ಬೆಂಗಳೂರು: ಬೆಲೆ ಏರಿಕೆ ಬಿಸಿ ನಡುವೆ ಹಾಪ್ ಕಾಮ್ಸ್ ನಲ್ಲಿ ಹಣ್ಣು ತರಕಾರಿ ಬೆಲೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ನೇರವಾಗಿ ರೈತರಿಂದಲೇ ಖರೀದಿಸುವ ಹಣ್ಣು ತರಕಾರಿಯನ್ನ ಮಾರಾಟ ಮಾಡಲಾಗುತ್ತಿದೆ. ರೈತರಿಗೆ ನೆರವಾಗುವ ದೃಷ್ಟಿಯಿಂದ ನೇರವಾಗಿ ರೈತರಿಂದಲೇ ತರಕಾರಿ, ಹಣ್ಣುಹಂಪಲನ್ನ ಖರೀದಿಸಿ ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ದೃಷ್ಟಿಯನ್ನ ಹಾಪ್ ಕಾಮ್ಸ್ ಹೊಂದಿದೆ.
ನಗರದಲ್ಲಿ 200ಕ್ಕೂ ಹೆಚ್ಚು ಹಾಪ್ ಕಾಮ್ಸ್ ಗಳನ್ನು ಹೊಂದಿದ್ದು ಪ್ರತೀ ಸ್ಟಾಲ್ ನಲ್ಲೂ ಪ್ರತಿನಿತ್ಯ ಕೋಟ್ಯಾಂತರ ರೂ. ವಹಿವಾಟು ನಡೆಸುತ್ತಿದೆ. ಅತ್ತ ರೈತರಿಗೂ ಉತ್ತಮ ಬೆಲೆ ಇತ್ತ ಗ್ರಾಹಕರಿಗೂ ನಿರ್ದಿಷ್ಟ ಬೆಲೆ ನಿಗದಿ ಪಡಿಸಿ ವ್ಯಾಪಾರ ಮಾಡಲಾಗುತ್ತಿದೆ. ಅಲ್ಲದೇ ಪ್ರತೀ ನಿತ್ಯವೂ ತರಕಾರಿ ಹಾಗು ಹಣ್ಣುಗಳ ಬೆಲೆಯನ್ನು ಪರಿಷ್ಕರಣೆ ಮಾಡಿ ವಹವಾಟು ನಡೆಸುತ್ತಿದೆ.
ಇದನ್ನೂ ಓದಿ-
ಹಾಪ್ ಕಾಮ್ಸ್ ನ ಈ ದಿನದ ತರಕಾರಿ ಬೆಲೆ ಹೇಗಿದೆ:
ತರಕಾರಿ | ದರ/ ಪ್ರತಿ ಕೆಜಿಗೆ |
ಆಲೂಗೆಡ್ಡೆ | ₹30 |
ಹೂ ಕೋಸು | ₹24 |
ಟೊಮೆಟೊ ಪ್ರತೀ ಕೆಜಿ ದರ | ₹14 |
ಬೀಟ್ ರೂಟ್ | ₹28 |
ಎಲೆ ಕೋಸು | ₹26 |
ಬೆಂಡೆ ಕಾಯಿ | ₹33 |
ತೊಂಡೆಕಾಯಿ | ₹35 |
ಸೀಮೆ ಬದನೆಕಾಯಿ | ₹18 |
ಹಾಗಲಕಾಯಿ | ₹42 |
ಗೆಡ್ಡೆಕೋಸು | ₹22 |
ಮೂಲಂಗಿ | ₹18 |
ಬೀನ್ಸ್ | ₹18 |
ಈರುಳ್ಳಿ | ₹38 |
ಬೆಳ್ಳುಳ್ಳಿ | ₹90 |
ನಿಂಬೆಹಣ್ಣು | ₹84 |
ಇದನ್ನೂ ಓದಿ-
ಹಣ್ಣುಗಳು | ದರ/ ಪ್ರತಿ ಕೆಜಿಗೆ |
ಆಪಲ್ | ₹250 |
ಮೂಸಂಬಿ | ₹87 |
ಕಿವಿ ಹಣ್ಣು | ₹358 |
ಅನಾನಸ್ | ₹64 |
ಪಚ್ಚಬಾಳೆ ಹಣ್ಣು | ₹29 |
ಯಾಲಕ್ಕಿ ಬಾಳೆ ಹಣ್ಣು | ₹64 |
ಸಪೋಟಾ ಹಣ್ಣು | ₹48 |
ಕಿತ್ತಳೆ ಹಣ್ಣು | ₹90 |
ಡ್ರ್ಯಾಗನ್ ಫ್ರೂಟ್ | ₹227 |
ಮಾವು (ಬಾದಾಮಿ) | ₹80 |
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.