ನವದೆಹಲಿ: Unique Health Card Under National Digital Health Mission - ಇದೀಗ ಆಧಾರ್ನಂತೆಯೇ ಎಲ್ಲರಿಗೂ ಕೂಡ ಆರೋಗ್ಯ ಕಾರ್ಡ್ ಕೂಡ ಸಿಗಲಿದೆ. ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ, ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟ ಆರೋಗ್ಯ ಕಾರ್ಡ್ (Health Card) ನೀಡಲು ಹೊರಟಿದೆ. ಇದು ಸಂಪೂರ್ಣವಾಗಿ ಡಿಜಿಟಲ್ ಕಾರ್ಡ್ ಆಗಿದ್ದು ಅದು ಆಧಾರ್ ಕಾರ್ಡ್ನಂತೆಯೇ ಇರಲಿದೆ. ಆಧಾರ್ ಕಾರ್ಡ್ನಂತೆ, ನೀವು ಅದರಲ್ಲಿ ಒಂದು ಸಂಖ್ಯೆಯನ್ನು ಪಡೆಯುವಿರಿ. ಅದು ಆರೋಗ್ಯ ಕ್ಷೇತ್ರದಲ್ಲಿ ಆ ವ್ಯಕ್ತಿಯನ್ನು ಗುರಿತನ್ನು ಹೇಳಲಿದೆ. ಇದರೊಂದಿಗೆ, ವೈದ್ಯರು ನಿಮ್ಮ ಸಂಪೂರ್ಣ ಆರೋಗ್ಯ ದಾಖಲೆಯನ್ನು ಸಹ ತಿಳಿದುಕೊಳ್ಳಲಿದ್ದಾರೆ.
ವಿಶಿಷ್ಟ ಹೆಲ್ತ್ ಕಾರ್ಡ್ ತುಂಬಾ ಉಪಯೋಗಕಾರಿಯಾಗಿದೆ (Unique Health Card Health Record)
ಈ ವಿಶಿಷ್ಟ ಕಾರ್ಡ್ನಿಂದ ಯಾವುದೇ ಓರ್ವ ವ್ಯಕ್ತಿಗೆ ಎಲ್ಲಿ ಚಿಕಿತ್ಸೆ ನೀಡಲಾಗಿದೆ ಎಂಬುದು ತಿಳಿಯಲಿದೆ. ಅಲ್ಲದೆ, ವ್ಯಕ್ತಿಯ ಆರೋಗ್ಯಕ್ಕೆ (Health News In Kannada) ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಈ ವಿಶಿಷ್ಟ ಆರೋಗ್ಯ ಕಾರ್ಡ್ನಲ್ಲಿ ದಾಖಲಿಸಲಾಗುತ್ತದೆ. ಈ ಕಾರಣದಿಂದಾಗಿ, ರೋಗಿಯು ತನ್ನೊಂದಿಗೆ ಫೈಲ್ ಅನ್ನು ಎಲ್ಲೆಡೆ ತೆಗೆದುಕೊಂಡು ಸಾಗಿಸಬೇಕಾಗಿಲ್ಲ. ವೈದ್ಯರು ಅಥವಾ ಆಸ್ಪತ್ರೆಯು ರೋಗಿಯ ವಿಶಿಷ್ಟ ಆರೋಗ್ಯ ID ಯನ್ನು ನೋಡುವ ಮೂಲಕ ಅವರ ಸ್ಥಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ ಮತ್ತು ನಂತರ ಈ ಆಧಾರದ ಮೇಲೆ ಹೆಚ್ಚಿನ ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಈ ಕಾರ್ಡ್ನೊಂದಿಗೆ, ವ್ಯಕ್ತಿಯು ಸರ್ಕಾರದ ಯೋಜನೆಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಆಯುಷ್ಮಾನ್ ಭಾರತ್ ಅಡಿಯಲ್ಲಿ ರೋಗಿಗೆ ಚಿಕಿತ್ಸಾ ಸೌಲಭ್ಯಗಳು ಸಿಗುತ್ತವೆಯೇ ಅಥವಾ ಇಲ್ಲವೇ ಎಂಬುದು ಈ ವಿಶಿಷ್ಟ ಕಾರ್ಡ್ ಮೂಲಕ ತಿಳಿಯಲಿದೆ
ಈ ವಿಶಿಷ್ಟ ಕಾರ್ಡ್ ನಲ್ಲಿ ಏನನ್ನು ಒಳಗೊಂಡಿರಲಿದೆ
ಆಧಾರ್ ಕಾರ್ಡ್ನಂತೆ (Aadhaar Card), ವಿಶಿಷ್ಟ ಆರೋಗ್ಯ ಐಡಿ ಅಡಿಯಲ್ಲಿ, ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾಬೇಸ್ ಅನ್ನು ಸಿದ್ಧಪಡಿಸಲಿದೆ. ಈ ಐಡಿಯೊಂದಿಗೆ, ಎಲ್ಲಾ ವಿವರಗಳನ್ನು ಆ ವ್ಯಕ್ತಿಯ ವೈದ್ಯಕೀಯ ದಾಖಲೆಯಲ್ಲಿ ಇರಿಸಲಾಗುತ್ತದೆ. ಈ ಐಡಿ ಸಹಾಯದಿಂದ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ದಾಖಲೆಯನ್ನು ನೋಡಬಹುದು. ಆ ವ್ಯಕ್ತಿಯು ವೈದ್ಯರ ಬಳಿಗೆ ಹೋದರೆ, ಅವನು ತನ್ನ ಆರೋಗ್ಯ ID (Health Id) ಅನ್ನು ತೋರಿಸಬೇಕು. ಇದಕ್ಕೂ ಮುನ್ನ ಯಾವ ಚಿಕಿತ್ಸೆ ನೀಡಲಾಗಿತ್ತು, ಯಾವ ವೈದ್ಯರ ಸಲಹೆ ಪಡೆದು ಈ ಹಿಂದೆ ಯಾವ ಔಷಧಗಳನ್ನು ನೀಡಲಾಗಿತ್ತು ಎಂಬುದು ಇದರಿಂದ ತಿಳಿದು ಬರಲಿದೆ. ಈ ಸೌಲಭ್ಯದ ಮೂಲಕ, ಸರ್ಕಾರವು ಚಿಕಿತ್ಸೆಯಲ್ಲಿ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ-Benefits Of Jaggery : ಚಳಿಗಾಲದ ಈ ಸಮಯದಲ್ಲಿ ಬೆಲ್ಲ ಸೇವಿಸಿ, ಈ ರೋಗಗಳಿಂದ ದೂರವಿರಿ!
ಹೆಲ್ತ್ ಐಡಿಯಲ್ಲಿ ಈ ದಾಖಲೆಗಳನ್ನು ಸಂಗ್ರಹಿಸಲಾಗುವುದು
ಇದರಲ್ಲಿ ವ್ಯಕ್ತಿಯ ಗುರುತಿನ ಚೀಟಿಯನ್ನು ರಚಿಸಿ, ಆತನಿಂದ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಎರಡು ದಾಖಲೆಗಳ ಸಹಾಯದಿಂದ ವಿಶಿಷ್ಟವಾದ ಆರೋಗ್ಯ ಕಾರ್ಡ್ ಅನ್ನು ರಚಿಸಲಾಗುತ್ತದೆ. ಇದಕ್ಕಾಗಿ, ಸರ್ಕಾರವು ಆರೋಗ್ಯ ಪ್ರಾಧಿಕಾರವನ್ನು ರಚಿಸುತ್ತದೆ, ಅದು ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತದೆ. ಆರೋಗ್ಯ ID ಮಾಡಬೇಕಾದ ವ್ಯಕ್ತಿಯ ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲು ಆರೋಗ್ಯ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗುತ್ತದೆ.
ಇದನ್ನೂ ಓದಿ- Benefits Of Milk : ದಿನದ ಈ ಸಮಯದಲ್ಲಿ ಹಾಲು ಕುಡಿದರೆ ಆರೋಗ್ಯಕ್ಕಿದೆ ಈ 5 ಅದ್ಭುತ ಲಾಭಗಳು!
ಇದರ ಆಧಾರದ ಮೇಲೆ ಮುಂದಿನ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಅಥವಾ ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ನೋಂದಣಿಗೆ ಲಿಂಕ್ ಮಾಡಲಾದ ಆರೋಗ್ಯ ಪೂರೈಕೆದಾರರು ಯಾವುದೇ ಓರ್ವ ವ್ಯಕ್ತಿಯ ಆರೋಗ್ಯ ID ಅನ್ನು ರಚಿಸಬಹುದು. https://healthid.ndhm.gov.in/register ನಲ್ಲಿ ನಿಮ್ಮ ಸ್ವಂತ ದಾಖಲೆಗಳನ್ನು ನೋಂದಾಯಿಸುವ ಮೂಲಕ ಕೂಡ ನೀವು ನಿಮ್ಮ ಆರೋಗ್ಯ ಐಡಿಯನ್ನು ರಚಿಸಬಹುದು.
ಇದನ್ನೂ ಓದಿ-Health Tips: ದಾಳಿಂಬೆ ಸಿಪ್ಪೆಯಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.