ಈ ಐದು ಸಮಸ್ಯೆಗಳನ್ನು ತಕ್ಷಣ ಪರಿಹರಿಸುತ್ತದೆ ಬಾಳೆಕಾಯಿ

 Benefits Of Eating Raw Banana : ಬಾಳೆಹಣ್ಣು ಪ್ರಪಂಚದಾದ್ಯಂತ ಹೆಚ್ಚು ತಿನ್ನುವ ಮತ್ತು ಇಷ್ಟಪಡುವ ಹಣ್ಣುಗಳಲ್ಲಿ ಒಂದು. ಪ್ರತಿ ಋತುವಿನಲ್ಲೂ ಬಾಳೆಹಣ್ಣು  ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ.

Written by - Ranjitha R K | Last Updated : Feb 10, 2022, 03:04 PM IST
  • ಪ್ರತಿ ಋತುವಿನಲ್ಲೂ ಬಾಳೆಹಣ್ಣು ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ.
  • ಬಾಳೆಹಣ್ಣು ಆರೋಗ್ಯಕರ ಅಂಶಗಳ ಆಗರವಾಗಿದೆ.
  • ಬಾಳೆ ಹಣ್ಣು ಮಾತ್ರವಲ್ಲ ಬಾಳೆಕಾಯಿ ಕೂಡಾ ಆರೋಗ್ಯಕ್ಕೆ ಸಹಾಯಕ
ಈ ಐದು ಸಮಸ್ಯೆಗಳನ್ನು ತಕ್ಷಣ ಪರಿಹರಿಸುತ್ತದೆ ಬಾಳೆಕಾಯಿ  title=
ಬಾಳೆಹಣ್ಣು ಆರೋಗ್ಯಕರ ಅಂಶಗಳ ಆಗರವಾಗಿದೆ (file photo)

ನವದೆಹಲಿ : Benefits Of Eating Raw Banana : ಬಾಳೆಹಣ್ಣು ಪ್ರಪಂಚದಾದ್ಯಂತ ಹೆಚ್ಚು ತಿನ್ನುವ ಮತ್ತು ಇಷ್ಟಪಡುವ ಹಣ್ಣುಗಳಲ್ಲಿ ಒಂದು. ಪ್ರತಿ ಋತುವಿನಲ್ಲೂ ಬಾಳೆಹಣ್ಣು  ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಬಾಳೆಹಣ್ಣು ಆರೋಗ್ಯಕರ ಅಂಶಗಳ ಆಗರವಾಗಿದೆ.   ಬಾಳೆ ಹಣ್ಣು ಮಾತ್ರವಲ್ಲ ಬಾಳೆಕಾಯಿ ತಿಂದರೂ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ (Benefits of raw banana). 

ಬಾಳೆಕಾಯಿ ತಿನ್ನುವ ಪ್ರಯೋಜನಗಳು : ತೂಕ ನಷ್ಟಕ್ಕೆ ಬಾಳೆಕಾಯಿ ಅತ್ಯುತ್ತಮ ಆಯ್ಕೆಯಾಗಿದೆ (Raw banana for weight lose). ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಬಾಳೆಕಾಯಿ ತಿಂದರೆ ಪ್ರಯೋಜನವಾಗಲಿದೆ.   ಬಾಳೆಕಾಯಿಯಲ್ಲಿ ಬಹಳಷ್ಟು ಫೈಬರ್ ಕಂಡುಬರುತ್ತದೆ. ಇದು ಫ್ಯಾಟ್ ಸೆಲ್ ಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬಾಳೆಕಾಯಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. 

ಇದನ್ನೂ ಓದಿ : Coffee Side Effects: ನಿಮಗೂ ಬೆಳಗ್ಗೆ ಎದ್ದ ತಕ್ಷಣ ಕಾಫಿ ಬೇಕಾ? ಹಾಗಿದ್ದರೆ ಅದರ ಅಪಾಯದ ಬಗ್ಗೆಯೂ ತಿಳಿಯಿರಿ

ಬಾಳೆಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು : 
ಬಾಳೆಕಾಯಿಯಲ್ಲಿ  (benefits of raw banana) ಪ್ರೊವಿಟಮಿನ್-ಎ, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್, ಸತು ಮತ್ತು ಫೀನಾಲಿಕ್ ಸಂಯುಕ್ತಗಳಂತಹ ಅನೇಕ ಗುಣಗಳು ಕನಸು ಬರುತ್ತವೆ. ಇದು ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. 

1. ಜೀರ್ಣಕ್ರಿಯೆ : 
ಫೈಬರ್ ಮತ್ತು ಪ್ರತಿರೋಧಕ ಸ್ಟಾರ್ಚ್,  ಪ್ರಮಾಣವು ಬಾಳೆಕಾಯಿಯಲ್ಲಿ ಕಂಡುಬರುತ್ತದೆ. ಇವೆರಡೂ ಜೀರ್ಣಾಂಗ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. 

2. ಮಧುಮೇಹ :
 ಬಾಳೆಕಾಯಿಯ  ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ (raw bananana for diabetec). ಬಾಳೆಕಾಯಿಯಲ್ಲಿ ಕಂಡುಬರುವ ಮಧುಮೇಹ ವಿರೋಧಿ ಗುಣಲಕ್ಷಣಗಳು ಮಧುಮೇಹದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ : Health Tips: ಅಧಿಕ ಕೊಲೆಸ್ಟ್ರಾಲ್ ತಗ್ಗಿಸಲು 5 ಆರೋಗ್ಯಕರ ಆಹಾರಗಳು

3. ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ :
 ಬಾಳೆಕಾಯಿಯಲ್ಲಿ ಉತ್ತಮ ಪ್ರಮಾಣದ ಫೈಬರ್ ಕಂಡುಬರುತ್ತದೆ. ಇದು ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

4. ಬೊಜ್ಜು ಕರಗಿಸಲು ಸಹಕಾರಿ :
ಸ್ಥೂಲಕಾಯತೆಯನ್ನು ಕಡಿಮೆ ಮಾಡಲು, ನಿಮ್ಮ ಆಹಾರದಲ್ಲಿ ಬಾಲೆಕಾಯಿಯನ್ನು ಸೇರಿಸಿಕೊಳ್ಳಿ.  ಬಾಳೆಕಾಯಿಯಲ್ಲಿ ಫೈಬರ್ ಇದ್ದು ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ ಮತ್ತು  ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

5. ಚರ್ಮದ ಆರೋಗ್ಯಕ್ಕೆ :
ಬಾಳೆಕಾಯಿ ಚರ್ಮದ ಆರೋಗ್ಯಕ್ಕೂ ಒಳ್ಳೆಯದು (skin care) . ಇದರಲ್ಲಿ ಹಲವು ವಿಧದ ವಿಟಮಿನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಹೇರಳವಾಗಿವೆ. ಮುಖದ ಮೇಲಿನ ಸುಕ್ಕುಗಳನ್ನು ಹೋಗಲಾಡಿಸಲು ನೆರವಾಗುತ್ತದೆ. 

ಇದನ್ನೂ ಓದಿ : ಒಣದ್ರಾಕ್ಷಿ ನೀರನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆರೋಗ್ಯಕ್ಕಿದೆ ಈ  4 ಪ್ರಯೋಜನಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News