Viral video:ಈ ಬೀದಿ ಬದಿ ವ್ಯಾಪಾರಿ ತಯಾರಿಸುತ್ತಾರೆ ಮಿರಿಂಡಾ ಗೊಲ್ಗಪ್ಪಾ! ನೀವು ಎಂದಾದರೂ ಸವಿದಿದ್ದೀರಾ?

Mirinda golgappa: ಚಟೋರೆ ಬ್ರದರ್ಸ್ (Chatore Broothers) ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಗೋಲ್ಗಪ್ಪ ಮಾರಾಟಗಾರ ಮಿರಿಂಡಾ ಗೋಲ್ಗಪ್ಪ ತಯಾರಿಸುತ್ತಾನೆ.

Edited by - Zee Kannada News Desk | Last Updated : Dec 19, 2021, 05:22 PM IST
  • ಚಟೋರೆ ಬ್ರದರ್ಸ್ ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಪೋಸ್ಟ್ ಮಾಡಲಾದ ವಿಡಿಯೋ
  • ಈ ಬೀದಿ ಬದಿ ವ್ಯಾಪಾರಿ ತಯಾರಿಸುತ್ತಾರೆ ಮಿರಿಂಡಾ ಗೊಲ್ಗಪ್ಪಾ
Viral video:ಈ ಬೀದಿ ಬದಿ ವ್ಯಾಪಾರಿ ತಯಾರಿಸುತ್ತಾರೆ ಮಿರಿಂಡಾ ಗೊಲ್ಗಪ್ಪಾ! ನೀವು ಎಂದಾದರೂ ಸವಿದಿದ್ದೀರಾ?  title=
ಮಿರಿಂಡಾ ಗೊಲ್ಗಪ್ಪಾ

ನವದೆಹಲಿ: ಭಾರತವು ವಿವಿಧ ಸಂಸ್ಕೃತಿಗಳ ನಾಡು ಆದರೆ ವಾಸ್ತವವಾಗಿ ನಮ್ಮೆಲ್ಲರನ್ನೂ ಒಟ್ಟಿಗೆ ಬಂಧಿಸುವುದು ಪ್ರತಿಯೊಂದು ರಾಜ್ಯದ ಪಾಕಶಾಲೆಯ ಅನುಭವಗಳು. 

ಹಲವಾರು ಬಗೆಯ ವಿವಿಧ ರೀತಿಯಲ್ಲಿ ಅನೇಕ ಖಾದ್ಯಗಳನ್ನು ತಯಾರಿಸುವ ಅದೆಷ್ಟೂ ವಿಡಿಯೋಗಳು ಇಂಟರ್ನೆಟ್ ನಲ್ಲಿ ಹರಿದಾಡುತ್ತವೆ. ಇಂತಹ ವಿಚಿತ್ರ ರೀತಿಯಲ್ಲಿ ತಯಾರಿಸುವ ಆಹಾರಗಳು ನೆಟಿಜನ್‌ಗಳ ಗಮನ ಸೆಳೆದಿವೆ.

ಜೈಪುರದ ವ್ಯಕ್ತಿಯೊಬ್ಬರು ಮಿರಿಂಡಾ ಗೋಲ್ಗಪ್ಪ (Mirinda golgappa) ತಯಾರಿಸುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಚಟೋರೆ ಬ್ರದರ್ಸ್ (Chatore Broothers) ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಗೋಲ್ಗಪ್ಪ ಮಾರಾಟಗಾರ ಮಿರಿಂಡಾ ಗೋಲ್ಗಪ್ಪಸ್ ಅನ್ನು ಮಾರಾಟ ಮಾಡುತ್ತಾನೆ.

ಬೀದಿ ಆಹಾರ ಮಾರಾಟಗಾರ ಮಿರಿಂಡಾ ಬಾಟಲಿಯನ್ನು ಅಲುಗಾಡಿಸಿ ನಂತರ ಅದನ್ನು ದೊಡ್ಡ ಕಂಟೇನರ್‌ಗೆ ವರ್ಗಾಯಿಸುವುದರೊಂದಿಗೆ ವಿಡಿಯೋ  ಪ್ರಾರಂಭವಾಗುತ್ತದೆ. ಆ ವೈರಲ್ ವಿಡಿಯೋ ಇಲ್ಲಿದೆ ನೋಡಿ:

 

 

ವಿಡಿಯೋದ ಶೀರ್ಷಿಕೆಯ ಪ್ರಕಾರ, ಜೈಪುರದಲ್ಲಿ ಈ  ಗೋಲ್ಗಪ್ಪ ದೊರೆಯುತ್ತವೆ. ಈ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋ ನೋಡಿದ ನೆಟಿಜನ್‌ಗಳು ಸಂಪೂರ್ಣ ಜುಗುಪ್ಸೆಗೊಂಡು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ಮೂಡ್ ಹೈ ಖರಾಬ್ ಕರ್ ದಿಯಾ" ಎಂದು ಬಳಕೆದಾರರು ಹೇಳಿದರು. "ಅಸಂಬದ್ಧ," ಮತ್ತೊಬ್ಬರು ಸೇರಿಸಿದರು.

ಇದನ್ನೂ ಓದಿ: Airtel-Vi-Jio Prepaid plans: 500 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 84 ದಿನಗಳವರೆಗೆ ಈ ಪ್ರಯೋಜನಗಳನ್ನು ಪಡೆಯಿರಿ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News