ಈ ರಾಶಿಯವರಿಗೆ ಅತ್ಯಂತ ಕಠಿಣವಾಗಿರಲಿದೆ 2022, ಎದುರಿಸಬೇಕಾದೀತು ಆರ್ಥಿಕ ನಷ್ಟ

ಸಾಮಾನ್ಯವಾಗಿ ತಮ್ಮ ಹೊಸ ವರ್ಷದ ರಾಶಿ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2022 ರ ಜಾತಕದ ಪ್ರಕಾರ, ತುಲಾ ರಾಶಿಯವರಿಗೆ ಹೊಸ ವರ್ಷವು ವಿಶೇಷವಾಗಿರಲಿದೆ.  

Written by - Ranjitha R K | Last Updated : Dec 10, 2021, 03:03 PM IST
  • ಆರ್ಥಿಕ ನಷ್ಟ ಕಾಡಲಿದೆ
  • ಉದ್ಯೋಗ ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗಬಹುದು
  • 2022 ಸವಾಲುಗಳಿಂದ ತುಂಬಿರುತ್ತದೆ
 ಈ ರಾಶಿಯವರಿಗೆ ಅತ್ಯಂತ ಕಠಿಣವಾಗಿರಲಿದೆ 2022, ಎದುರಿಸಬೇಕಾದೀತು ಆರ್ಥಿಕ ನಷ್ಟ title=
Horoscope 2022 (file photo)

ನವದೆಹಲಿ : ಹೊಸ ವರ್ಷದ ಆರಂಭಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಹೊಸ ವರ್ಷವು ಕೆಲವರಿ ಜೀವನದಲ್ಲಿ ಸಂತೋಷವನ್ನು ಹೊತ್ತು ತಂದರೆ, ಕೆಲವರ ಜೀವನದಲ್ಲಿ ಸಮಸ್ಯೆಗಳನ್ನೇ ತರುತ್ತದೆ. ಸಾಮಾನ್ಯವಾಗಿ ತಮ್ಮ ಹೊಸ ವರ್ಷದ ರಾಶಿ (new year horoscope) ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2022 ರ ಜಾತಕದ ಪ್ರಕಾರ, ತುಲಾ ರಾಶಿಯವರಿಗೆ (new year horoscope libra) ಹೊಸ ವರ್ಷವು ವಿಶೇಷವಾಗಿರಲಿದೆ. 

ತುಲಾ ಉದ್ಯೋಗ ಜಾತಕ 2022 : 
ಹೊಸ ವರ್ಷವು (new year horoscope) ವೃತ್ತಿಜೀವನ ಸವಾಲುಗಳಿಂದ ತುಂಬಿರುತ್ತದೆ. ವ್ಯಾಪಾರ ಮಾಡುವವರು ತಮ್ಮ ಶ್ರಮದ ಫಲವನ್ನು ಪಡೆಯಲು ಕೂಡಾ ತೊಂದರೆ ಎದುರಿಸಬೇಕಾಗುತ್ತದೆ. ಅಲ್ಲದೆ, ಪಾಲುದಾರಿಕೆ ಕೆಲಸದಲ್ಲಿ ಪಾಲುದಾರರಿಂದ ದೂರ ಉಳಿಯುವುದು ಒಳ್ಳೆಯದು. ಉದ್ಯೋಗಸ್ಥರು ಕಚೇರಿಯಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಿ. ತಪ್ಪು ಮಾಡಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದರೆ ಭಾರೀ ಬೆಲೆ ತೆರಬೇಕಾಗಿ ಬರಬಹುದು. 

ಇದನ್ನೂ ಓದಿ : Shani Prakopa: ಈ 4 ರಾಶಿಯ ಜನರ ಮೇಲೆ ಶನಿಯ ಪ್ರಕೋಪ, ಇಲ್ಲಿದೆ ಪರಿಹಾರ

ತುಲಾ ಹಣಕಾಸು ಜಾತಕ 2022 :
2022 ರ (2022 horoscope) ಆರಂಭದಲ್ಲಿ ಆರ್ಥಿಕ ಲಾಭವಿರುತ್ತದೆ. ಆದರೆ ವರ್ಷದ ಮಧ್ಯದಲ್ಲಿ ಅನವಶ್ಯಕ ಖರ್ಚುಗಳಿಂದ ಆರ್ಥಿಕ ನಷ್ಟ ಉಂಟಾಗಬಹುದು. ಯಾವುದೇ ಹೊಸ ಕೆಲಸ ಅಥವಾ ಪಾಲುದಾರಿಕೆ ಕೆಲಸದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಸಾಕಷ್ಟು ಆರ್ಥಿಕ ನಷ್ಟವಾಗಬಹುದು. 

ತುಲಾ ಕೌಟುಂಬಿಕ ಜೀವನ :
ಹೊಸ ವರ್ಷದಲ್ಲಿ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳಿರುತ್ತವೆ. ಕೆಲಸದಲ್ಲಿ ಹೆಚ್ಚು ನಿರತರಾಗಿರುವುದರಿಂದ ಕುಟುಂಬಕ್ಕೆ ಸಮಯನಿಡುವುದು ಸಾಧ್ಯವಾಗುವುದಿಲ್ಲ. ಇದರಿಂದ ಸಂಗಾತಿಯೊಂದಿಗೆ ವೈಮನಸ್ಸು ಹೆಚ್ಚಾಗುತ್ತದೆ. ಇದಲ್ಲದೇ ರಾಹು-ಕೇತುಗಳ (rahu-ketu) ಅಶುಭ ಪ್ರಭಾವದಿಂದ ಆರೋಗ್ಯಕ್ಕಾಗಿ ಸಾಕಷ್ಟು ಹಣ ವ್ಯಯವಾಗಲಿದೆ. 

ಇದನ್ನೂ ಓದಿ Mercury Transit 2021: ಬುಧ ರಾಶಿ ಪರಿವರ್ತನೆಯಿಂದ ಮುಂದಿನ 21 ದಿನಗಳವರೆಗೆ 7 ರಾಶಿಯವರಿಗೆ ಭಾರೀ ಅದೃಷ್ಟ

ತುಲಾ ಪ್ರೇಮ ಜೀವನ ಹೇಗಿರಲಿದೆ ? :
ಹೊಸ ವರ್ಷವು ಪ್ರೀತಿಯ ಜೀವನಕ್ಕೆ ವಿಶೇಷವಾಗಿರುತ್ತದೆ. ಅವಿವಾಹಿತರು 2022ರಲ್ಲಿ ವಿವಾಹವಾಗಲಿದ್ದಾರೆ. ವೈವಾಹಿಕ ಜೀವನ (married life) ಆಹ್ಲಾದಕರ ಆನಂದ ಸಿಗಲಿದೆ. ಪ್ರೇಮಿಗಳು ತಮ್ಮ ಪ್ರೇಮ ಸಂಗಾತಿಯೊಂದಿಗಿನ ಸಂಭಾಷಣೆಯಲ್ಲಿ ಸಂಯಮವನ್ನು ಅನುಸರಿಸಬೇಕಾಗುತ್ತದೆ. ವಿವಾಹಿತರಿಗೆ ಸಂತಾನ ಸುಖ ಸಿಗಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News