IPL 2022 Mega Auction: ಇಶಾನ್ ಕಿಶನ್ ರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಿದ ಮುಂಬೈ ಇಂಡಿಯನ್ಸ್

IPL 2022 Mega Auction:ಇಶಾನ್ ಕಿಶನ್ (Ishan Kishan) ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿಗೆ ಖರೀದಿಸಿತು. 

Edited by - Chetana Devarmani | Last Updated : Feb 12, 2022, 05:08 PM IST
  • ಬೆಂಗಳೂರಿನಲ್ಲಿ ನಡೆಯುತ್ತಿರುವ IPL 2022 ಮೆಗಾ ಹರಾಜು
  • ಪ್ರಸಕ್ತ ಐಪಿಎಲ್ ಸೀಸನ್ ನ ಅತ್ಯಂತ ದುಬಾರಿ ಆಟಗಾರ
  • ಇಶಾನ್ ಕಿಶನ್ ರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಿದ ಮುಂಬೈ ಇಂಡಿಯನ್ಸ್
IPL 2022 Mega Auction: ಇಶಾನ್ ಕಿಶನ್ ರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಿದ ಮುಂಬೈ ಇಂಡಿಯನ್ಸ್  title=
ಇಶಾನ್ ಕಿಶನ್

ನವದೆಹಲಿ: ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ (IPL 2022 mega auction) ಇಶಾನ್ ಕಿಶನ್ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್‌ನನ್ನು ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ಮೊತ್ತಕ್ಕೆ ಖರೀಸಿದೆ. 

ಇದನ್ನೂ ಓದಿ: IPL 2022 Mega Auction:ಮತ್ತೆ ಕೋಲ್ಕತ್ತಾ ನೈಟ್ ರೈಡರ್ಸ್‌ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್

ಇಶಾನ್ ಕಿಶನ್ (Ishan Kishan) ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿಗೆ ಖರೀದಿಸಿತು. ಕಳೆದ ಸೀಸನ್ ನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದ (MI) ಭಾಗವಾಗಿದ್ದರು. ಆದರೆ ತಂಡ ಅವರನ್ನು ಉಳಿಸಿಕೊಳ್ಳಲಿಲ್ಲ. 

 

 

ಅವರ ಮೂಲ ಬೆಲೆ 2 ಕೋಟಿ ರೂ. ಅಂದರೆ, ಅವರು 7 ಪಟ್ಟು ಹೆಚ್ಚು ಹಣಕ್ಕೆ ಮಾರಾಟವಾಗಿದ್ದಾರೆ. ಮುಂಬೈ ಸೇರಿದಂತೆ ಮೆಗಾ ಹರಾಜಿನಲ್ಲಿದ್ದ ಉಳಿದೆಲ್ಲ ತಂಡಗಳು ಇಶಾನ್ ಅವರನ್ನು ಬಿಡ್ ಮಾಡಿವೆ. ರೋಹಿತ್ ಶರ್ಮಾ (Rohith Sharma) ನಾಯಕತ್ವದ ಮುಂಬೈ ತಂಡವು ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಟಗಾರರೊಬ್ಬರ ಮೇಲೆ 10 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದೆ. ಕಳೆದ ಸೀಸನ್ ನಲ್ಲಿ 6.2 ಕೋಟಿ ರೂ. ಪಡೆದಿದ್ದ ಇಶಾನ್ ಇದೀಗ ಸುಮಾರು 9 ಕೋಟಿ ಹೆಚ್ಚು ಮೊತ್ತ ಪಡೆದಿದ್ದಾರೆ.

ಇದನ್ನೂ ಓದಿ:IPL 2022 Mega Auction:ಮತ್ತೆ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ SRH ಸಿಇಒ ಕವಿಯಾ ಮಾರನ್

T20ಯಲ್ಲಿ 23ರ ಹರೆಯದ ಇಶಾನ್ ಕಿಶನ್ ಅವರ ದಾಖಲೆ ಅತ್ಯುತ್ತಮವಾಗಿದೆ. ಅವರು 104 ಇನ್ನಿಂಗ್ಸ್‌ಗಳಲ್ಲಿ 28 ರ ಸರಾಸರಿಯಲ್ಲಿ 2726 ರನ್ ಗಳಿಸಿದ್ದಾರೆ. 2 ಶತಕ ಹಾಗೂ 15 ಅರ್ಧ ಶತಕ ಬಾರಿಸಿದ್ದಾರೆ. ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ನ ಸ್ಟ್ರೈಕ್ ರೇಟ್ 135 ಆಗಿದೆ. ಈ ಕಾರಣದಿಂದಾಗಿ, 5 ಬಾರಿ ಐಪಿಎಲ್ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಅವರನ್ನು ದೊಡ್ಡ ಮೊತ್ತಕ್ಕೆ ಬಿಡ್ ಮಾಡಿದೆ. ಅವರು ಟT20 ವಿಶ್ವಕಪ್‌ಗೂ ಪ್ರವೇಶಿಸಿದ್ದಾರೆ. ಇತ್ತೀಚೆಗೆ, ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯಲ್ಲಿ ಅವರು ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಾಣಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News