ಸಿನಿಪ್ರಿಯರೇ... ನಿಮ್ಮ ಫೇವರೇಟ್‌ ʼPVRʼ ಬಗ್ಗೆ ಇಲ್ಲಿದೆ ನೋಡಿ ಸ್ಪೆಷಲ್‌ ವರದಿ

ಪ್ರಿಯಾ ವಿಲೇಜ್ ರೋಡ್‌ ಶೋ ಲಿಮಿಟೆಡ್ ಅಂದ್ರೆ ಪಿವಿಆರ್‌. ಇದು ಭಾರತದ ಪ್ರಖ್ಯಾತ ಸಿನಿಮಂದಿರಗಳಲ್ಲಿ ಒಂದು. ಪಿವಿಆರ್‌ನ ಪ್ರಧಾನ ಕಛೇರಿಯು ಹರಿಯಾಣದ ಗುರ್‌ಗಾಂವ್‌ನಲ್ಲಿದೆ. ಇನ್ನು 1997ರಲ್ಲಿ ನವದೆಹಲಿಯ ಸಾಕೇತ್‌ನಲ್ಲಿ ಮೊದಲ ಮಲ್ಟಿಪ್ಲೆಕ್ಸ್ ಸಿನಿಮಾ ಥಿಯೇಟರ್‌ನ್ನು ನಿರ್ಮಾಣ ಮಾಡುವ ಮೂಲಕ ದೇಶದಲ್ಲಿ ಮಲ್ಟಿಪ್ಲೆಕ್ಸ್‌ ಸಿನಿಮಾ ಥಿಯೇಟರ್‌ಗಳ ಕ್ರಾಂತಿಯನ್ನು ಪ್ರಾರಂಭಿಸಿದ್ದು ಇದೇ ಪಿವಿಆರ್‌.

Written by - Bhavishya Shetty | Edited by - Bhavishya Shetty | Last Updated : May 13, 2022, 11:07 AM IST
  • ಪ್ರಿಯಾ ವಿಲೇಜ್ ರೋಡ್‌ ಶೋ ಲಿಮಿಟೆಡ್ ಬಗ್ಗೆ ಇಲ್ಲಿದೆ ಮಾಹಿತಿ
  • ಮಲ್ಟಿಪ್ಲೆಕ್ಸ್‌ ಸಿನಿಮಾ ಥಿಯೇಟರ್‌ ಕ್ರಾಂತಿ ಸೃಷ್ಟಿಸಿದ ಪಿವಿಆರ್‌
  • 1978ರಲ್ಲಿ ಪಿವಿಆರ್‌ನ್ನು ಖರೀದಿಸಿದ ಅಜಯ್‌ ಬಿಜ್ಲಿ
ಸಿನಿಪ್ರಿಯರೇ... ನಿಮ್ಮ ಫೇವರೇಟ್‌ ʼPVRʼ ಬಗ್ಗೆ ಇಲ್ಲಿದೆ ನೋಡಿ ಸ್ಪೆಷಲ್‌ ವರದಿ title=
Priya Village RoadShow

ಪಿವಿಆರ್‌ ಅಂದ್ರೆ ಆಧುನಿಕ ಯುಗದಲ್ಲಿ ಬದುಕುವ ಜನರಿಗೆ ತಿಳಿದಿರುವ ಫೇವರೇಟ್‌ ಸಿನಿಮಾ ಥಿಯೇಟರ್‌. ಆದರೆ ಪಿವಿಆರ್‌ ಅಂದ್ರೆ ಏನು ಎಂಬುದು ಅನೇಕರಿಗೆ ತಿಳಿದಿರದ ಸಂಗತಿ. ಈ ಹಿನ್ನೆಲೆಯಲ್ಲಿ ಈ ಸಿನಿಮಾ ಥಿಯೇಟರ್‌ ಬಗ್ಗೆ ನಾವು ನಿಮಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ. 

ಇದನ್ನು ಓದಿ: Chandra Grahan 2022: ವರ್ಷದ ಮೊದಲ ಚಂದ್ರಗ್ರಹಣ ಈ ರಾಶಿಯ ಜನರ ವೃತ್ತಿಜೀವನದಲ್ಲಿ ಬಡ್ತಿ ನೀಡಲಿದೆ

ಪ್ರಿಯಾ ವಿಲೇಜ್ ರೋಡ್‌ ಶೋ ಲಿಮಿಟೆಡ್ ಅಂದ್ರೆ ಪಿವಿಆರ್‌. ಇದು ಭಾರತದ ಪ್ರಖ್ಯಾತ ಸಿನಿಮಂದಿರಗಳಲ್ಲಿ ಒಂದು. ಪಿವಿಆರ್‌ನ ಪ್ರಧಾನ ಕಛೇರಿಯು ಹರಿಯಾಣದ ಗುರ್‌ಗಾಂವ್‌ನಲ್ಲಿದೆ. ಇನ್ನು 1997ರಲ್ಲಿ ನವದೆಹಲಿಯ ಸಾಕೇತ್‌ನಲ್ಲಿ ಮೊದಲ ಮಲ್ಟಿಪ್ಲೆಕ್ಸ್ ಸಿನಿಮಾ ಥಿಯೇಟರ್‌ನ್ನು ನಿರ್ಮಾಣ ಮಾಡುವ ಮೂಲಕ ದೇಶದಲ್ಲಿ ಮಲ್ಟಿಪ್ಲೆಕ್ಸ್‌ ಸಿನಿಮಾ ಥಿಯೇಟರ್‌ಗಳ ಕ್ರಾಂತಿಯನ್ನು ಪ್ರಾರಂಭಿಸಿದ್ದು ಇದೇ ಪಿವಿಆರ್‌. ಈ ಥಿಯೇಟರ್‌ಗಳು ಎಲ್ಲರಿಗೂ ಅಚ್ಚುಮೆಚ್ಚಾಗಲು ಕಾರಣವೆಂದರೆ ಅಲ್ಲಿನ ಉತ್ತಮ ಗುಣಮಟ್ಟದ ವಾತಾವರಣ, ತಾಂತ್ರಿಕವಾಗಿ ನವೀಕರಿಸಲಾದ ವ್ಯವಸ್ಥೆಗಳು, ಅತ್ಯುತ್ತಮ ಸೇವಾ ಮಾನದಂಡಗಳು.

ದೆಹಲಿಯ ವಸಂತ್‌ ವಿಹಾರ್‌ನಲ್ಲಿ ಮೊದಲು ಪ್ರಿಯಾ ಸಿನಿಮಾಸ್‌ ಎಂಬ ಹೆಸರಿನಲ್ಲಿದ್ದ ಕಂಪನಿಯನ್ನು 1978ರಲ್ಲಿ ಅಜಯ್‌ ಬಿಜ್ಲಿಯವರು ಖರೀದಿಸಿದರು. ಇನ್ನು ಅಜಯ್‌ ಬಿಜ್ಲಿಯವರು ಭಾರತ ಪ್ರಭಾವಶಾಲಿ ಉದ್ಯಮಿಗಳಲ್ಲಿ ಒಬ್ಬರು ಎಂಬುದು ಇಲ್ಲಿ ಹೇಳಲೇಬೇಕಾದ ವಿಚಾರ. ಇನ್ನು 1988ರಲ್ಲಿ ಬಿಜ್ಲಿಯವರು ವ್ಯವಹಾರ ನಿರ್ವಹಣೆಯನ್ನು ಸ್ವತಃ ಕೈಗೆತ್ತಿಕೊಂಡ ಬಳಿಕ ಮತ್ತಷ್ಟು ಯಶಸ್ವಿ ಕಂಡರು. ಇದಾದ ಬಳಿಕ ಈ ಯಶಸ್ಸು, ಪಿವಿಆರ್‌ ಸಿನಿಮಾ ಸ್ಥಾಪನೆಗೆ ಕಾರಣವಾಯಿತು. 

ಇನ್ನು ಈ ಕಂಪನಿಯು 1995ರಲ್ಲಿ 60:40 ಅನುಪಾತದೊಂದಿಗೆ ಪ್ರಿಯಾ ಎಕ್ಸಿಬಿಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಲೇಜ್ ರೋಡ್‌ಶೋ ಲಿಮಿಟೆಡ್ ನಡುವೆ ಜಂಟಿ ಉದ್ಯಮ ಒಪ್ಪಂದವನ್ನು ಮಾಡಿಕೊಂಡು, ಜೂನ್ 1997ರಲ್ಲಿ ವಾಣಿಜ್ಯ ಕಾರ್ಯಾಚರಣೆ ಕೈಗೊಂಡಿತು. 

ಇನ್ನು ಪಿವಿಆರ್‌ ಸಿನಿಮಾಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಬಿಜ್ಲಿ ಇದ್ದರೆ, ಬಿಜ್ಲಿ ಅವರ ಸಹೋದರ ಸಂಜೀವ್ ಕುಮಾರ್ ಬಿಜ್ಲಿ ಪಿವಿಆರ್‌ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪನಿಯು ಪಿವಿಆರ್‌ ಅಡಿಯಲ್ಲಿ ಪ್ರೊ-ಆಕ್ಟಿವ್ ಸಿಎಸ್‌ಆರ್‌ ವಿಂಗ್ ಅನ್ನು ಸಹ ನಿರ್ವಹಿಸುತ್ತದೆ. ಮೊದಲ ಪಿವಿಆರ್‌ ಗೋಲ್ಡ್ ಸ್ಕ್ರೀನ್ ಅನ್ನು ಬೆಂಗಳೂರಿನ ಫೋರಂ ಮಾಲ್‌ನಲ್ಲಿ ಸ್ಥಾಪಿಸಲಾಗಿದೆ. 

2003ರಲ್ಲಿ, ವಿಲೇಜ್ ರೋಡ್‌ಶೋ ಪಾಲುದಾರಿಕೆಯಿಂದ ಹೊರಬರಲು ನಿರ್ಧರಿಸಿದಾಗ ಐಸಿಐಸಿಐ ವೆಂಚರ್ಸ್ ಪಿವಿಆರ್‌ನಲ್ಲಿ 40 ಕೋಟಿ ರೂ. ಹೂಡಿಕೆ ಮಾಡಿತು. ಇನ್ನು 2012 ರಲ್ಲಿ ಕನಕಿಯಾ ಸಮೂಹ ಒಡೆತನದ ಸಿನಿಮ್ಯಾಕ್ಸ್‌ನ್ನು ರೂ. 395 ಕೋಟಿಗೆ ಪಿವಿಆರ್‌ ಸಿನಿಮಾಸ್‌ನ ಅಂಗಸಂಸ್ಥೆಯಾದ ಸಿನಿ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್‌ ಖರೀದಿಸಿತು. ಸದ್ಯ ಪಿವಿಆರ್‌ನ್ನು ಭಾರತದ ಅತಿದೊಡ್ಡ ಸಿನಿಮಾ ಚೈನ್‌ ಎಂದು ಹೇಳಲಾಗಿದೆ. ಇನ್ನು ಮೇ 2016 ರಲ್ಲಿ ಡಿಎಲ್‌ಎಫ್‌ ಸಮೂಹದ ಡಿಟಿ ಸಿನಿಮಾಸ್ ಅನ್ನು ಸಹ ಪಿವಿಆರ್‌ ಸಿನಿಮಾಸ್ 500 ಕೋಟಿ ರೂ.ಗೆ ಖರೀದಿಸಿದೆ.

ಇದನ್ನು ಓದಿ: Shocking Video: ಕಾರು ಚಲಾಯಿಸುತ್ತಿದ್ದಂತೆಯೇ ಪ್ರಜ್ಞೆ ಕಳೆದುಕೊಂಡ ಮಹಿಳೆ.! ಮುಂದೆ ?

ಇನ್ನು ಆಗಸ್ಟ್ 2018 ರಲ್ಲಿ, ಪಿವಿಆರ್‌ ಸಿನಿಮಾಸ್ ರೂ. 850 ಕೋಟಿಗೆ ನಗದು ಮತ್ತು ಷೇರು ವ್ಯವಹಾರದಲ್ಲಿ ಚೆನ್ನೈ ಮೂಲದ ಎಸ್‌ಪಿಐ ಸಿನಿಮಾಸ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತು. ಇನ್ನು ಆಗಸ್ಟ್‌ 2019ರೊಳಗಾಗಿ ಭಾರತದಾದ್ಯಂತ ಪಿವಿಆರ್‌ ಸಿನಿಮಾವು ಸುಮಾರು 800 ಸ್ಕ್ರೀನಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ. ಮಾರ್ಚ್ 27, 2022 ರಂದು ಭಾರತದ ಎರಡನೇ ಅತಿ ದೊಡ್ಡ ಸಿನಿಮಾ ಥಿಯೇಟರ್‌ ಸಂಸ್ಥೆಯಾದ INOX Leisureನೊಂದಿಗೆ ವಿಲೀನಗೊಳ್ಳುವುದಾಗಿ ಪಿವಿಆರ್‌ ಘೋಷಿಸಿತು.

ಸಿನಿಮಾ ಥಿಯೇಟರ್‌ ಫಾರ್ಮಾಟ್‌: 

  • ಪಿವಿಆರ್‌ ಗೋಲ್ಡ್ ಸ್ಕ್ರೀನ್: ಪಿವಿಆರ್‌ನ ಮೊದಲ "ಗೋಲ್ಡ್ ಸ್ಕ್ರೀನ್" ಅನ್ನು 2007 ರಲ್ಲಿ ಇಂದೋರ್‌ನಲ್ಲಿ ಪ್ರಾರಂಭಿಸಲಾಯಿತು. 
  • ಪಿವಿಆರ್‌ ಸೂಪರ್‌ಪ್ಲೆಕ್ಸ್: 2014 ರಲ್ಲಿ ಪಿವಿಆರ್‌ ಸಿನಿಮಾಸ್ ನೋಯ್ಡಾದಲ್ಲಿ ಸೂಪರ್‌ಪ್ಲೆಕ್ಸ್ ಫಾರ್ಮಾಟ್‌ನ್ನು ಪ್ರಾರಂಭಿಸಿರು. ಚಿತ್ರಮಂದಿರವು ಐಮ್ಯಾಕ್ಸ್‌ , 4ಡಿಎಕ್ಸ್‌, ಗೋಲ್ಡ್ ಕ್ಲಾಸ್, ಪ್ಲೇಹೌಸ್ ಮತ್ತು ಮುಖ್ಯವಾಹಿನಿಯ ಆಡಿಟೋರಿಯಂಗಳೊಂದಿಗೆ 15 ಸಕ್ರೀನ್‌ಗಳನ್ನು ಹೊಂದಿದೆ. ಪಿವಿಆರ್ ಸಿನಿಮಾಸ್ ಈ ಹೊಸ ಯೋಜನೆಗೆ ರೂ.48 ಕೋಟಿ ಹೂಡಿಕೆ ಮಾಡಿದೆ ಎಂದು ತಿಳಿದುಬಂದಿದೆ. 
  • ಪಿವಿಆರ್‌ಪ್ಲೇಹೌಸ್: ಪಿವಿಆರ್‌ ಪ್ಲೇಹೌಸ್ ಮಕ್ಕಳ ಚಲನಚಿತ್ರಗಳು, ಅನಿಮೇಟೆಡ್ ವಿಷಯವನ್ನು ಪ್ರದರ್ಶಿಸುವ ವಿಶೇಷ 49 ಆಸನಗಳ ಥಿಯೇಟರ್‌ ಆಗಿದೆ. ಕಸ್ಟಮೈಸ್ ಮಾಡಿದ 3D ಗ್ಲಾಸ್‌ಗಳ ಜೊತೆಗೆ, ಇದು ಬೀನ್ ಬ್ಯಾಗ್‌ಗಳು, ರಬ್ಬರೀಕೃತ ಆಸನಗಳನ್ನು ಹೊಂದಿದೆ. ಈ ಫಾರ್ಮಾಟ್‌ಗಳು ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಇಂದೋರ್ ಮತ್ತು ಹೈದರಾಬಾದ್‌ನಲ್ಲಿ ಮಾತ್ರ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News