Viral Video: ಸಾಮಾನ್ಯವಾಗಿ ಬಹುತೇಕ ಹಾವುಗಳು ಮೊಟ್ಟೆ ಇಡುತ್ತವೆ ಮತ್ತು ಸ್ವಲ್ಪ ಸಮಯದ ನಂತರ ಆ ಮೊಟ್ಟೆಗಳಿಂದ ಹಾವಿನ ಮರಿಗಳು ಹೊರಬರುತ್ತವೆ, ಆದರೆ ಪ್ರಕೃತಿಯಲ್ಲಿ ಕೆಲವು ಆಶ್ಚರ್ಯಕರ ಸಂಗತಿಗಳು ಆಗಾಗ್ಗೆ ಕಂಡು ಬರುತ್ತವೆ. ಭಾರೀ ಗಾತ್ರದ ಹಾವೊಂದು ಮಗುವಿಗೆ ಜನ್ಮ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೆಣ್ಣು ಹಾವು ಮರಿಗೆ ಜನ್ಮ ನೀಡುತ್ತಿರುವ ವಿಡಿಯೋ ಟ್ವಿಟರ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಒಂದು ನಿಮಿಷದ ಈ ಅಪರೂಪದ ವೀಡಿಯೋ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದು, ಜನರು ಅದನ್ನು ಹೆಚ್ಚಾಗಿ ರೀಟ್ವೀಟ್ ಮಾಡುತ್ತಿದ್ದಾರೆ.
ಹೆಣ್ಣು ಹಾವಿನ ಹೊಟ್ಟೆಯಿಂದ ತಾನಾಗಿಯೇ ಹೊರಬರುವ ಹಾವಿನ ಮರಿ:
ಹಸಿರು ಬಣ್ಣದ ಹಾವು ಕಂದು ಬಣ್ಣದ ಮತ್ತೊಂದು ವಿಕಸನಗೊಂಡ ಮರಿಗೆ ಜನ್ಮ ನೀಡುತ್ತಿರುವ ವಿಡಿಯೋವೊಂದು (Snake Baby Birth Video) ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಇದನ್ನೂ ಓದಿ- Crocodile Fish Viral Video: ಬೇಟೆಯಾಡಿದ ಹಸಿದ ಮೊಸಳೆಗೆ 860 ವೋಲ್ಟ್‌ಗಳ ಶಾಕ್ ನೀಡಿದ ಮೀನು! ವಾಚ್ ವೈರಲ್ ವಿಡಿಯೋ
ತಾನಾಗಿಯೇ ಹೊರಬರುತ್ತಿರುವ ನವಜಾತ ಹಾವು :
ಮರದ ಕೊಂಬೆಯ ಮೇಲೆ ಹಸಿರು ಬಣ್ಣದ ಹೆಣ್ಣು ಹಾವು ಆರಾಮವಾಗಿ ಕುಳಿತಿರುವುದು ವಿಡಿಯೋದಲ್ಲಿ (Snake Viral Video) ಕಂಡು ಬಂದಿದೆ. ಅದರ ನಂತರ ಹಾವಿನ ಹೊಟ್ಟೆಯಿಂದ ಮರಿ ಜನಿಸುತ್ತಿದೆ. ವಿಶೇಷವೆಂದರೆ ಈ ಹಾವಿನ ಮರಿ ಹಾವಿನ ಹೊಟ್ಟೆಯಿಂದ ತಾನಾಗಿಯೇ ಹೊರಬಂದು ಕೊಂಬೆಯ ಮೇಲೆ ಹೋಗುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು.
🐍
Most snakes are oviparous; they reproduce by laying eggs. But some species give birth to live young and no eggs are involved at any stage of development. A third group of snakes develops non-shelled eggs inside their bodies, where the young develop.#nature 🎥 IG biltekpluss pic.twitter.com/X5yq4Y5BlD
— Alexander Verbeek 🌍 (@Alex_Verbeek) December 29, 2021
ಇದನ್ನೂ ಓದಿ- Funny Viral Video: ಪತಿರಾಯನ ಚೇಷ್ಟೆ! ಅತ್ತೆ ತಲೆ ಮೇಲೆ ಮೊಟ್ಟೆ ಹೊಡೆದ ಸೊಸೆ!
ದಕ್ಷಿಣ ಅಮೆರಿಕಾದ ಎಮರಾಲ್ಡ್ ಟ್ರೀ ಬೋವಾ ಹಾವು:
ಈ ವೀಡಿಯೊದ ಬಗ್ಗೆ ಸೈನ್ಸ್ ಗರ್ಲ್ ಎಂಬ ಬಳಕೆದಾರರು ಇದು ಎಮರಾಲ್ಡ್ ಟ್ರೀ ಬೋವಾ ಹಾವು ಎಂದು ಹೇಳಿದ್ದಾರೆ, ಇದು ದಕ್ಷಿಣ ಅಮೆರಿಕಾದ ಭಾರೀ ಮಳೆಯ ಪ್ರದೇಶಗಳಲ್ಲಿ ಎತ್ತರದ ಮರಗಳಲ್ಲಿ ಕಂಡುಬರುತ್ತದೆ. ವಾಸ್ತವವಾಗಿ, ಈ ಮರಿಯು ಹಾವಿನ ಭ್ರೂಣದಲ್ಲಿ ಬೆಳವಣಿಗೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.