ಉಕ್ರೇನ್‌ ಮೇಲೆ ರಷ್ಯಾ ನಿರಂತರ ಕ್ಷಿಪಣಿ ದಾಳಿ: ನಾಲ್ಕು ಶಸ್ತ್ರಕೋಠಿಗಳು ಧ್ವಂಸ

ರಷ್ಯಾವು ವಾಯುಪಡೆ, ಕ್ಷಿಪಣಿ ಪಡೆಗಳು, ಫಿರಂಗಿ ಮತ್ತು ವಾಯು ರಕ್ಷಣಾ ವ್ಯವಸ್ಥೆ ಬಳಸಿಕೊಂಡು, ಉಕ್ರೇನ್‌ನ ಮೇಲೆ ರಾತ್ರಿಯಿಡೀ ನಿರಂತರ ದಾಳಿ ನಡೆಸಿದೆ. 

Written by - Bhavishya Shetty | Last Updated : Apr 19, 2022, 11:10 AM IST
  • ಉಕ್ರೇನ್‌ನ ಮೇಲೆ ಮುಂದುವರೆದ ರಷ್ಯಾ ದಾಳಿ
  • ನಿರಂತರ ಕ್ಷಿಪಣಿ ದಾಳಿ ನಡೆಸುತ್ತಿರುವ ರಷ್ಯಾ
  • ಉಕ್ರೇನ್‌ನ ನಾಲ್ಕು ಶಸ್ತ್ರಕೋಠಿಗಳು ಧ್ವಂಸ
ಉಕ್ರೇನ್‌ ಮೇಲೆ ರಷ್ಯಾ ನಿರಂತರ ಕ್ಷಿಪಣಿ ದಾಳಿ: ನಾಲ್ಕು ಶಸ್ತ್ರಕೋಠಿಗಳು ಧ್ವಂಸ title=
Russia Ukraine War

ಉಕ್ರೇನ್‌ನ ಮೇಲೆ ಪ್ರಬಲ ರಾಷ್ಟ್ರ ರಷ್ಯಾವು ವೈಮಾನಿಕ ದಾಳಿಯನ್ನು ಮುಂದುವರೆಸಿದ್ದು, ಭಾನುವಾರ (ಏಪ್ರಿಲ್‌ 17)ದಂದು ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿ ನಿರಂತರವಾಗಿ ಕ್ಷಿಪಣಿ ಅಟ್ಯಾಕ್‌ ಮಾಡಿದೆ. ಪರಿಣಾಮ ಉಕ್ರೇನ್‌ನ ನಾಲ್ಕು ಶಸ್ತ್ರಕೋಠಿಗಳು ಧ್ವಂಸವಾಗಿದೆ. 

ಇದನ್ನು ಓದಿ: ಶಾಂಘೈನಲ್ಲಿ ಹೆಚ್ಚಿದ ಕೋವಿಡ್ ಸಾವಿನ ಪ್ರಕರಣ!

ರಷ್ಯಾವು ವಾಯುಪಡೆ, ಕ್ಷಿಪಣಿ ಪಡೆಗಳು, ಫಿರಂಗಿ ಮತ್ತು ವಾಯು ರಕ್ಷಣಾ ವ್ಯವಸ್ಥೆ ಬಳಸಿಕೊಂಡು, ಉಕ್ರೇನ್‌ನ ಮೇಲೆ ರಾತ್ರಿಯಿಡೀ ನಿರಂತರ ದಾಳಿ ನಡೆಸಿದೆ.  ಲುಹಾನ್ಸ್ಕ್‌, ವಿನಿಟ್ಸಿಯಾ ಹಾಗೂ ಡೊನೆಟ್ಸ್ಕ್‌ ಪ್ರಾಂತ್ಯದಲ್ಲಿ ನಾಲ್ಕು ಶಸ್ತ್ರಕೋಠಿಗಳನ್ನು ಇಸ್ಕಾಂಡರ್‌ ಕ್ಷಿಪಣಿಗಳಿಂದ ಧ್ವಂಸ ಮಾಡಲಾಗಿದೆ. ಉಕ್ರೇನಿನ 12 ಮಾರಕ ಡ್ರೋನ್‌ ಮತ್ತು ಟ್ಯಾಂಕ್‌ಗಳನ್ನೂ ಸಹ ರಷ್ಯಾ ನಾಶಪಡಿಸಿದೆ. ಜತೆಗೆ 315 ಸೇನಾ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ರಕ್ಷಣಾ ಸಚಿವಾಲಯ ನೀಡಿರುವ ಮಾಹಿತಿಯನ್ನು ಆಧರಿಸಿ ರಷ್ಯಾದ ಸುದ್ದಿ ಸಂಸ್ಥೆ ‘ಟಾಸ್‌’ ವರದಿ ಮಾಡಿದೆ.‌ 

ಉಕ್ರೇನ್‌ ಸೇನೆಯ ಐದು ಕಮಾಂಡ್ ಪೋಸ್ಟ್‌ಗಳು, ಇಂಧನ ಸಂಗ್ರಹಗಾರ, ಯುದ್ಧ ಸಲಕರಣೆಗಳ ಮೂರು ಗೋದಾಮುಗಳು, ರಕ್ಷಣಾ ವ್ಯವಸ್ಥೆ ಸೇರಿ ಸೇನಾ ಸೌಲಭ್ಯಗಳ ಆಯಕಟ್ಟಿನ 16 ನೆಲೆಗಳನ್ನು ವಾಯು ಕ್ಷಿಪಣಿಗಳು ನಾಶಪಡಿಸಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ಹಾರ್ಕಿವ್‌, ಝಪ್ರೊರಿಝಿಯಾ, ಡೊನೆಟ್‌ಸ್ಕ್‌ ಮತ್ತು ನಿಪ್ರೊಪೆಟ್ರೊವ್‌ಸ್ಕ್‌ ಪ್ರಾಂತ್ಯಗಳು ಹಾಗೂ ಮೈಕೊಲೈವ್‌ ಬಂದರಿನಲ್ಲಿ ಉಕ್ರೇನ್‌ ಸೇನೆಯ ರಕ್ಷಣಾ ವ್ಯವಸ್ಥೆ ಕೇಂದ್ರೀಕರಿಸಿ ಒಟ್ಟು 108 ಆಯಕಟ್ಟಿನ ಸ್ಥಳಗಳ ಮೇಲೆ ರಷ್ಯಾ ವಾಯುಪಡೆ ದಾಳಿ ನಡೆಸಿತ್ತು. ಫಿರಂಗಿ ಪಡೆಗಳ ದಾಳಿಯಲ್ಲಿ ಉಕ್ರೇನಿನ 315 ಸೇನಾ ಗುರಿ ನಾಶ ಮಾಡಲಾಗಿದೆ ಎಂದು ವರದಿಯಾಗಿದೆ. 

ಇದನ್ನು ಓದಿ: 'ಹಿಂದೂ ದಂಪತಿಗಳು ನಾಲ್ಕು ಮಕ್ಕಳನ್ನು ಹೆತ್ತು ಇಬ್ಬರನ್ನು ದೇಶಕ್ಕೆ ಅರ್ಪಣೆ ಮಾಡಬೇಕು'

ರಷ್ಯಾದ ʼಮಾಸ್ಕವಾʼ ಧ್ವಂಸ: 
ಈ ಹಿಂದೆ ರಷ್ಯಾದ ಕಪ್ಪು ಸಮುದ್ರದ ನೌಕಾಬಲ ಸಮರ ನೌಕೆ ‘ಮಾಸ್ಕವಾ’ವನ್ನು ಗುರಿಯಾಗಿಸಿ ಉಕ್ರೇನ್‌ ಸೇನೆ ಪ್ರತಿ ದಾಳಿಯನ್ನು ನಡೆಸಿತ್ತು.  ನೆಪ್ಚೂನ್‌ ಕ್ಷಿಪಣಿಗಳಿಂದ ಹೊಡೆದು, ಮುಳುಗಿಸಿದ್ದರಿಂದ ರಷ್ಯಾ ಪಡೆಗಳು ಪ್ರತೀಕಾರವಾಗಿ ಮರು ದಾಳಿ ನಡೆಸಿದೆ. ಕೀವ್‌ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಏಪ್ರಿಲ್‌ 18ರಂದು ಮತ್ತಷ್ಟು ಪ್ರಬಲ ದಾಳಿ ನಡೆಸಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News