ಭಾರತದ ಅತಿದೊಡ್ಡ ಡ್ರೋನ್‌ ಫೆಸ್ಟಿವಲ್‌ ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ಭಾರತದ ಅತಿದೊಡ್ಡ ಡ್ರೋನ್ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟನೆ ಮಾಡಲಿದ್ದಾರೆ.ಜೊತೆಗೆ ರೈತ ಡ್ರೋನ್ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಲಿದ್ದು, ಡ್ರೋನ್‌ ಹಾರಾಟವನ್ನೂ ಅವರು ವೀಕ್ಷಿಸಲಿದ್ದಾರೆ.

Written by - Zee Kannada News Desk | Last Updated : May 26, 2022, 09:25 PM IST
  • ಭಾರತ್‌ ಡ್ರೋನ್ ಮಹೋತ್ಸವ 2022 ಎರಡು ದಿನದ ಕಾರ್ಯಕ್ರಮವಾಗಿದ್ದು, ಮೇ 27 ಮತ್ತು 28 ರಂದು ನಡೆಯಲಿದೆ.
  • ಮೇ 27 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.
ಭಾರತದ ಅತಿದೊಡ್ಡ ಡ್ರೋನ್‌ ಫೆಸ್ಟಿವಲ್‌ ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ  title=
file photo

ನವದೆಹಲಿ: ಭಾರತದ ಅತಿದೊಡ್ಡ ಡ್ರೋನ್ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟನೆ ಮಾಡಲಿದ್ದಾರೆ.ಜೊತೆಗೆ ರೈತ ಡ್ರೋನ್ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಲಿದ್ದು, ಡ್ರೋನ್‌ ಹಾರಾಟವನ್ನೂ ಅವರು ವೀಕ್ಷಿಸಲಿದ್ದಾರೆ.

ಇದನ್ನೂ ಓದಿ : RSS ಮೆಚ್ಚಿಸಲು ಬಿಜೆಪಿ ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ: ಕಾಂಗ್ರೆಸ್

ಭಾರತ್‌ ಡ್ರೋನ್ ಮಹೋತ್ಸವ 2022 ಎರಡು ದಿನದ ಕಾರ್ಯಕ್ರಮವಾಗಿದ್ದು, ಮೇ 27 ಮತ್ತು 28 ರಂದು ನಡೆಯಲಿದೆ. ಮೇ 27 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ರೈತ ಡ್ರೋನ್ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಲಿದ್ದಾರೆ, ಡ್ರೋನ್ ಹಾರಾಟದ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ ಮತ್ತು ಡ್ರೋನ್‌ ಪ್ರದರ್ಶನ ಕೇಂದ್ರದಲ್ಲಿ ಸ್ಟಾರ್ಟಪ್‌ಗಳ ಜೊತೆಗೆ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ: ಬಿಜೆಪಿ ಟೀಕೆ

ಸರ್ಕಾರಿ ಅಧಿಕಾರಿಗಳು, ವಿದೇಶಿ ಪರಿಣಿತರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟಪ್‌ಗಳು ಸೇರಿದಂತೆ 1600 ನಿಯೋಗಗಳು ಈ ಹಬ್ಬದಲ್ಲಿ ಭಾಗವಹಿಸಲಿವೆ.70 ಕ್ಕೂ ಹೆಚ್ಚು ಪ್ರದರ್ಶನಕಾರರು ಪ್ರದರ್ಶನದಲ್ಲಿ ವಿವಿಧ ಬಳಕೆಯ ವಿಧಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಡ್ರೋನ್ ಪೈಲಟ್‌ ಪ್ರಮಾಣಪತ್ರಗಳು, ಉತ್ಪನ್ನ ಬಿಡುಗಡೆಗಳು, ಪ್ಯಾನೆಲ್ ಚರ್ಚೆಗಳು, ಹಾರಾಟ ಪ್ರದರ್ಶನಗಳು, ಭಾರತದಲ್ಲೇ ತಯಾರಿಸಿದ ಡ್ರೋನ್‌ ಟ್ಯಾಕ್ಸಿ ಪ್ರೊಟೊಟೈಪ್‌ ಪ್ರದರ್ಶನ ಈ ಮಹೋತ್ಸವದಲ್ಲಿ ಇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News