ಸಿಂಗಿಂಗ್ ಸ್ಪರ್ಧೆಯ ಆಡಿಷನ್ಗೆಂದು ಆಗಮಿಸಿದ್ದ ಸ್ಪರ್ಧಿಯ ಗಿಟಾರ್ನ್ನು ತೀರ್ಪುಗಾರ ಸಿಟ್ಟಿನಿಂದ ಒಡೆದು ಹಾಕಿರುವ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜಡ್ಜ್ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸಿನಿಪ್ರಿಯರೇ... ನಿಮ್ಮ ಫೇವರೇಟ್ ʼPVRʼ ಬಗ್ಗೆ ಇಲ್ಲಿದೆ ನೋಡಿ ಸ್ಪೆಷಲ್ ವರದಿ
ಎಕ್ಸ್ ಫ್ಯಾಕ್ಟರ್ ಗ್ಲೋಬಲ್ ಎಂಬ ಉಕ್ರೇನ್ ದೇಶದ ಸಿಂಗಿಂಗ್ ಕಾಂಪಿಟೇಶನ್ನ ಆಡಿಶನ್ಗೆ ಸ್ಪರ್ಧಿಯೊಬ್ಬರು ಆಗಮಿಸಿದ್ದರು. ಆ ವ್ಯಕ್ತಿ ಹಾಡಲು ಪ್ರಾರಂಭಿಸಿದಾಗ ಜಡ್ಜ್ಗಳು ಹಾಡನ್ನು ಮೆಚ್ಚಿಕೊಂಡಿಲ್ಲ. ಅಷ್ಟೇ ಅಲ್ಲದೆ, ಅವನ ಹಾಡಿನ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದರು. ಆದರೂ ಸ್ಪರ್ಧಿ ಹಾಡುತ್ತಿದ್ದನು. ಇದರಿಂದ ರೊಚ್ಚಿಗೆದ್ದ ತೀರ್ಪುಗಾರ ಡಿಮೈಟ್ರೋ ಶುರೊವ್ ವೇದಿಕೆಗೆ ಆಗಮಿಸಿ ಸ್ಪರ್ಧಿಯ ಕೈಯಲ್ಲಿದ್ದ ಗಿಟಾರ್ನ್ನು ನೆಲಕ್ಕೆ ಬಡಿದು ಒಡೆದು ಹಾಕಿದ್ದಾರೆ. ಇದನ್ನು ಕಂಡ ಅಲ್ಲಿ ನೆರೆದಿದ್ದ ಜನರು ಒಮ್ಮೆಲೆ ಶಾಕ್ ಆಗಿದ್ದಾರೆ.
ಗಿಟಾರ್ ಒಡೆದು ಹಾಕಿದ ಬಳಿಕ ತೀರ್ಪುಗಾರ ಡಿಮೈಟ್ರೋ, ಮಂಡಿಯೂರಿ ಇತರ ಇನ್ನುಳಿದ ಸ್ಪರ್ಧಿಗಳ ಬಳಿ ತೆರಳಿ ಮಂಡಿಯೂರಿ "ನೀವು ಹಾಡಲು ಬಂದಿದ್ದೀರಿ. ಚೆನ್ನಾಗಿ ಹಾಡಿ. ನಮ್ಮನ್ನು ನಿರಾಸೆ ಮಾಡಬೇಡಿ" ಎಂದು ಬೇಡಿಕೊಂಡಿದ್ದಾನೆ.
ಇನ್ನೊಂದೆಡೆ ಆ ಗಿಟಾರ್ನ್ನು ಸ್ಪರ್ಧಿಯ ತಂದೆ ಸಾಯುವ ಮುನ್ನ ಉಡುಗೊರೆಯಾಗಿ ನೀಡಿದ್ದರಂತೆ. ಪ್ರೀತಿಯಿಂದ ತಂದೆ ಕೊಡಿಸಿದ ಗಿಟಾರ್ನ್ನು ತೀರ್ಪುಗಾರ ಒಡೆದು ಹಾಕಿದ್ದಕ್ಕೆ ಬೇಸರಗೊಂಡ ಸ್ಪರ್ಧಿ ಅನೇಕ ತಿಂಗಳವರೆಗೆ ಹಾಡನ್ನು ಹಾಡಿರಲಿಲ್ಲವೆಂದು ಕೆಲವೊಂದು ಮೂಲಗಳು ತಿಳಿಸಿದೆ.
ಇದನ್ನು ಓದಿ: Shocking Video: ಕಾರು ಚಲಾಯಿಸುತ್ತಿದ್ದಂತೆಯೇ ಪ್ರಜ್ಞೆ ಕಳೆದುಕೊಂಡ ಮಹಿಳೆ.! ಮುಂದೆ ?
ಇನ್ನು ಈ ಘಟನೆ ನಡೆದ ಬಳಿಕ ತೀರ್ಪುಗಾರನನ್ನು ಶೋನಿಂದ ಹೊರಹಾಕಲಾಗಿದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.