Funny Viral Video: ಪತಿರಾಯನ ಚೇಷ್ಟೆ! ಅತ್ತೆ ತಲೆ ಮೇಲೆ ಮೊಟ್ಟೆ ಹೊಡೆದ ಸೊಸೆ!

Funny Viral Video: ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಯಾರಾದರು ಮೊಟ್ಟೆಯನ್ನು ತಂದು ತಲೆ ಮೇಲೆ ಹೊಡೆದರೆ ಹೇಗಿರುತ್ತೆ? ಮೊಟ್ಟೆಯಿಂದ ಹೆಂಡತಿಗೆ ಚುಡಾಯಿಸಿದ ಪತಿ! ಅದಾದ ಬಳಿಕ ನಡೆದದ್ದೇ ಭಾರೀ 'ಟ್ವಿಸ್ಟ್'- ಇಲ್ಲಿದೆ ತಮಾಷೆಯ ವೈರಲ್ ವಿಡಿಯೋ!

Written by - Yashaswini V | Last Updated : Dec 22, 2021, 12:42 PM IST
  • ಮನೆ ಎಂದ ಮೇಲೆ ಪತಿ-ಪತ್ನಿಯ ನಡುವಿನ ಹುಸಿ ಮುನಿಸು, ಕೋಪ, ಚೇಷ್ಟೆ ಎಲ್ಲಾ ಇದ್ದರೆ ಚಂದ!
  • ಆದರೆ, ಪತಿರಾಯನ ಚೇಷ್ಟೆ, ಅತ್ತೆ-ಸೊಸೆಯ ನಡುವೆ ಮುನಿಸು ತರಿಸದಿದ್ದರೆ ಸಾಕು...!
  • ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಅಂತಹದ್ದೇ ಒಂದು ತಮಾಷೆಯ ಸನ್ನಿವೇಷವನ್ನು ಕಾಣಬಹುದು
Funny Viral Video: ಪತಿರಾಯನ ಚೇಷ್ಟೆ! ಅತ್ತೆ ತಲೆ ಮೇಲೆ ಮೊಟ್ಟೆ ಹೊಡೆದ ಸೊಸೆ! title=
wife husband prank - funny viral video

Funny Viral Video: ಈ ದಿನಗಳಲ್ಲಿ ಯಾವುದೇ ಸಣ್ಣ ಪುಟ್ಟ ವಿಷಯವೂ ಸಹ ಸಾಮಾಜಿಕ ಜಾಲತಾಣದಲ್ಲಿ ಬಹಳ ಬೇಗ ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವು ತಮಾಷೆಯ ವಿಡಿಯೋಗಳು ಕೂಡ ಕಂಡು ಬರುತ್ತವೆ. ಮನೆ ಎಂದ ಮೇಲೆ ಪತಿ-ಪತ್ನಿಯ ನಡುವಿನ ಹುಸಿ ಮುನಿಸು, ಕೋಪ, ಚೇಷ್ಟೆ ಎಲ್ಲಾ ಇದ್ದರೆ ಚಂದ! ಆದರೆ, ಪತಿರಾಯನ ಚೇಷ್ಟೆ, ಅತ್ತೆ-ಸೊಸೆಯ ನಡುವೆ ಮುನಿಸು ತರಿಸದಿದ್ದರೆ ಸಾಕು...! ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಅಂತಹದ್ದೇ ಒಂದು ತಮಾಷೆಯ ಸನ್ನಿವೇಷವನ್ನು ಕಾಣಬಹುದು. 

ವಾಸ್ತವವಾಗಿ,  ಈ ತಮಾಷೆಯ ವೈರಲ್ ವಿಡಿಯೋದಲ್ಲಿ (Funny Viral Video) ಅಡುಗೆ ಮನೆಯಲ್ಲಿದ್ದ ಹೆಂಡತಿಗೆ ಹಿಂದಿನಿಂದ ಬಂದ ಪತಿ ಮೊಟ್ಟೆ ಹಿಡಿದು ತಮಾಷೆ ಮಾಡುತ್ತಾನೆ. ಬಳಿಕ ಆಕೆಯನ್ನು ತನ್ನ ತಾಯಿಯ (ಆಕೆಯ ಅತ್ತೆ) ಬಳಿ ಹೋಗಿ ಅದೇ ರೀತಿ ತಮಾಷೆ ಮಾಡುವಂತೆ ಹೇಳುತ್ತಾನೆ. ಆದರೆ ಅದಾದ ಬಳಿಕ ನಡೆದದ್ದೇ ಭಾರೀ 'ಟ್ವಿಸ್ಟ್! 

ವೈರಲ್ ಆಗಿರುವ ಆ ವಿಡಿಯೋದಲ್ಲಿ (Viral Video) ಪತ್ನಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ನಂತರ ಮೊಟ್ಟೆಯೊಂದಿಗೆ ಅಲ್ಲಿಗೆ ಬರುವ ಆಕೆಯ ಪತಿ ಹಿಂದಿನಿಂದ ತನ್ನ ಹೆಂಡತಿಯನ್ನು ಕರೆಯುತ್ತಾನೆ. ಪತ್ನಿ ಹಿಂತಿರುಗಿದ ಕೂಡಲೇ ಪತ್ನಿಯ ತಲೆಗೆ ಮೊಟ್ಟೆ ಹೊಡೆದಿದ್ದಾನೆ. ಹೆಂಡತಿ ಅಯ್ಯೋ... ಎಂದು ಕೋಪದಿಂದ ನೋಡುತ್ತಾಳೆ, ಆದರೆ ಮೊಟ್ಟೆ ಒಡೆದಿರಲಿಲ್ಲ. ಏಕೆಂದರೆ ಅದು ಬೇಯಿಸಿದ ಮೊಟ್ಟೆ. ಈ ವಿಷಯ ತಿಳಿದ ತಕ್ಷಣ ಹೆಂಡತಿ ನಗುತ್ತಾಳೆ.

ಇದನ್ನೂ ಓದಿ-  Viral video:ಲೆಹೆಂಗಾ ಬದಲು ರಿಪ್ಡ್ ಡೆನಿಮ್‌ ತೊಟ್ಟು ಹಸೆಮಣೆ ಏರಲು ಬಂದ ಮದುಮಗಳು.!

ಅದರ ನಂತರ, ಪತಿ ತನ್ನ ಅತ್ತೆಯೊಂದಿಗೆ ಇದೇ ರೀತಿಯ ತಮಾಷೆ ಮಾಡಲು ಹೆಂಡತಿಗೆ ಐಡಿಯಾ ನೀಡುತ್ತಾನೆ. ಹೆಂಡತಿಯೂ ಸಂತೋಷದಿಂದ "ಸರಿ" ಎಂದು ತಲೆಯಾಡಿಸುತ್ತಾಳೆ. ಆದರೆ, ಇಲ್ಲಿ ಗಂಡ ಒಂದು ಚೇಷ್ಟೆ ಮಾಡುತ್ತಾನೆ.

ಅದೇನೆಂದರೆ, ಹೆಂಡತಿ ತನ್ನ ಕೈಯನ್ನು ಹಿಂದೆ ಕಟ್ಟಿ ಅತ್ತೆಯ ಬಳಿ ಹೋಗುತ್ತಾಳೆ, ಈ ಮಧ್ಯೆ ಪತಿಯು ಪತ್ನಿಯ ಕೈಗೆ  ಬೇಯಿಸಿದ ಮೊಟ್ಟೆಯ ಬದಲಿಗೆ ಹಸಿ ಮೊಟ್ಟೆಯನ್ನು ಕೊಡುತ್ತಾನೆ. ಅದನ್ನು ಅರಿಯದ ಹೆಂಡತಿ ಖುಷಿಯಿಂದ ಅತ್ತೆ ಕುಳಿತಿರುವ ಹಾಲ್ ಗೆ ಹೋಗುತ್ತಾಳೆ. ಅಲ್ಲಿ ಆರಾಮವಾಗಿ ಕುಳಿತು ಮೊಬೈಲ್ ನೋಡುತ್ತಿರುವ ಅತ್ತೆ ತಲೆಗೆ ಮೊಟ್ಟೆ ಹೊಡೆಯುತ್ತಾಳೆ. ಆ ಕ್ಷಣದಲ್ಲಿ ಆ ಮಹಿಳೆಯ ಪ್ರತಿಕ್ರಿಯೆಯನ್ನು ನೀವು ನೋಡಬೇಕು.  ಈ ತಮಾಷೆಯ ವಿಡಿಯೋವನ್ನು ನೀವೂ ಒಮ್ಮೆ ನೋಡಿ....

ಇದನ್ನೂ ಓದಿ-  Snake Viral Video: ಹಾವು ಹಿಡಿಯಲು ಹೋದ ವ್ಯಕ್ತಿಗೆ ಕಚ್ಚಿದ ವಿಷ ನಾಗರ!

YouTube ನಲ್ಲಿ ಹಂಚಿಕೊಳ್ಳಲಾದ ಈ ತಮಾಷೆಯ ವೀಡಿಯೊ (YouTube Funny Video) ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟಿದೆ. ಈ ವೀಡಿಯೊ ಇದುವರೆಗೆ 1.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News