Russia Ukraine War: ಒಳ್ಳೆಯ ಡಾಕ್ಟರ್ ಆಗುವ ಕನಸು ಕಂಡಿದ್ದ ರ‍್ಯಾಂಕ್ ಸ್ಟೂಡೆಂಟ್ ನವೀನ್

ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಾಜ್ಯದ ವಿದ್ಯಾರ್ಥಿಯೋರ್ವ ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾದ ರಾಕೆಟ್ ದಾಳಿಗೆ ಹಾವೇರಿ ಮೂಲದ ನವೀನ್ ಬಲಿಯಾಗಿದ್ದಾರೆ. ಮೃತ ನವೀನ್ ಜತೆ ವಾಸವಿದ್ದ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸದ್ಯದ ಭಯಾನಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

Written by - Zee Kannada News Desk | Last Updated : Mar 1, 2022, 05:47 PM IST
  • ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ರಾಜ್ಯದ ವಿದ್ಯಾರ್ಥಿಯೋರ್ವ ಪ್ರಾಣ ಕಳೆದುಕೊಂಡಿದ್ದಾರೆ
  • ಮೃತ ನವೀನ್ ಜೊತೆಗಿದ್ದ ಭಾರತೀಯ ವಿದ್ಯಾರ್ಥಿಗಳು ಯುದ್ಧಭೂಮಿಯ ಕರಾಳ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ
  • ಉಕ್ರೇನ್​ನಲ್ಲಿ ಸದ್ಯದ ಪರಿಸ್ಥಿತಿ ತುಂಬಾ ಭಯಾನಕವಾಗಿದೆ ಎಂದು ನವೀನ್ ಸ್ನೇಹಿತರ ಅಳಲು
Russia Ukraine War: ಒಳ್ಳೆಯ ಡಾಕ್ಟರ್ ಆಗುವ ಕನಸು ಕಂಡಿದ್ದ ರ‍್ಯಾಂಕ್ ಸ್ಟೂಡೆಂಟ್ ನವೀನ್  title=
ಒಳ್ಳೆಯ ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದ ನವೀನ್

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ(Russia Ukraine War)ಯಲ್ಲಿ ಮಂಗಳವಾರ(ಮಾ.1) ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ (21) ಮೃತಪಟ್ಟಿದ್ದಾರೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರ(Kharkiv City)ದಲ್ಲಿದ್ದ ವಿದ್ಯಾರ್ಥಿ ನವೀನ್ ಶೆಲ್ ದಾಳಿಗೆ ಬಲಿಯಾಗಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ವೇಳೆ ಕರ್ನಾಟಕದ ವಿದ್ಯಾರ್ಥಿ ನವೀನ್(Naveen Shekarappa Gyanagoudar) ಶೆಲ್ ದಾಳಿಗೆ ಅಸುನೀಗಿರೆಂಬ ಸುದ್ದಿ ಶಿವರಾತ್ರಿ ದಿನವೇ ಬರಸಿಡಿಲಿನಂತೆ ಅಪ್ಪಳಿಸಿದೆ. ತಾನೊಬ್ಬ ಉತ್ತಮ ವೈದ್ಯನಾಗಬೇಕು ಎಂಬ ಕನಸು ಹೊತ್ತು ನವೀನ್ ಉಕ್ರೇನ್ ಗೆ ತೆರಳಿದ್ದರು. ಭಾರತದಲ್ಲಿನ ದುಬಾರಿ ವೈದ್ಯ ಶಿಕ್ಷಣ ಕೈಗೆಟುಕದೇ ಅವರು ಉಕ್ರೇನ್ʼಗೆ ತೆರಳಿದ್ದರು. ಯುದ್ಧವು ಅವರ ಕನಸನ್ನು ನುಚ್ಚುನೂರು ಮಾಡಿದೆ. ಅನೇಕ ಭಾರತೀಯ ವಿದ್ಯಾರ್ಥಿಗಳು ಇನ್ನೂ ಖಾರ್ಕೀವ್ ನಗರದಲ್ಲೇ ಸಿಲುಕೊಂಡಿದ್ದಾರೆಂಬ ಮಾಹಿತಿ ಇದೆ.

ಇದನ್ನೂ ಓದಿ: Russia Ukraine Crisis: ಪ್ರಧಾನಿ ಮೋದಿ ‘ಮಿಸ್ಸಿಂಗ್ ಇನ್ ಆ್ಯಕ್ಷನ್’ ಆಗಿದ್ದಾರೆ- ರಾಹುಲ್ ಗಾಂಧಿ

ಒಳ್ಳೆಯ ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದ ನವೀನ್

ರ‍್ಯಾಂಕ್ ಸ್ಟೂಡೆಂಟ್ ಆಗಿದ್ದ ನವೀನ್ ಅವರು ಭಾರತಕ್ಕೆ ತೆರಳಿ ಒಬ್ಬ ಒಳ್ಳೆಯ ಡಾಕ್ಟರ್(Docter) ಆಗಬೇಕೆಂಬ ಕನಸು ಕಂಡಿದ್ದರು. ವೈದ್ಯಕೀಯ ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳಿ ತಾನೊಬ್ಬ ಉತ್ತಮ ವೈದ್ಯನಾಗಿ ತನ್ನ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ನವೀನ್ ಅಂದುಕೊಂಡಿದ್ದರಂತೆ. ಆದರೆ ವಿಧಿ ಅವರನ್ನು ಇಂದು ಬಲಿ ತೆಗೆದುಕೊಂಡಿದೆ.

ಮೃತ ನವೀನ್ ಜೊತೆಗಿದ್ದ ಭಾರತೀಯ ವಿದ್ಯಾರ್ಥಿಗಳು ಯುದ್ಧಭೂಮಿ(Russia Ukraine Crisis)ಯ ಕರಾಳ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಉಕ್ರೇನ್​ನಲ್ಲಿ ಸದ್ಯದ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ಯಾವಾಗ ಏನಾಗುತ್ತೋ ಅನ್ನೋ ಭಯ ನಮ್ಮನ್ನು ಕಾಡುತ್ತಿದೆ. ಭಯದಲ್ಲಿಯೇ ನಾವು ದಿನ ದೂಡುತ್ತಿದ್ದೇವೆ. ಯಾರೂ ಕೂಡ ನಮ್ಮ ರಕ್ಷಣೆಗೆ ಮುಂದೆ ಬರುತ್ತಿಲ್ಲ. ಏನು ಮಾಡಬೇಕೆಂಬುದೇ ನಮಗೆ ಗೊತ್ತಾಗುತ್ತಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ.  

ಇದನ್ನೂ ಓದಿ: Russia-Ukraine War: ಭಾರತೀಯ ವಿದ್ಯಾರ್ಥಿಯ ಸಾವು ಹಿನ್ನೆಲೆ, ಸಮನ್ಸ್ ಜಾರಿಗೊಳಿಸಿದ ಭಾರತ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News