ಸೌತೆ ಕಾಯಿ ತಿಂದ ಕೂಡಲೇ ನೀರು ಕುಡಿಯುವ ತಪ್ಪನ್ನು ಎಂದು ಮಾಡಬೇಡಿ

ಸೌತೆಕಾಯಿಯನ್ನು ತಿಂದ ನಂತರ ನೀರು ಕುಡಿಯುವವರು ಅಂತಹ ತಪ್ಪನ್ನು ಮಾಡಲೇಬಾರದು. ಏಕೆಂದರೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಸೌತೆಕಾಯಿಯಲ್ಲಿ ಈಗಾಗಲೇ ಶೇ 95ರಷ್ಟು ನೀರಿನ ಅಂಶ  ಇರುತ್ತದೆ.  

Written by - Ranjitha R K | Last Updated : Mar 12, 2022, 01:05 PM IST
  • ಸೌತೆಕಾಯಿ ತಿಂದ ನಂತರ ನೀರು ಕುಡಿಯುವುದು ಅಪಾಯಕಾರಿ
  • ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
  • ಈ ಅಭ್ಯಾಸವನ್ನು ಇಂದೇ ಬದಲಾಯಿಸಿಕೊಳ್ಳಿ
ಸೌತೆ ಕಾಯಿ ತಿಂದ ಕೂಡಲೇ ನೀರು ಕುಡಿಯುವ ತಪ್ಪನ್ನು ಎಂದು ಮಾಡಬೇಡಿ title=
ಸೌತೆಕಾಯಿ ತಿಂದ ನಂತರ ನೀರು ಕುಡಿಯುವುದು ಅಪಾಯಕಾರಿ (file photo)

ನವದೆಹಲಿ : ಕೆಲವರಿಗೆ ಅದೇನೇ ಆಗಲಿ ಏನನ್ನಾದರೂ ತಿಂದ ಕೂಡಲೇ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಹೀಗೆ ಸೌತೆಕಾಯಿ ತಿಂದ ಕೂಡಲೇ ಕೂಡಾ ನೀರು ಕುಡಿಯುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ (water after eating cucumber). ಹಾಗೆ ಮಾಡುವುದರಿಂದ ಆರೋಗ್ಯಕ್ಕೆ ಬಹಳಷ್ಟು ಹಾನಿಯಾಗುತ್ತದೆ (Side effects of drinking water after eating cucumber). ಸೌತೆಕಾಯಿ 95 ಪ್ರತಿಶತದಷ್ಟು ನೀರೂ ಹೊಂದಿರುವ ತರಕಾರಿಯಾಗಿದೆ. ಇದು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ಕೆ ಅನ್ನು ಹೊಂದಿರುತ್ತದೆ. ಸಿಲಿಕಾದಂತಹ ಅಗತ್ಯ ಪೋಷಕಾಂಶಗಳು ಅದರ ಸಿಪ್ಪೆಯಲ್ಲಿ ಕಂಡುಬರುತ್ತವೆ. 

ಜೀರ್ಣಕ್ರಿಯೆ ಸಮಸ್ಯೆಯಾಗಬಹುದು :
ಸೌತೆಕಾಯಿಯು ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ (benefits of cucumber).  ಅಪಾರ ಪೋಷಕಾಂಶಗಳನ್ನು ಹೊಂದಿರುವ ಸೌತೆಕಾಯಿಯನ್ನು ತಿಂದ ಕೂಡಲೇ ನೀರು ಕುಡಿಯಬಾರದು. ಒಂದು ವೇಳೆ ಸೌತೆಕಾಯಿ ತಿಂದ ಕೂಡಲೇ ನೀರು ಕುಡಿದರೆ ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ತೊಂದರೆಯಾಗುತ್ತದೆ. ಸೌತೆಕಾಯಿ ಸೇವನೆ ಬೇಸಿಗೆಯಲ್ಲಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ (benfits of cucumber in summer). ಏಕೆಂದರೆ ಇದರಲ್ಲಿ ವಿಟಮಿನ್ ಸಿ, ಫೈಬರ್, ಆ್ಯಂಟಿ ಆಕ್ಸಿಡೆಂಟ್ ಇದ್ದು ಇದು ದೇಹದ ಫ್ರೀ ರಾಡಿಕಲ್ ಗಳನ್ನು ತೆಗೆದುಹಾಕುತ್ತದೆ. 

ಇದನ್ನೂ ಓದಿ : Health Tips: ಹಾಗಲಕಾಯಿ ಮತ್ತದರ ಎಲೆಗಳು ಹೇಗೆ ಪ್ರಯೋಜನಕಾರಿ, ಇಲ್ಲಿದೆ ಮಾಹಿತಿ

ಸೌತೆಕಾಯಿ ಮೂಳೆಗಳನ್ನು ಬಲಪಡಿಸುತ್ತದೆ :
ಸೌತೆಕಾಯಿಯು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುತ್ತದೆ. ಸೌತೆಕಾಯಿಯ ಸಿಪ್ಪೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. . 

ಸೌತೆಕಾಯಿ ತಿಂದ ನಂತರ ನೀರು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳು :
1.ಸೌತೆಕಾಯಿ ತಿಂದ ನಂತರ ನೀರು ಕುಡಿಯುವುದರಿಂದ ಆಹಾರ ಪದಾರ್ಥಗಳನ್ನು ಜೀರ್ಣಗೊಳಿಸುವ ಹೊಟ್ಟೆಯ ಆಸಿಡ್ ಸರಿಯಾಗಿ ಕೆಲಸ ಮಾಡುವುದಿಲ್ಲ.
2. ಸೌತೆಕಾಯಿ ತಿಂದ ನಂತರ ನೀರು ಕುಡಿದರೆ ಲೂಸ್ ಮೋಷನ್ (loose motion) ಸಮಸ್ಯೆ  ಎದುರಿಸಬೇಕಾಗುತ್ತದೆ. 
3. ಸೌತೆಕಾಯಿಯ ತಿಂದ ನಂತರ ನೀರು ಕುಡಿಯುವುದರಿಂದ ದೇಹದ ಪಿಹೆಚ್ ಮಟ್ಟ ಏರುಪೇರಾಗುತ್ತದೆ. 

ಇದನ್ನೂ ಓದಿ :  ಕಿರಿಯ ವಯಸ್ಸಿನಲ್ಲಿಯೇ ಹಾರ್ಟ್ ಅಟ್ಯಾಕ್ ಬಾರದಂತೆ ನೋಡಿಕೊಳ್ಳುವುದು ಹೇಗೆ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News