ನವದೆಹಲಿ: Betel Leaves Tips And Tricks - ಹಿಂದೂ ಧರ್ಮದಲ್ಲಿ ವೀಳ್ಯದೆಲೆಯನ್ನು ಅತ್ಯಂತ ಪರಿಶುದ್ಧ ಹಾಗೂ ಮಂಗಳಕರ ಎಂದುಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿಯೇ ಇದನ್ನು ಸಾಮಾನ್ಯವಾಗಿ ಪ್ರತಿ ಪೂಜೆಯಲ್ಲಿ ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ವೀಳ್ಯದೆಲೆ ಮತ್ತು ಲವಂಗಕ್ಕೆ ಸಂಬಂಧಿಸಿದ ವಿಶೇಷ ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನೂ ಅನುಸರಿಸಿದರೆ ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗುತ್ತದೆ ಎನ್ನಲಾಗಿದೆ. ಧನ ಲಾಭಕ್ಕಾಗಿ ವಿಳ್ಯದೆಲೆಗೆ ಸಂಬಂಧಿಸಿದ ಯಾವ ಉಪಾಯಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹಣಕಾಸಿನ ಮುಗ್ಗಟ್ಟು ನಿವಾರಣೆ (Clove Tricks For Money)
ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇದ್ದರೆ ಅದನ್ನು ತಕ್ಷಣವೇ ಹೋಗಲಾಡಿಸಲು ಎರಡು ಲವಂಗವನ್ನು ಮತ್ತು ಒಂದು ಬತ್ತಾಸನ್ನು ದೇಸಿ ತುಪ್ಪದಲ್ಲಿ ನೆನೆಸಿದ ವೀಳ್ಯದೆಲೆಯಲ್ಲಿ ಇಟ್ಟುಕೊಳ್ಳಿ. ಇದನ್ನು ಮಾಡಿದ ನಂತರ, ಅದನ್ನು ಬೆಂಕಿಯಲ್ಲಿ ಸುಟ್ಟುಹಾಕಿ. ಹೋಳಿ ಹಬ್ಬದ ಸಂದರ್ಭದಲ್ಲಿ ಈ ಉಪಾಯವನ್ನು ಅನುಸರಿಸುವುದರಿಂದ ಇನ್ನಷ್ಟು ಲಾಭಗಳು ಸಿಗುತ್ತವೆ.
ಕೆಲಸದಲ್ಲಿ ಯಶಸ್ವಿಯಾಗಲು
ಸತತ ಪ್ರಯತ್ನ ಮಾಡಿದರೂ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದಾದಲ್ಲಿ ಯಾವುದೇ ಬುಧವಾರದಂದು 11 ವೀಳ್ಯದೆಲೆಗಳಲ್ಲಿ 5 ಲವಂಗಗಳನ್ನು ಗಣೇಶನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಬೇಗನೇ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಮನೆಯಲ್ಲಿನ ಅಪಶ್ರುತಿಯನ್ನು ಹೋಗಲಾಡಿಸಲು (Clove Tricks For Marriage) ಈ ಉಪಾಯ ಅನುಸರಿಸಿ
ಮನೆಯಲ್ಲಿ ಸದಾ ಜಗಳ, ವ್ಯಾಜ್ಯಗಳು ನಡೆಯುತ್ತಿದ್ದರೆ, ಅವುಗಳನ್ನು ತಪ್ಪಿಸಲು ಒಂದು ವೀಳ್ಯದೆಲೆಗೆ (Clove Tricks For Love) ಎರಡು ಕರ್ಪೂರ ಮತ್ತು 2 ಲವಂಗಗಳನ್ನು ಬೆರೆಸಿ ಶನಿವಾರದಂದು ಶನಿದೇವರ ಅಥವಾ ಅಶ್ವತ್ಥ ಮರದ ಕೆಳಗೆ ಇಡಿ. ಹೀಗೆ ಮಾಡುವುದರಿಂದ ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ.
ಇದನ್ನೂ ಓದಿ-ಮನೆಯ ಈ ಮೂಲೆಯಲ್ಲಿ ಈ ಹೂವಿನ ಗಿಡ ನೆಟ್ಟರೆ ಸಿಗಲಿದೆ ಭಾರೀ ಧನ ಸಂಪತ್ತು ಗೌರವ
ಸುಖ-ಸಮೃದ್ಧಿಗಾಗಿ ಈ ಉಪಾಯ ಅನುಸರಿಸಿ
ಮನೆಯಲ್ಲಿ ಸುಖ ಮತ್ತು ಸಮೃದ್ಧಿಗಾಗಿ ಮಂಗಳವಾರ ಅಥವಾ ಶನಿವಾರದಂದು ಹನುಮನಿಗೆ ವಿಳ್ಯದೆಲೆಯನ್ನು ಅರ್ಪಿಸಿ. ಈ ವೀಳ್ಯದೆಲೆಗೆ ಸೌಂಫ, ಕ್ಯಾಟೆಚು, ಗುಲ್ಕಂದ್ ಬೆರೆಸಲು ಮರೆಯಬೇಡಿ. ವೀಳ್ಯದೆಲೆಯ ಈ ಉಪಾಯವನ್ನು 7 ವಾರಗಳ ಕಾಲ ನಿರಂತರವಾಗಿ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ.
ಇದನ್ನೂ ಓದಿ-Garlic Tea Benefits: ಬೆಳ್ಳುಳ್ಳಿ ಚಹಾ ಸೇವನೆಯ 7 ಅದ್ಭುತ ಲಾಭಗಳು ನಿಮಗೆ ತಿಳಿದಿವೆಯೇ?
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-ಬಹಳ ಸಂದೇಹ ಸ್ವಭಾವದವರಾಗಿರುತ್ತಾರೆ ಈ ಮೂರು ರಾಶಿಯವರು, ಸಂಗಾತಿಯ ಪ್ರತಿ ನಡೆಯ ಮೇಲೆ ಇಟ್ಟಿರುತ್ತಾರೆ ಕಣ್ಣು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.