Indian Railways: ರೈಲ್ವೆ ಪ್ರಯಾಣಿಕರೇ ಗಮನಿಸಿ! ಇಂದಿನಿಂದ ಮತ್ತೆ ಸಿಗಲಿದೆ ಈ ಸೌಲಭ್ಯ

Indian Railways: ನೀವೂ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ಖಂಡಿತವಾಗಿಯೂ ನಿಮಗೆ ಸಮಾಧಾನ ನೀಡಲಿದೆ. ಭಾರತೀಯ ರೈಲ್ವೆಯ ನಿರ್ಧಾರದ ಪ್ರಕಾರ, IRCTC ಇಂದಿನಿಂದ ಪ್ರಯಾಣದ ಸಮಯದಲ್ಲಿ ಎಲ್ಲಾ ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಯಿಸಿದ ಆಹಾರವನ್ನು ನೀಡಲು ಪ್ರಾರಂಭಿಸಿದೆ. 

Written by - Yashaswini V | Last Updated : Feb 14, 2022, 12:12 PM IST
  • ಈಗಾಗಲೇ ಶೇ.80ರಷ್ಟು ರೈಲುಗಳಲ್ಲಿ ಈ ಸೇವೆ ಆರಂಭವಾಗಿದೆ
  • ಇಂದಿನಿಂದ ಶೇ.20ರಷ್ಟು ರೈಲುಗಳಲ್ಲಿ ಆಹಾರ ಸೇವೆ ಆರಂಭವಾಗಿದೆ
  • ಈ ಸೌಲಭ್ಯವನ್ನು 23 ಮಾರ್ಚ್ 2020 ರಂದು ಸ್ಥಗಿತಗೊಳಿಸಲಾಗಿತ್ತು
Indian Railways: ರೈಲ್ವೆ ಪ್ರಯಾಣಿಕರೇ ಗಮನಿಸಿ! ಇಂದಿನಿಂದ ಮತ್ತೆ ಸಿಗಲಿದೆ ಈ ಸೌಲಭ್ಯ title=
Indian railways food service

Indian Railways: ರೈಲ್ವೇ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ಇಂದಿನಿಂದ ರೈಲ್ವೆಯಲ್ಲಿ ಅಗತ್ಯ ಸೇವೆಯೊಂದು ಮತ್ತೆ ಪುನರಾರಂಭಗೊಳ್ಳುವುದರಿಂದ ಈಗ ನಿಮ್ಮ ಪ್ರಯಾಣವು ಇನ್ನಷ್ಟು ಸುಲಭವಾಗಲಿದೆ. ಫೆಬ್ರವರಿ 14 ರಿಂದ ಅಂದರೆ ಇಂದಿನಿಂದ ಎಲ್ಲಾ ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಯಿಸಿದ ಆಹಾರವನ್ನು ನೀಡಲು  ಭಾರತೀಯ ರೈಲ್ವೆ ನಿರ್ಧರಿಸಿದೆ. 23 ಮಾರ್ಚ್ 2020 ರಂದು, ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ರೈಲ್ವೆಯು ಆಹಾರ ಸೇವೆಗಳನ್ನು ಸ್ಥಗಿತಗೊಳಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ.

ಈ ಸೇವೆಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ನಿರ್ಧಾರ:
ಕೋವಿಡ್ ಪ್ರಕರಣಗಳಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ ನಿರ್ಬಂಧಗಳ ಸಡಿಲಿಕೆಯೊಂದಿಗೆ, ರೈಲಿನಲ್ಲಿ ಬೇಯಿಸಿದ ಆಹಾರದ ಸೇವೆಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ಭಾರತೀಯ ರೈಲ್ವೆ (Indian Railways) ನಿರ್ಧರಿಸಿದೆ. 

ಇದನ್ನೂ ಓದಿ -  Apps Banned: ಸರ್ಕಾರದ ದೊಡ್ಡ ಕ್ರಮ, 54 ಚೀನೀ ಅಪ್ಲಿಕೇಶನ್‌ಗಳ ನಿಷೇಧ

ಸೇವೆಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ನಿರ್ಧಾರ:
ರೈಲುಗಳಲ್ಲಿ ಮತ್ತೆ ಬೇಯಿಸಿದ ಆಹಾರವನ್ನು ನೀಡಲು IRCTC ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ಇಂದಿನಿಂದ ಈ ಸೇವೆ ಎಲ್ಲಾ ರೈಲುಗಳಲ್ಲೂ ಆರಂಭವಾಗಲಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ IRCTC ರೆಡಿ-ಟು-ಈಟ್ ಮೀಲ್ ಸೇವೆಯನ್ನು ಪ್ರಾರಂಭಿಸಿತು. ಜನವರಿ, 2022 ರಲ್ಲಿ 80% ರೈಲುಗಳಲ್ಲಿ ಬೇಯಿಸಿದ ಆಹಾರ (Cooked Food) ಸೇವೆಗಳನ್ನು ಮರುಸ್ಥಾಪಿಸಲಾಗಿದೆ.

ಇದನ್ನೂ ಓದಿ -  ಪಿಂಚಣಿ ಬಗ್ಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ ಸರ್ಕಾರ, ತಿಳಿದುಕೊಳ್ಳದಿದ್ದರೆ ಆಗಲಿದೆ ನಷ್ಟ

ವಾಸ್ತವವಾಗಿ, ಈ ಹಿಂದೆ ರೈಲು ನಿಲ್ದಾಣಗಳ ಸ್ವಚ್ಛತೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿತ್ತು. ಹೊಸ ನಿಯಮದ ಪ್ರಕಾರ, ರೈಲ್ವೆ ಆವರಣದಲ್ಲಿ ಯಾರಾದರೂ ಹೊಲಸು ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) ಕೊಳಕು ಹರಡುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ, ಇದರ ಅಡಿಯಲ್ಲಿ ಈಗ ಕಸವನ್ನು ಹರಡುವ ಜನರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News