ಇಂಗ್ಲಿಷ್‌ ಓದಲು ಕಷ್ಟವಾಗುತ್ತೆ ಎಂದು 7 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ

ಅಜಯ್ ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ.  ಇಂಗ್ಲಿಷ್ ಓದಲು ಕಷ್ಟವಾಗುತ್ತದೆ. ಶಾಲೆಗೆ ಹೋಗಲ್ಲ ಎಂದು ಮನೆಯಲ್ಲಿ ಹಠ ಮಾಡಿದ್ದ. ಆದರೆ ಶಾಲೆಗೆ ಹೋಗುವಂತೆ ಪೋಷಕರು ತಿಳಿ ಹೇಳಿದ್ದರು.  

Written by - Ranjitha R K | Last Updated : May 26, 2022, 03:24 PM IST
  • ಇಂಗ್ಲಿಷ್ ಕಷ್ಟ ಎಂದು ಹೇಳಿ ಆತ್ಮಹತ್ಯೆಗೆ ಯತ್ನ
  • 7 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ
  • ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
 ಇಂಗ್ಲಿಷ್‌ ಓದಲು ಕಷ್ಟವಾಗುತ್ತೆ ಎಂದು 7 ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ  title=
student suicide attempt

ತುಮಕೂರು : ಇಂಗ್ಲಿಷ್‌ ಓದಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ  7 ನೇ ತರಗತಿ  ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತುಮಕೂರಿನ ಊರ್ಡಿಗೆರೆಯಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯನ್ನು  ಅಜಯ್  ಎಂದು ಗುರುತಿಸಲಾಗಿದೆ.  

ಅಜಯ್ ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ. ಇಂಗ್ಲಿಷ್ ಓದಲು ಕಷ್ಟವಾಗುತ್ತದೆ. ಶಾಲೆಗೆ ಹೋಗಲ್ಲ ಎಂದು ಮನೆಯಲ್ಲಿ ಹಠ ಮಾಡಿದ್ದ. ಆದರೆ ಶಾಲೆಗೆ ಹೋಗುವಂತೆ ಪೋಷಕರು ತಿಳಿ ಹೇಳಿದ್ದರು.  ನಂತರ ಶಾಲೆಗೆ ಹೋಗುವ ಬದಲು ವಿದ್ಯಾರ್ಥಿ ಅಜಯ್  ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸದ್ದಾನೆ. ಕ್ರಿಮಿನಾಶಕ  ಸೇವಿಸುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಇದನ್ನೂ ಓದಿ : ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ ‘ಲಕ್ಷ್ಮಿ’ಗೆ ಮಾತ್ರ ಗೌರವ: ಬಿಜೆಪಿ ಟೀಕೆ

ಶಾಲೆಗೆ ಹೋಗುವುದಿಲ್ಲ ಎಂದು ಹೇಳಿ ಕ್ರಿಮಿ ನಾಶಕ ಸೇವಿಸಿದ ವಿದ್ಯಾರ್ಥಿ ಅಜಯ್ ಮನೆಯಲ್ಲಿ ಕುಸಿದು ಬಿದ್ದಿದ್ದಾನೆ. ಈ ಹಿನ್ನೆಲೆಯಲ್ಲಿ ಕೂಡಲೇ ಬಾಲಕ ಅಜಯ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನ ನೀಡಲಾಗಿದ್ದು,  ಪ್ರಾಣಾಪಾಯದಿಂದ  ಪಾರಾಗಿದ್ದಾನೆ. 

ಬಾಲಕ ಅಜಯ್ ತುಮಕೂರು ನಗರದ ಕೋತಿ ತೋಪು ಮೂಲದ ಸೋಮಶೇಖರ್, ಜಯಮ್ಮ ದಂಪತಿಯ ಮಗ . ಅಜಯ್ ಪೋಷಕರು ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಕೂಲಿ ಕೆಲಸದ ಸಲುವಾಗಿ ಈ ಕುಟುಂಬ  ಊರ್ಡಿಗೆರೆ ಗ್ರಾಮಕ್ಕೆ  ವಲಸೆ ಬಂದಿತ್ತು. ಈ ಕಾರಣದಿಂದಾಗಿ ವಿದ್ಯಾರ್ಥಿ ಅಜಯ್ ನನ್ನು 7ನೇ ತರಗತಿಗೆ ಊರ್ಡಿಗೆರೆಯಲ್ಲಿ ಶಾಲೆಗೆ  ಸೇರಿಸಲಾಗಿತ್ತು. 

ಇದನ್ನೂ ಓದಿ :ಸಿಲಿಕಾನ್ ಸಿಟಿಯಲ್ಲಿ ಶಾಸಕರ ಕಚೇರಿ ಬಳಿ ವೃದ್ಧನ ಭೀಕರ ಹತ್ಯೆ!

ಬಾಲಕನ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದ ಹಾಗೆ ಬಿಇಒ ಹನುಮನಾಯಕ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಾಲಕನ ಆರೋಗ್ಯ ವಿಚಾರಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News