ರಾಜಧಾನಿ ಖ್ಯಾತಿಯ ಚೇತನ್ ಚಂದ್ರ ʼಸಿ-15ʼ ಸಿನಿಮಾ ಅನೌನ್ಸ್

Written by - YASHODHA POOJARI | Last Updated : Apr 11, 2022, 01:21 PM IST
  • ಚೇತನ್ ಚಂದ್ರ ಅಭಿನಯದ 'ಸಿ-15ʼ ಸಿನಿಮಾ ಅನೌನ್ಸ್
  • ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ
  • ಯುವ ನಿರ್ದೇಶಕ ಅಗ್ನಿ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ
ರಾಜಧಾನಿ ಖ್ಯಾತಿಯ ಚೇತನ್ ಚಂದ್ರ ʼಸಿ-15ʼ ಸಿನಿಮಾ ಅನೌನ್ಸ್  title=
Chethan Chandra

ಪಿಯುಸಿ', 'ರಾಜಧಾನಿ' 'ಕುಂಭ ರಾಶಿ' ಜಾತ್ರೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರತಿಭಾನ್ವಿತ ನಾಯಕ ನಟ ಚೇತನ್ ಚಂದ್ರ(Chethan Chandra)ಗೆ ಹುಟ್ಟುಹಬ್ಬದ ಸಂಭ್ರಮ. ಚೇತನ್ ಬರ್ತ್ ಡೇ ಪ್ರಯುಕ್ತ ʼಸಿ-15ʼ ಸಿನಿಮಾ ಅನೌನ್ಸ್ ಆಗಿದೆ. ಜೊತೆಗೆ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ.

​ಇದನ್ನು ಓದಿ: 'ಬೆಂಗಳೂರು ಬಾಯ್ಸ್' ಟೀಸರ್ ರಿಲೀಸ್‌.. ಅಂತ, ರಣಧೀರ, ಓಂ ಸಿನಿಮಾ ನೆನಪಿಸಿದ ಫಸ್ಟ್‌ ಲುಕ್‌!

ಫಸ್ಟ್ ಲುಕ್ ರಿಲೀಸ್ ಮಾಡಿದ ನಿರ್ಮಾಪಕರಾದ ಭಾಮಾ ಹರೀಶ್-ಪ್ರಕಾಶ್: ಚೇತನ್ ಚಂದ್ರ ನಟನೆಯ ʼಸಿ-15ʼ  ಸಿನಿಮಾದ ಫಸ್ಟ್ ಲುಕ್‌ಅನ್ನು ನಿರ್ಮಾಪಕರಾದ ಭಾಮಾ ಹರೀಶ್, ರಂಗಿತರಂಗ ಸಿನಿಮಾ ಖ್ಯಾತಿಯ ಪ್ರಕಾಶ್, ಅಭಿಮಾನಿಗಳ ಸಮ್ಮುಖದಲ್ಲಿಯೇ ಬಿಡುಗಡೆಗೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಚೇತನ್ ಚಂದ್ರ ಕುಟುಂಬಸ್ಥರು ನಮಗೆ ಹಳೆಯ ಪರಿಚಯ. ಅವರ ಎಲ್ಲಾ ಸಿನಿಮಾ ನೋಡುತ್ತಾ ಬಂದಿದ್ದೇನೆ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ ಮತ್ತು ಯುವ ನಿರ್ದೇಶಕ ಅಗ್ನಿ ಅವರಿಗೆ ಒಳ್ಳೆಯದಾಗಲಿ ಎಂದು ನಿರ್ಮಾಪಕ ಭಾಮಾ ಹರೀಶ್ ಶುಭಾಶಯ ಕೋರಿದ್ದಾರೆ.

ಪೋಸ್ಟರ್ ತುಂಬಾ ಚೆನ್ನಾಗಿ ಬಂದಿದೆ. ಚೇತನ್ ಹೊಸ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಅದಷ್ಟು ಬೇಗ ಚೇತನ್ ಇನ್ನೊಂದು ಸಿನಿಮಾ ಮಾಡಲಿ ಎಂದು ನಿರ್ಮಾಪಕ ಪ್ರಕಾಶ್ (Prakash) ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು.

ಇದನ್ನು ಓದಿ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ʼಅಮೆರಿಕಾ ಅಮೆರಿಕಾʼ ಸಿನಿಮಾಗೆ 25 ವರ್ಷ ಪೂರ್ಣ

ಆಂಕರ್, ಮಾಡೆಲ್ ಹಾಗೂ ಸೀರಿಯಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿರುವ ಯುವ ನಿರ್ದೇಶಕ ಅಗ್ನಿ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಲವ್ ಕಂ ಆಕ್ಷನ್ ಥ್ರಿಲ್ಲರ್ ಜಾನರ್‌ನಲ್ಲಿ‌ ಮೂಡಿ ಬರಲಿರುವ ಈ ಹೊಸ ಸಿನಿಮಾಗೆ ತ್ರಿಬಲ್ ಸಿ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡಿದೆ. ಸದ್ಯದಲ್ಲಿಯೇ ಸಿನಿಮಾದ ಮುಹೂರ್ತ‌ ನೆರವೇರಿಸಲು ಚಿತ್ರತಂಡ ಪ್ಲ್ಯಾನ್ ಹಾಕಿದ್ದು, ಆ ದಿನವೇ ಟೈಟಲ್ ಹಾಗೂ‌ ಉಳಿದ ಸ್ಟಾರ್ ಕಾಸ್ಟ್ ಹಾಗೂ ತಂತ್ರಜ್ಞರ ಮಾಹಿತಿ ನೀಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News