Eggs In Fridge: ನಿತ್ಯ ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಕೇಳಿರಬಹುದು. ಜನರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಲು ಮತ್ತು ಆರೋಗ್ಯಕರವಾಗಿರಲು ಮೊಟ್ಟೆಗಳನ್ನು ಸೇವಿಸುತ್ತಾರೆ. ಹಾಗಾಗಿಯೇ ಮಾರುಕಟ್ಟೆಯಿಂದ ಒಟ್ಟೊಟ್ಟಿಗೆ ಮೊಟ್ಟೆ ಖರೀದಿಸಿ ತಂದು ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟು ಬಳಸುತ್ತಾರೆ. ಆದರೆ, ಫ್ರಿಡ್ಜ್‌ನಲ್ಲಿ ಇಟ್ಟ ಮೊಟ್ಟೆಯನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದೇ? ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು ಎನ್ನುತ್ತಾರೆ ಸೆಲೆಬ್ರಿಟಿ ಶೆಫ್ ಜೇಮ್ಸ್ ಮಾರ್ಟಿನ್.
ಒಂದು ಚಾನೆಲ್ ಪ್ರದರ್ಶನದ ಸಮಯದಲ್ಲಿ ಸೆಲೆಬ್ರಿಟಿ ಬಾಣಸಿಗರೊಬ್ಬರು ಎರಡು ವಿಭಿನ್ನ ರೀತಿಯ ಮೊಟ್ಟೆಗಳನ್ನು (Eggs) ಬಳಸಿಕೊಂಡು ಕ್ಲಾಸಿಕ್ ವಿಕ್ಟೋರಿಯಾ ಸ್ಪಾಂಜ್ ಕೇಕ್ ಅನ್ನು ಹೇಗೆ ತಯಾರಿಸುವುದು, ಮೊಟ್ಟೆಗಳ ಉತ್ತಮ ಗುಣಮಟ್ಟವನ್ನು ಹೇಗೆ ಪರೀಕ್ಷಿಸುವುದು ಎಂದೂ ತಿಳಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಎರಡು ಸ್ಪಾಂಜ್ ಕೇಕ್ಗಳನ್ನು ಮಾಡಿದರು. ಹಗುರವಾದ ಮತ್ತು ಪಫಿ ಕೇಕ್ ಅನ್ನು ತಯಾರಿಸಲು, ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ಹೊಂದಿರುವುದು ಅವಶ್ಯಕ ಎಂದು ಅವರು ಹೇಳಿದರು. ಒಂದು ಕೇಕ್ನಲ್ಲಿ ಬಾತುಕೋಳಿ ಮೊಟ್ಟೆಗಳನ್ನು ಮತ್ತು ಇನ್ನೊಂದರಲ್ಲಿ ಕೋಳಿ ಮೊಟ್ಟೆಗಳನ್ನು ಬಳಸಲಾಗಿತ್ತು. ತಯಾರಿಸಿದ ಕೇಕ್ ಒಂದು ಕಪ್ಪಾಗಿ ಕಾಣುತ್ತಿತ್ತು.
ಇದನ್ನೂ ಓದಿ- Curry Leaves: ಕರಿಬೇವಿನ ಅತಿಯಾದ ಸೇವನೆ ನಿಮ್ಮಲ್ಲಿ ಈ ಸಮಸ್ಯೆಗಳನ್ನು ಹೆಚ್ಚಿಸಬಹುದು
ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆ ಬಳಸಿದ್ದ ಕೇಕ್ ಹಾಳಾಯಿತು:
ಅವರು ತಯಾರಿಸಿದ ಎರಡೂ ಕೇಕ್ (Cake) ಬಗ್ಗೆ ವಿವರಿಸುತ್ತಿದ್ದ ಚೆಫ್ ಜೇಮ್ಸ್, ಎರಡರ ನಡುವಿನ ವ್ಯತ್ಯಾಸವನ್ನು ನೋಡಿ. ಇದೆಲ್ಲಾ ಆಗುತ್ತಿರುವುದು ಮೊಟ್ಟೆಯ ಬಳಕೆಯಿಂದ. ಎರಡೂ ಕೇಕ್ಗಳನ್ನು ಒಂದೇ ರೀತಿಯಲ್ಲಿ ಬೇಯಿಸಲಾಗಿದೆ. ಈ ಕೇಕ್‌ಗಳಲ್ಲಿ ಒಂದನ್ನು ಮಧ್ಯದಲ್ಲಿ ಕತ್ತರಿಸಿ, ಇದು ಬಹುತೇಕ ಮಡೆರಿಯಾ ಕೇಕ್‌ನಂತೆ ಕಾಣುತ್ತದೆ ಮತ್ತು ವಿನ್ಯಾಸದಲ್ಲಿ ಹಗುರವಾಗಿರುತ್ತದೆ. ಬಾತುಕೋಳಿ ಮೊಟ್ಟೆಗಳು ನೋಡಲು ಸುಂದರವಾಗಿವೆ ಎಂದು ಚೆಫ್ ಜೇಮ್ಸ್ ವಿವರಿಸಿದರು.
ಇದನ್ನೂ ಓದಿ- Tea : ಚಹಾದೊಂದಿಗೆ ಮಿಸ್ ಆಗಿ ಸೇವಿಸಬೇಡಿ ಈ 5 ಆಹಾರಗಳನ್ನ : ತಿಂದರೆ ತಪ್ಪಿದಲ್ಲ ಸಮಸ್ಯೆ
ಈ ಸಂದರ್ಭದಲ್ಲಿ ಭೋಜನ ಪ್ರಿಯರಿಗೆ ಸಲಹೆಯನ್ನು ಹಂಚಿಕೊಂಡ ಚೆಫ್ ಜೇಮ್ಸ್, ಮೊಟ್ಟೆಗಳು ವಾಸ್ತವವಾಗಿ ರಂಧ್ರವಿರುವ ಚರ್ಮವನ್ನು ಹೊಂದಿರುತ್ತವೆ, ಆದ್ದರಿಂದ ಅವು ಫ್ರಿಡ್ಜ್‌ನಿಂದ ಎಲ್ಲಾ ಪರಿಮಳವನ್ನು ಹೀರಿಕೊಳ್ಳುತ್ತವೆ, ಅದು ಕೆಟ್ಟ ರುಚಿಯನ್ನು ಉಂಟು ಮಾಡುತ್ತದೆ. ಅದಕ್ಕಾಗಿಯೇ ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.