ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಜಗತ್ತಿನಾದ್ಯಂತ ದೊಡ್ಡ ಹಿಟ್ ಕಂಡಿತ್ತು. ಕನ್ನಡಿಗರ ಪಾಲಿಗೆ ಜೇಮ್ಸ್ ಭಾವನೆಯೇ ಆಗಿದೆ. ಆದರೆ ಪವರ್ ಸ್ಟಾರ್ ಪುನೀತ್ ಅವರ ಧ್ವನಿ ಇಲ್ಲ ಎಂಬ ಕೊರಗು ಕನ್ನಡಿಗರನ್ನ ಹಾಗೂ ಅಪ್ಪು ಅಭಿಮಾನಿಗಳನ್ನ ಇಷ್ಟುದಿನ ಕಾಡುತ್ತಿತ್ತು. ಇದೀಗ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿರುವ 'ಜೇಮ್ಸ್' ಚಿತ್ರತಂಡ, ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ.
ಇದನ್ನೂ ಓದಿ: ಕನ್ನಡದ ಕೋಟ್ಯಾಧಿಪತಿ...ಅಪ್ಪು ಸ್ಥಾನ ತುಂಬ್ತಾರಾ ಕಿಚ್ಚ ಸುದೀಪ್..?
ಹೌದು, 'ಜೇಮ್ಸ್' ಸಿನಿಮಾ ಅಪ್ಪು ಅವರ ಧ್ವನಿಯಲ್ಲೇ ರೀ ರಿಲೀಸ್ ಆಗಲಿದೆ. ಈ ಹಿಂದೆ ಡಾ.ಪುನೀತ್ ರಾಜ್‌ಕುಮಾರ್ ಅವರ ಧ್ವನಿಯನ್ನೇ 'ಜೇಮ್ಸ್' ಚಿತ್ರದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರೂ ಫಲ ನೀಡಿರಲಿಲ್ಲ. ಹೀಗಾಗಿ ನಟ ಹಾಗೂ ಡಾ.ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಸಹೋದರ ನಟ ಶಿವಣ್ಣ ಅವರ ಧ್ವನಿಯನ್ನೇ 'ಜೇಮ್ಸ್' ಚಿತ್ರದಲ್ಲಿ ಬಳಸಲಾಗಿತ್ತು. ಆದರೆ ಇದೀಗ ಬಿಗ್ ಅಪ್‌ಡೇಟ್ ಕೊಟ್ಟಿದೆ 'ಜೇಮ್ಸ್' ತಂಡ.
ಅಪ್ಪು ಧ್ವನಿಯಲ್ಲಿ ಮತ್ತೊಮ್ಮೆ ತೆರೆಯ ಮೇಲೆ ಬರಲಿದೆ ಜೇಮ್ಸ್ ಚಿತ್ರ..! @ashwinipuneet @RRK_Official_ @NimmaShivanna @PriyaAnand#James #Puneethrajkumar @APPUFansKA @AppuFanForever8 @AppuFanatics @PsprkF pic.twitter.com/JCMDmwsG5y
— Zee Kannada News (@ZeeKannadaNews) April 17, 2022
ಮರಳಿ ಬಂದ 'ಅಪ್ಪು'
ಹೈದರಾಬಾದ್ ಮೂಲದ ಟೆಕ್ಕಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಪ್ಪು ಅವರ ಧ್ವನಿಯನ್ನೇ ಸೃಷ್ಟಿ ಮಾಡಿದ್ದಾರೆ. ಯಾವುದೇ ಧ್ವನಿಯಲ್ಲಿ ಮಾಡಿದ ಡಬ್ಬಿಂಗ್ ಬಳಸಿ, ಮೂಲ ವ್ಯಕ್ತಿಯ ವಾಯ್ಸ್ ಕ್ರಿಯೇಟ್ ಮಾಡುವ ಮೂಲಕ ಹೊಸ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ ಇವರು. ಹಲವು ತಿಂಗಳ ಕಾಲ ಸತತವಾಗಿ ಹಗಲು, ರಾತ್ರಿ ಪ್ರಯತ್ನಪಟ್ಟ ನಂತರ ಅಪ್ಪು ಅವರ ವಾಯ್ಸ್ ರೀ ಕ್ರಿಯೇಟ್ ಮಾಡಿದ್ದಾರೆ. ಈ ವಿಚಾರವನ್ನ ಜೇಮ್ಸ್ ನಿರ್ದೇಶಕ ಚೇತನ್ ಅವರು ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ರಾಹುಲ್ ಗಾಂಧಿ
ಇದೀಗ ಅಪ್ಪು ಅವರ ಮೂಲ ಧ್ವನಿಯಲ್ಲೇ 'ಜೇಮ್ಸ್' ಸಿನಿಮಾ ರೀ ರಿಲೀಸ್ ಆಗಲು ಸಜ್ಜಾಗಿದೆ. ಸುಮಾರು 60ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ಜೇಮ್ಸ್' ಈಗಲೂ ಸದ್ದು ಮಾಡುತ್ತಿದೆ. ಸಿನಿಮಾ ಚೆನ್ನಾಗಿ ಓಡುತ್ತಿದ್ದು, ಇದೀಗ ಈ ಸಾಲಿಗೆ ಮತ್ತಷ್ಟು ಸಿನಿಮಾಗಳನ್ನು ಸೇರಿಸಿ ರೀ ರಿಲೀಸ್ ಮಾಡಲು 'ಜೇಮ್ಸ್' ಚಿತ್ರತಂಡ ಸಜ್ಜಾಗಿದೆ. ಏಪ್ರಿಲ್ 22ಕ್ಕೆ ಜೇಮ್ಸ್ ಸಿನಿಮಾ ಅಪ್ಪು ಅವರ ಧ್ವನಿಯಲ್ಲೇ ರೀ ರಿಲೀಸ್ ಆಗಲಿದೆ. ಹೀಗಾಗಿ ಮತ್ತೊಮ್ಮೆ 'ಜೇಮ್ಸ್' ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.