ನವದೆಹಲಿ : COVID-19 ಸಮಯದಲ್ಲಿ ನಾಗರಿಕರಿಗೆ ಆಮ್ಲಜನಕವನ್ನು ಒದಗಿಸುವ ನೆಪದಲ್ಲಿ ವಂಚಿಸುತ್ತಿದ್ದ ಗುಂಪನ್ನು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕ ಸೆರೆಹಿಡಿದಿದೆ. ಇದುವರೆಗೆ ಒಟ್ಟು ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬ Proclaimed Offender ಎಂದು ತಿಳಿದುಬಂದಿದೆ.
ಪತ್ನಿಗೆ ಆಕ್ಸಿಜನ್ ಸಿಲಿಂಡರ್ (Oxygen cylinder) ಕೊಡಿಸಲು ಆರೋಪಿಯನ್ನು ಸಂಪರ್ಕಿಸಿದಾಗ 25,000 ರೂಪಾಯಿ ಪಡೆದಿದ್ದ. ಆದರೆ ಸಿಲಿಂಡರ್ ನೀಡಿಲ್ಲ ಮಾತ್ರವಲ್ಲ ಹಣ ಕೂಡಾ ವಾಪಸ್ ನೀಡಿಲ್ಲ ಎಂದು ದೂರುದಾರರು ತಿಳಿಸಿದ್ದರು. ಪ್ರಾಥಮಿಕ ವಿಚಾರಣೆ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು (Police) ಹೇಳಿದ್ದಾರೆ.
ಇದನ್ನೂ ಓದಿ : ಆತಂಕ ಹೆಚ್ಚಿಸುತ್ತಿದೆ 'ಓಮಿಕ್ರಾನ್', ಪ್ರಯಾಣ ನಿಯಮಗಳನ್ನು ಬಿಗಿಗೊಳಿಸಿದ ಭಾರತ, COVID ನೆಗೆಟಿವ್ ವರದಿ ಕಡ್ಡಾಯ
ದೂರವಾಣಿ ಸಂಖ್ಯೆಗಳ ತಾಂತ್ರಿಕ ತನಿಖೆ ಮತ್ತು ಹಣದ ಜಾಡು ಹಿಡಿದ ಪೊಲೀಸರು (Police), ಮೂವರು ಆರೋಪಿಗಳನ್ನು ಬಿಹಾರದಲ್ಲಿ ಬಂಧಿಸಿದ್ದಾರೆ. ತನಿಖೆಯ ವೇಳೆ ಅವರು ಈಗಾಗಲೇ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಗ್ಯಾಂಗ್ ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೇರೆ ಬೇರೆ ಮಾಡ್ಯೂಲ್ಗಳನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ತನಿಖೆಯ ವೇಳೆ ಹೆಚ್ಚಿನ ಸಾಕ್ಷಿಗಳು ಲಭಿಸಿದ್ದು, ಬಿಹಾರ ಮತ್ತು ಪಶ್ಚಿಮ ಬಂಗಾಳದಿಂದ (West Bengal) ಇನ್ನೂ ಆರು ಜನರನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕ್ಸಿಜನ್ ಸಿಲಿಂಡರ್ಗಳನ್ನು ಮನೆಗೆ ತಲುಪಿಸಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ (Social media) ತಮ್ಮ ಫೋನ್ ನಂಬರ್ಗಳನ್ನು ಆರೋಪಿಗಳು ಹರಿಬಿಟ್ಟಿದ್ದರು. ಗ್ಯಾಂಗ್ ತನ್ನ ಗ್ರಾಹಕರನ್ನು ಟೆಲಿ-ಕಾಲಿಂಗ್ ಮೂಲಕ ಸಂಪರ್ಕಿಸುತ್ತಿತ್ತು. ಸಿಲಿಂಡರ್ಗಳನ್ನು ಮನೆಗೆ ತಲುಪಿಸಲು ಮುಂಗಡವಾಗಿ ಹಣವನ್ನು ಕಳುಹಿಸುವಂತೆ ಗ್ರಾಹಕರಿಗೆ ಹೇಳಲಾಗುತ್ತಿತ್ತು.
ಇದನ್ನೂ ಓದಿ : PM Kisan Scheme Update: Good News - ಪಿಎಂ ಕಿಸಾನ್ ನಿಧಿ ಕುರಿತು ಬಿಗ್ ಅಪ್ಡೇಟ್, ಯಾವಾಗ ಖಾತೆ ಸೇರಲಿದೆ ಹಣ?
ಈ ಗ್ಯಾಂಗ್ ನಕಲಿ ಖಾತೆಗಳನ್ನು ನಿರ್ವಹಿಸುತ್ತಿತ್ತು. ಪಡೆದ ಹಣವನ್ನು ಈ ನಕಲಿ ಖಾತೆಗಳಿಗೆ (Fake account) ಜಮಾ ಮಾಡುತ್ತಿದ್ದರು. ಪೊಲೀಸರ ಜಾಲದಿಂದ ತಪ್ಪಿಸಿಕೊಳ್ಳಲು ಇಂತಹ ಹಲವು ನಕಲಿ ಖಾತೆಗಳಲ್ಲಿ ಹಣ ಚಲಾವಣೆ ಮಾಡುತ್ತಿದ್ದರು ಎನ್ನಲಾಗಿದೆ.
ಬಂಧಿತರಿಂದ ಒಂಬತ್ತು ಮೊಬೈಲ್ ಫೋನ್ ಗಳು, ಒಂದು ಲ್ಯಾಪ್ ಟಾಪ್ (Laptop), 11 ಸಿಮ್ ಕಾರ್ಡ್ ಗಳು ಮತ್ತು ಏಳು ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಒದಗಿಸಿದ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ