ಬೆಂಗಳೂರು: ಹಿಜಾಬ್ (Hijab) ವಿವಾದ ವಿಚಾರ ಸದ್ಯ ಈ ವಿಷಯ ಕೋರ್ಟ್ ನಲ್ಲಿದೆ. ನಾಳೆ ಆದೇಶ ಏನ್ ಬರುತ್ತೆ ಅಂತ ನೋಡೋಣ. ನಾಳೆ ಏನು ಇತ್ಯರ್ಥ ಆಗುತ್ತೋ ನೋಡೋಣ. ಇವರು ಕೇಸರಿ ಶಾಲು ಹಾಕಿ ಕಳುಹಿಸುವುದು ರಾಜಕೀಯ. ಹಿಜಾಬ್ ಬಹಳ ವರ್ಷಗಳಿಂದ ಧರಿಸುತ್ತಿದ್ದಾರೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಇದನ್ನೂ ಓದಿ: ಕಾಶ್ಮೀರದ ಕುರಿತು ಪಾಕ್ ಡೀಲರ್‌ನ ವಿವಾದಾತ್ಮಕ ಪೋಸ್ಟ್: 'ಭಾರತ ನಮ್ಮ ಎರಡನೇ ಮನೆ' ಎಂದ Hyundai
ಹಿಜಾಬ್ ಮುಸ್ಲಿಂ ಸಮುದಾಯದ ಒಂದು ಭಾಗ. ಹಿಜಾಬ್ ಹಾಕಿದ್ರೆ ಏನ್ ತೊಂದರೆ. ಏನ್ ತೊಂದರೆ ಆಗುತ್ತೆ ಅಂತ ಹೇಳ್ಬೇಕು ಅಲ್ವಾ. ಮಕ್ಕಳ ಮೇಲೆ ಏನಾದ್ರೂ ದುಷ್ಪರಿಣಾಮ ಬೀಳುತ್ತಾ. ಬಿಜೆಪಿ ರಾಜಕೀಯ ಮಾಡುತ್ತಿದೆ. ವೋಟ್ ಗಾಗಿ ಬಿಜೆಪಿ (BJP) ರಾಜಕೀಯ ಮಾಡುತ್ತಿದೆ ಎಂದಿದ್ದಾರೆ.
ವೈಎಸ್ ವಿ ದತ್ತಾ ಭೇಟಿ ವಿಚಾರ:
ನಾಳೆ, ನಾಡಿದ್ದು ಗೋವಾದಲ್ಲಿ ಪ್ರಚಾರ ಮಾಡ್ತೇನೆ ಎಂದಿದ್ದಾರೆ. ವೈಎಸ್ ವಿ ದತ್ತಾ (YSV Datta) ಭೇಟಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಅವರು ರೈತರನ್ನ ಕರೆದು ತಂದಿದ್ರು. ರಾಗಿ ಬೆಂಬಲ ಬೆಲೆ ಕೇಳುವುದಕ್ಕೆ ಬಂದಿದ್ದರು. ಸರ್ಕಾರದ ಮೇಲೆ ಒತ್ತಡ ತರುವಂತೆ ಹೇಳಿದ್ದಾರೆ. ದತ್ತಾ ಕಾಂಗ್ರೆಸ್ (Congress) ಸೇರುವುದು ಬಿಡುವುದು ಅವರ ನಿರ್ಧಾರ. ನಾನು ಯಾರನ್ನೂ ಬಲವಂತ ಮಾಡಲ್ಲ. ಅವರ ಬೆಂಬಲಿಗರು ಸೇರಿಸಿಕೊಳ್ಳಿ ಅಂತಿದ್ದಾರೆ. ಆದರೆ ಅದನ್ನ ದತ್ತಾ ನಿರ್ಧಾರ ಮಾಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಯಂಕರ ಆಕ್ಸಿಡೆಂಟ್ ನ Live Video, ನಡುರಸ್ತೇಲಿ ಟ್ರ್ಯಾಕ್ಟರ್ ಉಡಾಯಿಸಿದ ಲಾರಿ
ಪಂಜಾಬ್ ನಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ವಿಚಾರ:
ಹೈಕಮಾಂಡ್ ನವರು ತೀರ್ಮಾನ ಮಾಡಿದ್ದಾರೆ. ಜನರ ಅಭಿಪ್ರಾಯದಂತೆ ಘೋಷಣೆ ಮಾಡಿದ್ದೇವೆ ಅಂದಿದ್ದಾರೆ. ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಪಂಜಾಬ್ ನಲ್ಲಿ ಮಾಡಿದ್ದಾರೆ ಅಂತ ಎಲ್ಲಾ ಕಡೆ ಮಾಡ್ತಾರಾ? ಮಾಡುವುದು ಬಿಡುವುದು ಹೈಕಮಾಂಡ್ ತೀರ್ಮಾನ. ಪಂಜಾಬ್ ನಲ್ಲಿ (Punjab Election) ಮಾಡಿದ್ದಾರೆ, ಮುಂದೆ ಏನ್ ಮಾಡ್ತಾರೆ ಅನ್ನೋದು ನೊಡೋಣ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.