ಬೆಂಗಳೂರು : ನಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ರೋಗಗಳು ದೂರವಾಗುವುದಲ್ಲದೆ, ತೂಕವನ್ನು ಕಡಿಮೆ ಮಾಡಬಹುದು. ಮುಖ್ಯವಾಗಿ ಇದರ ಸೇವನೆಯಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ಹೊಟ್ಟೆ ಕೊಬ್ಬನ್ನು ಕರಗಿಸಬೇಕು ಎಂದಾದರೆ ನಿಂಬೆಯನ್ನು ಹೇಗೆ ಬಳಸಬೇಕು ಎನ್ನುವುದು ಕೂಡಾ ತಿಳಿದಿರಬೇಕು. ಯಾಕೆಂದರೆ ಬಹಳಷ್ಟು ಜನ ಕೊಬ್ಬು ಕರಗಿಸುವ ಸಲುವಾಗಿ ನಿಂಬೆಯನ್ನು ಸೇವಿಸುತ್ತಾರೆ. ಆದರೆ ಸೇವನೆ ವಿಧಾನ ಸರಿಯಾಗಿರುವುದಿಲ್ಲ. ಹಾಗಾಗಿ ಅದರ ಪ್ರಯೋಜನ ಕೂಡಾ ನಮಗೆ ಸಿಗುವುದಿಲ್ಲ.
ನಿಂಬೆಯನ್ನು ಸೇವಿಸುವ ವಿಧಾನ ಯಾವುದು ?
1. ಬೆಚ್ಚಗಿನ ನೀರಿನಲ್ಲಿ ನಿಂಬೆ ಬೆರೆಸಿ ಕುಡಿಯಿರಿ :
ನಿಂಬೆಯಲ್ಲಿ A,B ಮತ್ತು C ಜೀವಸತ್ವಗಳಿವೆ. ಇದನ್ನು ತಿನ್ನುವುದರಿಂದ ರೋಗಗಳು ಸಹ ನಿಮ್ಮಿಂದ ದೂರವಿರುತ್ತವೆ. ಇದನ್ನು ಪ್ರತಿದಿನ ಸೇವಿಸಬೇಕು. ಇನ್ನು ಬಿಸಿ ನೀರಿನಲ್ಲಿ ನಿಬೆ ರಸವನ್ನು ಬೆರೆಸಿ ಆಗಾಗ ಅದನ್ನು ಕುಡಿಯುತ್ತಿದ್ದರೂ ಇದರ ಪ್ರಯೋಜನ ಸಿಗುತ್ತದೆ.
ಇದನ್ನೂ ಓದಿ : Cholesterol Reduce Tips: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸರಳ ಮನೆಮದ್ದು
2. ಲೆಮನ್ ಟೀ :
ಅನೇಕ ಜನರು ಲೆಮನ್ ಟೀ ಕುಡಿಯುತ್ತಾರೆ. ಇದನ್ನು ಕುಡಿಯುವುದರ ಜೊತೆಗೆ ಎಣ್ಣೆಯುಕ್ತ ಆಹಾರವನ್ನು ತಿನ್ನುತ್ತಾರೆ. ಹೀಗಾದಾಗ . ಲೆಮನ್ ಟೀ ಪ್ರಯೋಜನ ಪಡೆಯುವುದು ಸಾಧ್ಯವಾಗುವುದಿಲ್ಲ. ನೀವು ಕೂಡಾ . ಲೆಮನ್ ಟೀ ಕುಡಿಯುತ್ತಿರಾದರೆ ನಿಮ್ಮ ಉಳಿದ ತಿಂಡಿ ತಿನಿಸುಗಳ ಬಗ್ಗೆ ಕೂಡಾ ಎಚ್ಚರ ವಹಿಸಬೇಕು. ಆಗ ಮಾತ್ರ ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುತವುದು ಸಾಧ್ಯವಾಗುತ್ತದೆ. .
3. ಬೆಳಿಗ್ಗೆ ನಿಂಬೆ ಪಾನಕವನ್ನು ಕುಡಿಯಿರಿ
ನಿಂಬೆ ನೀರು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಅನೇಕ ವರದಿಗಳು ಹೇಳಿವೆ. ಆದರೆ ಇದನ್ನು ನಿಯಮಿತವಾಗಿ ಸೇವಿಸಿದರೆ ಅದರ ಪ್ರಯೋಜನಗಳನ್ನು ಇನ್ನಷ್ಟು ಕಾಣಬಹುದು. ನೀವು ಪ್ರತಿದಿನ ಖಾಲಿ ಹೊಟ್ಟೆಗೆ ಉಗುರುಬೆಚ್ಚಗಿನ ನೀರಿಗೆ ನಿಂಬೆರಸ ಬೆರೆಸಿ ಕುಡಿದರೆ ಹೊಟ್ಟೆಯ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಈ ಮೂರು ಸಲಹೆಗಳನ್ನು ಅನುಸರಿಸಿದರೆ, ಒಂದೇ ವಾರದಲ್ಲಿ ಬದಲಾವಣೆಯನ್ನು ನೋಡಬಹುದು.
ಇದನ್ನೂ ಓದಿ : Tomato Flu symptoms : 80 ಮಕ್ಕಳಿಗೆ ತಗುಲಿರುವ ಟೊಮೆಟೊ ಜ್ವರ .! ಏನಿದರ ಲಕ್ಷಣಗಳು ಗೊತ್ತಾ?
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.