4 ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ, ಗಗನಕ್ಕೇರಿದ ತರಕಾರಿ ಬೆಲೆ

   

Last Updated : Jun 4, 2018, 03:25 PM IST
4 ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ, ಗಗನಕ್ಕೇರಿದ ತರಕಾರಿ ಬೆಲೆ title=

ನವದೆಹಲಿ: 10 ದಿನಗಳ ರೈತರ ಪ್ರತಿಭಟನೆ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.ರೈತರು ದೇಶಾದ್ಯಂತ 'ಗಾಂವ್ ಬಂದ್' ಆಚರಿಸುವ ಮೂಲಕ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಬಿಸಿ ಈಗಾಗಲೇ ನಗರ ಪ್ರದೇಶಕ್ಕೆ ತಟ್ಟಿದ್ದು, ತರಕಾರಿ ಮತ್ತು ಕೃಷಿ ಉತ್ಪನ್ನಗಳ ಬೆಲೆ ಗಗನಕ್ಕೇರಿವೆ. ದೆಹಲಿಯೊಂದರಲ್ಲಿಯೇ ಮೇ 31 ರಂದು ಪ್ರತಿ ಕೆಜಿ ಗೆ 40 ರೂಪಾಯಿ ಇದ್ದ ಶಿಮ್ಲಾ ಮೆಣಸಿನಕಾಯಿ ಈಗ 50 ರೂಗೆ ಹೆಚ್ಚಳವಾಗಿದೆ. ಟಮೊಟೋ 20 ರಿಂದ 25 ರೂ ಗೆ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

ರೈತರು ಕೃಷಿ ಸಾಲಮನ್ನಾ, ಸ್ವಾಮಿನಾಥನ್ ವರದಿ ಜಾರಿ, ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಪ್ರತಿಭಟನೆಯ ಕುರಿತಾಗಿ ಟ್ವೀಟ್ ಮಾಡಿರುವ ಸಿಪಿಎಂ ನಾಯಕ ಸೀತಾರಾಂ ಯೆಚೂರಿ" ರೈತರು ಇಡೀ ದೇಶದ ಹೊಟ್ಟೆಯನ್ನು ತುಂಬಿಸುತ್ತಾರೆ,ಆದರೆ ಮೋದಿಯ ಸಚಿವರು ಅನ್ನದಾತರ ಪ್ರತಿಭಟನೆಯನ್ನು ಪ್ರಚಾರಕ್ಕಾಗಿ ಎಂದು ವ್ಯಂಗ್ಯವಾಡುತ್ತಾರೆ.ಈ ಸರ್ಕಾರ ತನ್ನ ಪ್ರಚಾರಕ್ಕಾಗಿ 4,343 ಕೋಟಿ ರೂಗಳನ್ನು ವ್ಯಹಿಸಿದೆ.ಆದರೆ ರೈತರ ಪಾಲನ್ನು ನಿಡಲಿಕ್ಕೆ ಯಾವುದೇ ಹಣವಿಲ್ಲ" ಎಂದು ಮೋದಿ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.

Trending News