ರಾಜನಂದಗಾಂವ್: ಛತ್ತೀಸ್‌ಗಢದ ರಾಜನಂದಗಾಂವ್‌ನ ಹಳ್ಳಿಯೊಂದರಲ್ಲಿ ಜರ್ಸಿ ಹಸು ಮೂರು ಕಣ್ಣುಗಳು (Three Eyed Calf) ಮತ್ತು ನಾಲ್ಕು ಮೂಗಿನ ಹೊಳ್ಳೆಗಳನ್ನು ಹೊಂದಿರುವ ಅಪರೂಪದ ಕರುವಿಗೆ ಜನ್ಮ ನೀಡಿದೆ. ಈ ಸುದ್ದಿ ಹರಡುತ್ತಿದ್ದಂತೆ ಕರುವನ್ನು ಶಿವನ (Lord Shiva) ಅವತಾರ ಎಂದು ಪೂಜಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈತನ ಮನೆಗೆ ಬರುತ್ತಿದ್ದಾರೆ.
ನವಗಾಂವ್ ಲೋಧಿ ಗ್ರಾಮದ ನಿವಾಸಿ ಹೇಮಂತ್ ಚಂದೇಲ್ ಎಂಬ ರೈತನ ಮಾಲೀಕತ್ವದ ಹಸುವಿಗೆ ಜನವರಿ 13 ರಂದು ಹೆಣ್ಣು ಕರು ಜನಿಸಿತ್ತು.
ಇದನ್ನೂ ಓದಿ: Punjab Election 2022 : ಪಂಜಾಬ್ ಚುನಾವಣಾ ಮತದಾನದ ದಿನಾಂಕ ಬದಲಿಸಿದ ಚುನಾವಣಾ ಆಯೋಗ!
"ಕರು ತನ್ನ ಎರಡು ಕಣ್ಣುಗಳ ಜೊತೆಗೆ ಹಣೆಯ ಮಧ್ಯದಲ್ಲಿ ಒಂದು ಕಣ್ಣನ್ನು ಹೊಂದಿದೆ ಮತ್ತು ಮೂಗಿನಲ್ಲಿ ನಾಲ್ಕು ರಂಧ್ರಗಳನ್ನು ಹೊಂದಿದೆ. ಅದರ ಬಾಲವು 'ಜಟಾ' (ಮಚ್ಚೆಯ ಕೂದಲಿನ ರಾಶಿ) ನಂತೆ ಕಾಣುತ್ತದೆ. ಅದರ ನಾಲಿಗೆ ಸಹ ಸಾಮಾನ್ಯ ಕರುಗಳಿಗಿಂತ ಉದ್ದವಾಗಿದೆ" ಎಂದು ಹೇಮಂತ್ ಚಂದೇಲ್ ಹೇಳಿದ್ದಾರೆ.
ಕರುವಿನ (Calf) ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಪಶುವೈದ್ಯರು ಹೇಳಿದ್ದಾರೆ. ಆದರೆ, ನಾಲಿಗೆ ಉದ್ದವಾಗಿದ್ದರಿಂದ ಕರು ಹಸುವಿನ ಹಾಲು ಕುಡಿಯಲು ತೊಂದರೆ ಅನುಭವಿಸುತ್ತಿದೆ. ನಾವು ಅದಕ್ಕೆ ಆಹಾರವನ್ನು ನೀಡಲು ಸಹಾಯ ಮಾಡುತ್ತಿದ್ದೇವೆ. HF ಜರ್ಸಿ ತಳಿಯ ಅವರ ಹಸು (Cow) ಈ ಹಿಂದೆ ಮೂರು ಕರುಗಳಿಗೆ ಜನ್ಮ ನೀಡಿತ್ತು. ಆದರೆ ಎಲ್ಲಾ ಸಾಮಾನ್ಯ ಅಂಗ ರಚನೆಯೊಂದಿಗೆ ಜನಿಸಿದ್ದವು ಎಂದು ಹೇಳಿದ್ದಾರೆ.
Chhattisgarh| Three-eyed cow born in Rajnandgaon district worshipped as reincarnation of god Shiva
"We were surprised. Its nose has four holes instead of two & has 3 eyes. Medical screening has been done. She is healthy. Villagers are worshipping the calf," said Neeraj (16.01) pic.twitter.com/NrG2b8LNXt
— ANI (@ANI) January 17, 2022
ಈ ಅಪರೂಪದ ಕರುವಿನ ಬಗ್ಗೆ ಸುದ್ದಿ ಹರಡುತ್ತಿದ್ದಂತೆ, ಹತ್ತಿರದ ಹಳ್ಳಿಗಳು ಮತ್ತು ಪಟ್ಟಣಗಳ ನಿವಾಸಿಗಳು ಶಿವನ ಅವತಾರವೆಂದು ಪೂಜಿಸಲು ಚಂದೇಲ್ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದರು. ಜನರು ಚಂದೇಲ್ ಅವರ ಮನೆಯ ಹೊರಗೆ ಸರತಿ ಸಾಲಿನಲ್ಲಿ ನಿಂತು ಕರುವಿಗೆ ಹೂವು ಮತ್ತು ತೆಂಗಿನಕಾಯಿಯನ್ನು ಅರ್ಪಿಸುತ್ತಿದ್ದಾರೆ.
ಆದಾಗ್ಯೂ, ಭ್ರೂಣದ ಅಸಹಜ ಬೆಳವಣಿಗೆಯಿಂದ ಇಂತಹ ಪ್ರಕರಣಗಳು ಸಂಭವಿಸುತ್ತವೆ ಮತ್ತು ಇದು ಅಲೌಕಿಕ ವಿಷಯವಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ.
ಇದನ್ನು ಪವಾಡ ಎಂದು ಪರಿಗಣಿಸಬಾರದು. ಭ್ರೂಣದ ಅಸಹಜ ಬೆಳವಣಿಗೆಯಿಂದ ಇಂತಹ ಸಂಗತಿಗಳು ಸಂಭವಿಸುತ್ತವೆ. ಸಾಮಾನ್ಯವಾಗಿ ಇಂತಹ ಕರುಗಳು ಆರೋಗ್ಯದಲ್ಲಿ ದುರ್ಬಲವಾಗಿರುತ್ತವೆ ಎಂದು ಖಾಸಗಿ ಪಶುವೈದ್ಯಕೀಯ ವೈದ್ಯ ಕಮಲೇಶ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ: ಖ್ಯಾತ ಕಥಕ್ ನಾಟ್ಯ ಪ್ರವೀಣ ಪಂಡಿತ್ ಬಿರ್ಜು ಮಹಾರಾಜ್ ನಿಧನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.