ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಎಸ್.ಈಶ್ವರಪ್ಪರನ್ನು ಬಂಧಿಸುವಂತೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ‘ಸಾವಿನ ಮನೆಯಲ್ಲಿ ರಾಜಕಾರಣ ನಡೆಸುವ ರಣಹದ್ದುಗಳು ಬೀದಿಗೆ ಇಳಿದಿವೆ!’ ಎಂದು ಟೀಕಿಸಿದೆ.
‘ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದಾಗ ಮನೆಯಲ್ಲಿ ಕೂತ್ತಿದ್ದ, ಹರ್ಷನ ಕೊಲೆಯಾದಾಗ ಮೌನಕ್ಕೆ ಶರಣಾದ, ಮೂಲಭೂತವಾದಿಗಳು ವಸ್ತ್ರ ಸಂಹಿತೆ ವಿರೋಧಿಸಿದಾಗ ಕಾನೂನು ನೆರವು ನೀಡಿದ ರಣಹದ್ದುಗಳು ಮತ್ತೆ ಬೀದಿಗಿಳಿದಿವೆ!’ ಎಂದು ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದೆ.
ಸದಾರಮೆ ಪಾತ್ರಧಾರಿ ಯಾರು, ಅದರ ಏಕಾಂಗಿ ಪ್ರೇಕ್ಷಕ ಯಾರು ಎಂಬುದು ಲೋಕಕ್ಕೆ ತಿಳಿದಿದೆ.
ಸಂತೋಷ್ ಪಾಟೀಲ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ಸುಳ್ಳೋ?
ಕಾಂಗ್ರೆಸ್ ಪಕ್ಷದಿಂದ ಸಂತೋಷನನ್ನು ವಜಾಗೊಳಿಸಿದ್ದು ಸುಳ್ಳೋ?
ಈ ಎರಡು ವಿಚಾರದ ಸತ್ಯಾಸತ್ಯತೆ ತೆರೆದಿಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ?#40PercentCONgressToolkit pic.twitter.com/tWPtQVJvyb
— BJP Karnataka (@BJP4Karnataka) April 14, 2022
ಇದನ್ನೂ ಓದಿ: "ಆರೋಗ್ಯ ಸಚಿವ ಸುಧಾಕರ್ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ"
ಬಿಜೆಪಿ ಸರ್ಕಾರ ಸದಾರಮೆ ನಾಟಕ ಮಾಡುವ ಬದಲು ಈಶ್ವರಪ್ಪರನ್ನು ಬಂಧಿಸುವಂತೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು ನೀಡಿದೆ. ‘ಸದಾರಮೆ ಪಾತ್ರಧಾರಿ ಯಾರು, ಅದರ ಏಕಾಂಗಿ ಪ್ರೇಕ್ಷಕ ಯಾರು ಎಂಬುದು ಲೋಕಕ್ಕೆ ತಿಳಿದಿದೆ. ಸಂತೋಷ್ ಪಾಟೀಲ್, ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ಸುಳ್ಳೋ? ಕಾಂಗ್ರೆಸ್ ಪಕ್ಷದಿಂದ ಸಂತೋಷ್ನನ್ನು ವಜಾಗೊಳಿಸಿದ್ದು ಸುಳ್ಳೋ? ಈ ಎರಡು ವಿಚಾರದ ಸತ್ಯಾಸತ್ಯತೆ ತೆರೆದಿಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ?’ ಎಂದು ಪ್ರಶ್ನಿಸಿದೆ.
ಅಂದು ರಾಜಕೀಯ ಪಿತೂರಿಗೆ, ವೀರಶೈವ ಲಿಂಗಾಯತರನ್ನು ಧರ್ಮದ ಹೆಸರಿನಲ್ಲಿ @INCKarnataka ಮುರಿಯಲು ಪ್ರಯತ್ನಿಸಿತ್ತು.
ಇಂದು ತನ್ನದೇ ಮೂಲ ಕಾರ್ಯಕರ್ತನನ್ನು ರಾಜಕೀಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಲಿಕೊಟ್ಟು ಜಾತಿರಾಜಕಾರಣ ಮಾಡಲು ಹೊಂಚು ಹಾಕುತ್ತಿರುವುದು ವಿಪರ್ಯಾಸ.#40PercentCONgressToolkit pic.twitter.com/3nmnKadRbh
— BJP Karnataka (@BJP4Karnataka) April 14, 2022
‘40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಅವರು "ಸೆಲೆಕ್ಟಿವ್ ಆರೋಪ" ಮಾಡುತ್ತಿರುವುದು #40PercentCONgressToolkit ಷಡ್ಯಂತ್ರದ ಭಾಗವೇ? ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ಅವರು ನಡೆಸುತ್ತಿರುವ ಹೋರಾಟದ ಹಿಂದೆ ಯಾರ ಕೈವಾಡ ಇದೆ? ಆತ್ಮಹತ್ಯೆ ಪ್ರಕರಣದ ಬಳಿಕ ಅವರು ಮತ್ತೆ ಮುನ್ನೆಲೆಗೆ ಬಂದಿದ್ದರ ಉದ್ದೇಶ ಏನು?’ ಎಂದು ಪ್ರಶ್ನಿಸಿ ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಗ್ರಾಹಕರಿಗೆ ಸನ್ನಿ ಲಿಯೋನ್ ಆಫರ್ ನೀಡಿದ ಅಭಿಮಾನಿ...!
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಾವಿಗೆ ಜಾರ್ಜ್ ಕಾರಣ ಎಂದು ನೇರ ಆರೋಪ ಮಾಡಿದ್ದರು.
ಆದರೆ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಜಾರ್ಜ್ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ ಎಂದಿದ್ದರು.
ಅದೇ ಸಿದ್ದರಾಮಯ್ಯ ಇಂದು ವಾಟ್ಸ್ಯಾಪ್ ಸಂದೇಶದ ಹಿಂದೆ ಬಿದ್ದಿರುವುದು ಸೋಜಿಗವಲ್ಲವೇ?#40PercentCONgressToolkit pic.twitter.com/QW0MA2UhAE
— BJP Karnataka (@BJP4Karnataka) April 14, 2022
‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಾವಿಗೆ ಕೆ.ಎಸ್.ಜಾರ್ಜ್ ಕಾರಣ ಎಂದು ನೇರ ಆರೋಪ ಮಾಡಿದ್ದರು. ಆದರೆ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಜಾರ್ಜ್ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ ಎಂದಿದ್ದರು. ಅದೇ ಸಿದ್ದರಾಮಯ್ಯ ಇಂದು ವಾಟ್ಸ್ಯಾಪ್ ಸಂದೇಶದ ಹಿಂದೆ ಬಿದ್ದಿರುವುದು ಸೋಜಿಗವಲ್ಲವೇ?’ ಎಂದು ವ್ಯಂಗ್ಯವಾಡಿದೆ.
40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಅವರು "ಸೆಲೆಕ್ಟಿವ್ ಆರೋಪ" ಮಾಡುತ್ತಿರುವುದು #40PercentCONgressToolkit ಷಡ್ಯಂತ್ರದ ಭಾಗವೇ?
ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ಅವರು ನಡೆಸುತ್ತಿರುವ ಹೋರಾಟದ ಹಿಂದೆ ಯಾರ ಕೈವಾಡ ಇದೆ?
ಆತ್ಮಹತ್ಯೆ ಪ್ರಕರಣದ ಬಳಿಕ ಅವರು ಮತ್ತೆ ಮುನ್ನೆಲೆಗೆ ಬಂದಿದ್ದರ ಉದ್ದೇಶ ಏನು?
— BJP Karnataka (@BJP4Karnataka) April 14, 2022
‘ಅಂದು ರಾಜಕೀಯ ಪಿತೂರಿಗೆ, ವೀರಶೈವ ಲಿಂಗಾಯತರನ್ನು ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ಮುರಿಯಲು ಪ್ರಯತ್ನಿಸಿತ್ತು. ಇಂದು ತನ್ನದೇ ಮೂಲ ಕಾರ್ಯಕರ್ತನನ್ನು ರಾಜಕೀಯ ಲಾಭಕ್ಕಾಗಿ ಉದ್ದೇಶಪೂರ್ವಕವಾಗಿ ಬಲಿಕೊಟ್ಟು ಜಾತಿರಾಜಕಾರಣ ಮಾಡಲು ಹೊಂಚು ಹಾಕುತ್ತಿರುವುದು ವಿಪರ್ಯಾಸ’ ಅಂತಾ ಬಿಜೆಪಿ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.