ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತನ್ನ ಸರಕಾರಿ ಮನೆ '13 ಎಎಎ ಅವೆನ್ಯು'ವನ್ನು ಕಾನ್ಶಿರಾಮ್ ವಿಶ್ರಾಮ ಸ್ಥಳ ಎಂದು ಪರಿವರ್ತಿಸಲು ಬಿಎಸ್ಪಿ ನಾಯಕಿ ಮಾಯಾವತಿ ಶುಕ್ರವಾರದಂದು ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ಎಲ್ಲಾ ಮಾಜಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೆ ತಮ್ಮ ಬಂಗಲೆಗಳನ್ನು ಬಿಡಲು ಆದೇಶ ನೀಡಿತ್ತು. ಈಗ ಈ ಆದೇಶದ ಹಿನ್ನಲೆಯಲ್ಲಿ ಮೇ 21 ರಂದು ಮಾಯಾವತಿಯವರು ತಮ್ಮ ಅಧಿಕೃತ ನಿವಾಸವನ್ನು ಕಾನ್ಶಿರಾಮ್ ಅವರ ಸ್ಮಾರಕವಾಗಿ ಪರಿವರ್ತಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮಾಯಾವತಿ ಅವರು ತಮ್ಮ ಪತ್ರದಲ್ಲಿ ಜನವರಿ 13, 2011 ರಂದು '13 ಎಎಎ ಅವೆನ್ಯೂ' ಅನ್ನು ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ ಅವರ ಸ್ವಾಮ್ಯದ ಸ್ಮಾರಕ ಎಂದು ಘೋಷಿಸಿರುವುದನ್ನು ಸಹ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.