ನವದೆಹಲಿ : ಪ್ರತಿಯೊಬ್ಬರೂ ಸಂತೋಷದಿಂದ ಬದುಕಲು ಬಯಸುತ್ತಾರೆ. ತಮ್ಮ ಜೀವನದಲ್ಲಿ ಕಷ್ಟ ದುಃಖ ಎದುರಾಗಲಿ ಎಂದು ಯಾರು ಕೂಡಾ ಬಯಸುವುದಿಲ್ಲ. ಈ ನಿಟ್ಟಿನಲ್ಲಿ ಆಚಾರ್ಯ ಚಾಣಕ್ಯ (Chanakya Niti) ಒಂದು ಮಾತು ಹೇಳುತ್ತಾರೆ. ಕೆಲವರು ಜೀವನದಲ್ಲಿ ಎಷ್ಟು ಅದೃಷ್ಟವಂತರಾಗಿರುತ್ತಾರೆ ಎಂದರೆ, ದುಃಖ ಮತ್ತು ಸಮಸ್ಯೆಗಳು ಅವರ ಹತ್ತಿರವೂ ಸುಳಿಯುವುದಿಲ್ಲವಂತೆ. ಅವರು ಯಾವಾಗಲೂ ತುಂಬಾ ಸಂತೋಷದ ಜೀವನವನ್ನು ನಡೆಸುತ್ತಾರಂತೆ. ಸದಾ ಅವರ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆಯಂತೆ.
ಈ ವಿಷಯಗಳು ನಿಜವಾದ ಸಂತೋಷವನ್ನು ನೀಡುತ್ತವೆ :
ವ್ಯಕ್ತಿಯು ಹಣ ಮತ್ತು ಭೌತಿಕ ಸಂತೋಷಗಳ ಹಿಂದೆ ಓಡುತ್ತಲೇ ಇರುತ್ತಾನೆ. ಇದರಿಂದ ಅವನು ಮತ್ತು ಅವನ ಕುಟುಂಬ ಸಂತೋಷವಾಗಿರಬಹುದು. ಚಾಣಕ್ಯ ನೀತಿ (Chanakya Niti) ಹೇಳುವಂತೆ ಈ ವಸ್ತುಗಳು ಕ್ಷಣಿಕ ಸಂತೋಷವನ್ನು ನೀಡುತ್ತವೆ. ಆದರೆ ಜಗತ್ತಿನಲ್ಲಿ ಕೇವಲ ಎರಡು ವಿಷಯಗಳು ಮಾತ್ರ ಒಬ್ಬ ವ್ಯಕ್ತಿಗೆ ನಿಜವಾದ ಸಂತೋಷವನ್ನು ನೀಡುತ್ತದೆ. ಇವೆರಡನ್ನೂ ತನ್ನ ಜೀವನದಲ್ಲಿ ಹೊಂದಿದ್ದರೆ, ಆ ವ್ಯಕ್ತಿ ಜಗತ್ತಿನಲ್ಲಿ ಅತ್ಯಂತ ಸಂತೋಷದಿಂದ ಇರುವಂತವನಾಗಿರುತ್ತಾನೆ.
ಇದನ್ನೂ ಓದಿ : Atma Ratna Stone Benefits: ಈ ಎರಡು ಹರಳುಗಳನ್ನು ಮನೆಯಲ್ಲಿಟ್ಟರೆ ಭಾಗ್ಯ ಬದಲಾಗಲು ಸಮಯ ಬೇಕಾಗುವುದಿಲ್ಲ
ಬುದ್ಧಿವಂತ ಹೆಂಡತಿ : ಚಾಣಕ್ಯ ನೀತಿಯ ಪ್ರಕಾರ, ಹೆಂಡತಿ ಬುದ್ಧಿವಂತಳಾಗಿರುವ ವ್ಯಕ್ತಿ ಈ ಜಗತ್ತಿನಲ್ಲಿ ಅತ್ಯಂತ ಸಂತೋಷದಾಯಕ ವ್ಯಕ್ತಿ (Chanakya niti for success). ಪತ್ನಿ ಬುದ್ದಿವಂತಳಾಗಿದ್ದರೆ, ತಾಳ್ಮೆಯಿಂದ ಪ್ರತಿ ಕಷ್ಟವನ್ನು ನಿಭಾಯಿಸಲು ಸಹಾಯ ಮಾಡುತ್ತಾಳೆ. ಪತಿಗೆ ಸರಿಯಾದ ಸಲಹೆಯನ್ನು ನೀಡಿ, ಅವನ ಪ್ರಗತಿಗೆ ಸಹಾಯ ಮಾಡುತ್ತಾಳೆ (chanakya niti about women).
ಯೋಗ್ಯ ಮಕ್ಕಳು : ಚಾಣಕ್ಯ ನೀತಿ ಹೇಳುತ್ತದೆ ಯಾರ ಮಕ್ಕಳು ಯೋಗ್ಯರು ಮತ್ತು ವಿಧೇಯರಾಗುತ್ತಾರೆ, ಅವರಿಗೆ ಈ ಭೂಮಿ ಸ್ವರ್ಗದಂತೆ (Chanakya niti about children). ಮಗುವು ಕೆಟ್ಟ ಸಹವಾಸಕ್ಕೆ ಬಲಿಯಾದರೆ, ವ್ಯಕ್ತಿಯ ಬಳಿ ಎಲ್ಲವೂ ಇದ್ದರೂ ಏನೂ ಇಲ್ಲದಂತೆ. ಬಾಕಿ ಎಲ್ಲಾ ಸುಖ ಸಂತೋಷವಿದ್ದರೂ, ಈ ಒಂದು ನೋವಿನಿಂದ ನರಳುವಂತಾಗುತ್ತದೆ.
ಇದನ್ನೂ ಓದಿ : Shagun Shastra : ನಿಮಗೂ ಈ ಶಕುನ ಬಂದರೆ ಅದೃಷ್ಟ ತೆರೆದುಕೊಳ್ಳುತ್ತದೆ; ಭಾರಿ ಲಾಭವಾಗಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.