LED Inverter Bulb Price in India: ದಿನದಿಂದ ದಿನಕ್ಕೆ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು, ಇದರ ಜೊತೆಗೆ ವಿದ್ಯುತ್ ಸಮಸ್ಯೆ ಕೂಡ ದೇಶದ ಹಲವು ಭಾಗಗಳಲ್ಲಿ ಎದುರಾಗುತ್ತಿದೆ. ನೀವೂ ಕೂಡ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇಂದು ನಾವು ನಿಮಗೆ ಒಂದು ವಿಶೇಷ ಉತ್ಪನ್ನದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. 200 ರೂ. ಗಳಿಗೂ ಕಡಿಮೆ ಬೆಲೆಗೆ ನೀವು ಈ ಉತ್ಪನ್ನವನ್ನು ಖರೀದಿಸಬಹುದು. ಇದರಿಂದ ವಿದ್ಯುತ್ ಇಲ್ಲದ ಸಂದರ್ಭಗಳಲ್ಲಿಯೂ ಕೂಡ ನೀವು ಮನೆಯನ್ನು ಬೆಳಗಲು ಸಾಧ್ಯವಾಗಲಿದೆ.
ವಿದ್ಯುತ್ ಇಲ್ಲದ ಸಂದರ್ಭಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಲ್ಇಡಿ ಇನ್ವರ್ಟರ್ ಬಲ್ಬ್
ಮೊದಲು ನಾವು RSCT 9W Inverter LED Bulb ಕುರಿತು ಹೇಳುವುದಾದರೆ, ಇದೊಂದು ರೀಚಾರ್ಜೆಬಲ್ ಎಮರಜೆನ್ಸಿ ಎಲ್ಇಡಿ ಬಲ್ಬ್ ಆಗಿದೆ. ಇದೊಂದು ಎಸಿ/ಡಿಸಿ ಬಲ್ಬ್ ಆಗಿದೆ ಮತ್ತು 9w ಪವರ್ ಆಯ್ಕೆಯಲ್ಲಿ ಲಭ್ಯವಿದೆ. ಇದು 220-240V ಬ್ಯಾಟರಿ ಒಳಗೊಂಡಿದೆ ಹಾಗೂ ಇದರಲ್ಲಿ 2200mAh ರೀಚಾರ್ಜೆಬಲ್ ಬ್ಯಾಟರಿ ನೀಡಲಾಗಿದೆ.
ಇದನ್ನೂ ಓದಿ-Post Office scheme: ಪೋಸ್ಟ್ ಆಫೀಸ್ ನ ಈ ಸೂಪರ್ ಹಿಟ್ ಯೋಜನೆಯಲ್ಲಿ ಬ್ಯಾಂಕ್ ಗಿಂತಲೂ ಉತ್ತಮ ಆದಾಯ ಸಿಗುತ್ತದೆ
ಈ ಬಲ್ಬ್ ಸಂಪೂರ್ಣವಾಗಿ ಚಾರ್ಜ್ ಆಗಲು 6 ರಿಂದ 8ಗಂಟೆ ಸಮಯ ಬೇಕಾಗುತ್ತದೆ ಹಾಗೂ ಕರೆಂಟ್ ಇಲ್ಲದ ವೇಳೆಯೂ ಕೂಡ ಇದು ಕಾರ್ಯನಿರ್ವಹಿಸುತ್ತದೆ. ಈ ಎಲ್ಇಡಿ ಇನ್ವರ್ಟರ್ ಬಲ್ಬ್ 5 ಗಂಟೆಗಳ ಅದ್ಭುತ ಬ್ಯಾಕಪ್ ನೀಡುತ್ತದೆ. ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂನಿಂದ ತಯಾರಿಸಲಾಗಿರುವ ಈ ಬಲ್ಬ್ ಅನ್ನು ನೀವು ಎಲ್ಲಿ ಬೇಕಾದರೂ ಬಳಸಬಹುದು. ಅಮೆಜಾನ್ ಮೂಲಕ ಈ ಬಲ್ಬ್ ಅನ್ನು ನೀವು 179 ರೂ. ಗಳಲ್ಲಿ ಇದನ್ನು ಖರೀದಿಸಬಹುದು.
ಇದನ್ನೂ ಓದಿ-SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಇತರ ಬ್ಯಾಂಕ್ ಗ್ರಾಹಕರಿಗೂ ಕೂಡ ಲಾಭ
ಇದರಲ್ಲಿ ಮತ್ತೊಂದು ಆಯ್ಕೆ ಇದೆ
ಇದರಲ್ಲಿ Boost 15W Inverter LED Bulb ನ ಒಂದು ಆಯ್ಕೆ ಕೂಡ ಇದೇ ಇದರ ಬೆಲೆ ರೂ. 299. ಈ ಬಲ್ಬ್ ಅನ್ನು ಕೂಡ ನೀವು ಅಮೆಜಾನ್ ಜಾಲತಾಣದ ಮೂಲಕ ಖರೀದಿಸಬಹುದು. ಈ ಇನ್ವರ್ಟರ್ ಬಲ್ಬ್ ಪಾಲಿಕಾರ್ಬೊನೆಟ್ ನಿಂದ ತಯಾರಿಸಲ್ಪಟ್ಟಿದೆ. ಫುಲ್ ಚಾರ್ಜ್ ಬಳಿಕ ಇದು ಸತತ ನಾಲ್ಕು ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ಇದು ಹಲವು ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.