕ್ರಾನ್'(COVID-19 New Variant)ಬಗ್ಗೆ ಪ್ರತಿಯೊಬ್ಬರೂ ಹೆಚ್ಚು ಜಾಗರೂಕರಾಗಿರಬೇಕು. ಪ್ರಪಂಚದಾದ್ಯಂತ ಕೊರೊನಾದ ಹೊಸ ರೂಪಾಂತರ ಓಮಿಕ್ರಾನ್ ಭೀತಿ ಉಂಟಾಗಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ, ಆದರೆ ಇವರಲ್ಲಿ ಓಮಿಕ್ರಾನ್ ವೇರಿಯಂಟ್ ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ.
ಇದನ್ನೂ ಓದಿ: ಸರ್ಕಾರದ ಸೂಪರ್ಹಿಟ್ ಯೋಜನೆ: 1 ರೂ. ಹಾಕಿ 15 ಲಕ್ಷ ಪಡೆಯಿರಿ, ತಕ್ಷಣವೇ ಅರ್ಜಿ ಸಲ್ಲಿಸಿ
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ‘ನ.26ರವರೆಗೆ ಒಟ್ಟು 94 ಜನರು ದಕ್ಷಿಣ ಆಫ್ರಿಕಾ(South Africa)ದಿಂದ ಬಂದಿದ್ದು, ಈ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇಬ್ಬರೂ ನ.11 ಮತ್ತು 20 ರಂದು ಬಂದಿದ್ದರು. ಜನರು ಯಾವುದೇ ರೀತಿ ಭಯಪಡುವ ಅಗತ್ಯವಿಲ್ಲ. Omicron ಅಪಾಯದ ಮಧ್ಯೆಯೇ ಜನರು ಹೆಚ್ಚು ಜಾಗರೂಕರಾಗಿರಿ ಮತ್ತು ಸಾಧ್ಯವಾದಷ್ಟು ಬೇಗ ಲಸಿಕೆಯ ಎರಡೂ ಡೋಸ್ಗಳನ್ನು ಪಡೆಯುವಂತೆ ICMR ಸಲಹೆ ನೀಡಿದೆ. ಹೊಸ ಕೊರೊನಾ ತಡೆಗಟ್ಟಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು, ನಮ್ಮ ನಮ್ಮ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇವುಗಳೇ ನಮ್ಮ ಜೀವ ಉಳಿಸುವ ಏಕೈಕ ಮಾರ್ಗವಾಗಿವೆ ಎಂದು ವೈದ್ಯರು ಮತ್ತು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.