ನವದೆಹಲಿ : 7th Pay Commission : ಕೇಂದ್ರ ಉದ್ಯೋಗಿಗಳಿಗೆ ಮತ್ತೊಮ್ಮೆ ಒಳ್ಳೆಯ ಸುದ್ದಿ ಸಿಗಲಿದೆ. ಡಿಎ ನಂತರ, ಸರ್ಕಾರವು ಈಗ ಮತ್ತೊಂದು ಭತ್ಯೆಯನ್ನು ಹೆಚ್ಚಿಸುವ ಚಿಂತನೆ ನಡೆಸುತ್ತಿದೆ. ಈ ಮೂಲಕ ನೌಕರರ ವೇತನ ಮತ್ತೊಮ್ಮೆ ಹೆಚ್ಚಾಗಲಿದೆ (Salary Hike). ಮಾಹಿತಿಯ ಪ್ರಕಾರ, ಡಿಎ ಹೆಚ್ಚಳದ (DA Hike) ನಂತರ, ಈಗ ಎಚ್‌ಆರ್‌ಎ (HRA) ಹೆಚ್ಚಳವನ್ನೂ ಘೋಷಿಸುವ ಸಾಧ್ಯತೆ ಇದೆ.
ಉದ್ಯೋಗಿಗಳ ಡಿಎ ಶೇ.34ಕ್ಕೆ ಏರಿಕೆ :
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸುದೀರ್ಘ ನಿರೀಕ್ಷೆಯ ನಂತರ ಇತ್ತೀಚೆಗಷ್ಟೇ ತುಟ್ಟಿಭತ್ಯೆಯಲ್ಲಿ 3% ಹೆಚ್ಚಳವನ್ನು ಘೋಷಿಸಲಾಗಿದೆ (DA Hike). ಮಾರ್ಚ್ ತಿಂಗಳ ಸಂಬಳದ ಜೊತೆಗೆ ಹೆಚ್ಚಿದ ಡಿಎ ಲಾಭವೂ ನೌಕರರಿಗೆ ಸಿಕ್ಕಿದೆ. ಇದರೊಂದಿಗೆ, ಈಗ HRA ಕೂಡ ಶೀಘ್ರದಲ್ಲೇ ಹೆಚ್ಚಳವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ : Amul Milk: ಹಣದುಬ್ಬರದ ಮತ್ತೊಂದು ಹೊಡೆತ! ಹೆಚ್ಚಾಗಲಿದೆ ಅಮೂಲ್ ಹಾಲಿನ ದರ
HRA ಹೆಚ್ಚಾಗುವ ನಿರೀಕ್ಷೆಯಿದೆ :
DA ಹೆಚ್ಚಿಸಿದ ಬಳಿಕ HRA ಹೆಚ್ಚಳದ ನಿರೀಕ್ಷೆಯೂ ಹೆಚ್ಚಿದೆ. ಕಳೆದ ವರ್ಷ ಜುಲೈನಲ್ಲಿ ಎಚ್‌ಆರ್‌ಎ ಹೆಚ್ಚಿಸಲಾಗಿತ್ತು. ನಂತರ ಡಿಎಯನ್ನೂ ಶೇ.28ಕ್ಕೆ ಹೆಚ್ಚಿಸಲಾಗಿತ್ತು. ಈಗ ಡಿಎ ಶೇ.34ಕ್ಕೆ ಹೆಚ್ಚಿಸಿರುವುದರಿಂದ ಎಚ್ ಆರ್ ಎಯಲ್ಲಿ ಕೂಡಾ ತಿದ್ದುಪಡಿ ಮಾಡಬಹುದು.
HRA ಅನ್ನು ಹೇಗೆ ನಿರ್ಧರಿಸಲಾಗುತ್ತದೆ ? :
ಸರ್ಕಾರಿ ನೌಕರರಿಗೆ HRA ಅನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂದು ನೋಡೋಣ.
50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು 'X' ವರ್ಗದ ಅಡಿಯಲ್ಲಿ ಬರುತ್ತವೆ. 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರ 'ವೈ' ವರ್ಗಕ್ಕೆ ಸೇರುತ್ತದೆ. 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು 'Z' ವರ್ಗದ ಅಡಿಯಲ್ಲಿ ಬರುತ್ತವೆ. ಎಲ್ಲಾ ಮೂರು ವರ್ಗಗಳಿಗೆ ಕನಿಷ್ಠ HRA 5400, 3600 ಮತ್ತು 1800 ರೂ ಆಗಿರುತ್ತದೆ.
ಇದನ್ನೂ ಓದಿ : Petrol Diesel Price Hike: ಪೆಟ್ರೋಲ್-ಡೀಸೆಲ್ ಮತ್ತೆ ದುಬಾರಿ
HRA ಅನ್ನು ಎಷ್ಟು ಹೆಚ್ಚಿಸಬಹುದು ?:
ಅಂತೆಯೇ, ಉದ್ಯೋಗಿಯ HRA ಅವರು ಕೆಲಸ ಮಾಡುವ ನಗರದ ವರ್ಗದಿಂದ ನಿರ್ಧರಿಸಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಎಕ್ಸ್ ವರ್ಗದ ನಗರಗಳಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸರ್ಕಾರಿ ನೌಕರರ ಎಚ್‌ಆರ್‌ಎ ಡಿಎಯಂತೆಯೇ ಶೇಕಡಾ 3 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ, ಈ ನಗರಗಳ ಉದ್ಯೋಗಿಗಳು ಮೂಲ ವೇತನದ ಶೇಕಡಾ 27 ರಷ್ಟು HRA ಅನ್ನು ಪಡೆಯುತ್ತಾರೆ. Y ವರ್ಗದ ನಗರಗಳಿಗೆ HRA ನಲ್ಲಿ 2 ಶೇಕಡಾ ಹೆಚ್ಚಳ ಸಾಧ್ಯ. ಪ್ರಸ್ತುತ, ಈ ಉದ್ಯೋಗಿಗಳು ಶೇಕಡಾ 18-20 HRA ಪಡೆಯುತ್ತಾರೆ. ಅದೇ ಸಮಯದಲ್ಲಿ, Z ವರ್ಗದ ನಗರಗಳಿಗೆ 1 ಪ್ರತಿಶತ HRA ಅನ್ನು ಹೆಚ್ಚಿಸಬಹುದು. ಅವರಿಗೆ ಪ್ರಸ್ತುತ ಶೇ.9-10 ದರದಲ್ಲಿ ಎಚ್‌ಆರ್‌ಎ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.