ನವದೆಹಲಿ : ಎಚ್ಡಿಎಫ್ಸಿ ಬ್ಯಾಂಕ್ ಗ್ರಾಹಕರಿಗೆ ಇದು ಭರ್ಜರಿ ಸಿಹಿ ಸುದ್ದಿಯಾಗಿದೆ. ಖಾಸಗಿ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ.
ಹೊಸ ಬದಲಾವಣೆಗಳ ಆಧಾರದ ಮೇಲೆ, ಗ್ರಾಹಕರು ಈಗ ತಮ್ಮ ಖಾತೆಯಲ್ಲಿನ ದೈನಂದಿನ ಬ್ಯಾಲೆನ್ಸ್ ಆಧರಿಸಿ ಬಡ್ಡಿದರಗಳನ್ನು(Interest Rates) ಪಡೆಯುತ್ತಾರೆ. ಈ ಬಡ್ಡಿಯನ್ನು ಖಾತೆದಾರರಿಗೆ ತ್ರೈಮಾಸಿಕ ಆಧಾರದ ಮೇಲೆ ಮಾತ್ರ ನೀಡಲಾಗುತ್ತದೆ ಎಂದು ತಿಳಿಯುವುದು ಮುಖ್ಯ.
ಇದನ್ನೂ ಓದಿ : PF New Rules: ಏಪ್ರಿಲ್ 1 ರಿಂದ PF ಖಾತೆಗಳ ಮೇಲೂ ತೆರಿಗೆ! ನಿಮ್ಮ ಮೇಲೆ ಏನು ಪ್ರಭಾವ ಇಲ್ಲಿ ತಿಳಿಯಿರಿ
ಬಡ್ಡಿದರಗಳಲ್ಲಿ ಮೇಲೆ ತಿಳಿಸಿದ ಬದಲಾವಣೆಗಳನ್ನು ಫೆಬ್ರವರಿ 2, 2022 ರಿಂದ ಜಾರಿಗೆ ತರಲಾಗುತ್ತದೆ.
ಬ್ಯಾಂಕ್ ಹಂಚಿಕೊಂಡಂತೆ, 50 ಲಕ್ಷಕ್ಕಿಂತ ಕಡಿಮೆ ಮೊತ್ತವನ್ನು ಹೊಂದಿರುವ ಗ್ರಾಹಕರು ಉಳಿತಾಯ ಖಾತೆಗಳ(Savings Account) ಮೇಲೆ ಶೇ. 3 ರ ಬಡ್ಡಿದರವನ್ನು ಪಡೆಯುತ್ತಾರೆ. 50 ಲಕ್ಷಕ್ಕಿಂತ ಹೆಚ್ಚು ಮತ್ತು 1,000 ಕೋಟಿಗಿಂತ ಕಡಿಮೆ ಮೊತ್ತವನ್ನು ಹೊಂದಿರುವವರು 50 ಲಕ್ಷಕ್ಕಿಂತ ಹೆಚ್ಚಿನ ಶೇಕಡಾ 3.50 ರ ಬಡ್ಡಿದರವನ್ನು ಪಡೆಯುತ್ತಾರೆ.
ಖಾತೆದಾರರು ತಮ್ಮ ಖಾತೆಯಲ್ಲಿ 1,000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹೊಂದಿದ್ದರೆ, ಅವರು ಶೇಕಡಾ 4.50 ರ ಬಡ್ಡಿದರವನ್ನು ಪಡೆಯುತ್ತಾರೆ.
ಎಚ್ಡಿಎಫ್ಸಿ ಬ್ಯಾಂಕ್(HDFC Bank) ಹೊರಡಿಸಿದ ಹೇಳಿಕೆಯ ಪ್ರಕಾರ, ಪರಿಷ್ಕೃತ ದರಗಳು ದೇಶೀಯ, ಎನ್ಆರ್ಒ ಮತ್ತು ಎನ್ಆರ್ಇ ಉಳಿತಾಯ ಖಾತೆಗಳಿಗೆ ಅನ್ವಯಿಸುತ್ತವೆ.
PNB ಕೂಡ ಬಡ್ಡಿದರಗಳನ್ನು ಪರಿಷ್ಕರಿಸಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ದೇಶೀಯ ಮತ್ತು ಎನ್ಆರ್ಐ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು 5 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆ ಮಾಡಿದೆ. ಉಳಿತಾಯ ನಿಧಿ ಖಾತೆಯಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಬ್ಯಾಲೆನ್ಸ್ಗೆ ಶೇ.2.80 ಬಡ್ಡಿ ದರವನ್ನು ಬ್ಯಾಂಕ್ ನೀಡಿತ್ತು. ಇವು ಈಗ ಶೇ.2.75 ಆಗಲಿದೆ. PNB ರೂ. 10 ಲಕ್ಷ ಮತ್ತು 500 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಖಾತೆಯ ಬ್ಯಾಲೆನ್ಸ್ಗಳಿಗೆ 2.85 ರೂ. ಬಡ್ಡಿ ದರವನ್ನು ನೀಡುತ್ತಿದೆ, ಬದಲಾವಣೆಯ ನಂತರ ಫೆಬ್ರವರಿ 3, 2022 ರ ವೇಳೆಗೆ ಇದನ್ನು ಶೇ. 2.80 ಕ್ಕೆ ಹೆಚ್ಚಿಸಲಾಗಿದೆ. ಉಳಿತಾಯ ನಿಧಿ ಖಾತೆಯಲ್ಲಿನ 500 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಬ್ಯಾಂಕ್ 3.25 ಶೇಕಡಾ ಬಡ್ಡಿದರವನ್ನು ನೀಡುತ್ತದೆ.
ಇದನ್ನೂ ಓದಿ : PM Kisan ಫಲಾನುಭವಿಗಳೇ ಗಮನಿಸಿ : ಈ ರೈತರಿಗೆ ಸಿಗುವುದಿಲ್ಲ 11ನೇ ಕಂತಿನ ಹಣ!
ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್(Punjab & Sind Bank) ತನ್ನ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಬದಲಾಯಿಸಿದೆ. ಬ್ಯಾಂಕ್ ಈಗ 10 ಕೋಟಿ ರೂ.ಗಿಂತ ಕಡಿಮೆಯ ಉಳಿತಾಯ ಖಾತೆಯ ಬ್ಯಾಲೆನ್ಸ್ಗಳ ಮೇಲೆ ಶೇಕಡಾ 3 ಬಡ್ಡಿದರವನ್ನು ನೀಡುತ್ತದೆ. ಏತನ್ಮಧ್ಯೆ, 10 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಖಾತೆಯ ಬಾಕಿಗಳ ದರವನ್ನು ಶೇ 3.20 ಕ್ಕೆ ಪರಿಷ್ಕರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.