ಬೀದಿನಾಯಿಗಳಿಗೆ ಹಿಂಸೆ ಕೊಟ್ಟರೆ ಸೇರಬೇಕಾಗುತ್ತದೆ ಜೈಲು, ಬೀಳಲಿದೆ ಭಾರೀ ದಂಡ ..!

ಬೆಂಗಳೂರಿನಲ್ಲಿ ದಿನೇ ದಿನೇ ಬೀದಿ ನಾಯಿಗಳ ಮೇಲಿನ ಹಿಂಸಾಚಾರ ಹೆಚ್ಚುತ್ತಿದೆ. ಇದೀಗ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಎಚ್ಚೆತ್ತುಕೊಂಡಿದೆ. ಬೀದಿ ನಾಯಿಗಳಿಗೆ ಹಿಂಸೆ ನೀಡುವವರ ವಿರುದ್ದ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.   

Written by - Ranjitha R K | Last Updated : Jun 8, 2022, 09:38 AM IST
  • ಬೀದಿ ನಾಯಿಗೆ ಹಿಂಸೆ ಕೊಟ್ಟರೆ ಹುಷಾರ್
  • ಬೀಳಲಿದೆ ಭಾರೀ ದಂಡ, ಜೊತೆಗೆ ಜೈಲು ಶಿಕ್ಷೆ
  • ಸಿದ್ದವಾಗಿದೆ ಕಾಯಿದೆ, ಜಾರಿಯಷ್ಟೇ ಬಾಕಿ
ಬೀದಿನಾಯಿಗಳಿಗೆ ಹಿಂಸೆ  ಕೊಟ್ಟರೆ  ಸೇರಬೇಕಾಗುತ್ತದೆ ಜೈಲು, ಬೀಳಲಿದೆ ಭಾರೀ ದಂಡ ..! title=
jail to those who trouble stray dog (file photo)

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗುತ್ತಿದ್ದಂತೆ ಇದೀಗ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಎಚ್ಚೆತ್ತುಕೊಂಡಿದೆ. ಬೀದಿ ನಾಯಿಗಳ ಮೇಲಿನ ಹಿಂದೆ ತಡೆಗೆ ಕ್ರಮಕ್ಕೆ ಮುಂದಾಗಿದೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿ ತರಲು ಬಿಬಿಎಂಪಿ ಸಿದ್ದತೆ ನಡೆಸಿದೆ.  
 
ಬೆಂಗಳೂರಿನಲ್ಲಿ ದಿನೇ ದಿನೇ ಬೀದಿ ನಾಯಿಗಳ ಮೇಲಿನ ಹಿಂಸಾಚಾರ ಹೆಚ್ಚುತ್ತಿದೆ.  ದಿನ ಬೆಳಗಾದರೆ ಬೀದಿ ನಾಯಿಗಳ ಮೇಲೆ ಹಲ್ಲೆ, ಕೊಲೆ, ಉದ್ದೇಶ ಪೂರ್ವಕವಾಗಿ ಅಪಘಾತ ಮಾಡಿ ಸಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರಾಣಿ ಪ್ರಿಯರಿಂದ ಭಾರೀ ವಿರೋಧ ಕೂಡಾ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಎಚ್ಚೆತ್ತುಕೊಂಡಿದೆ. ಬೀದಿ ನಾಯಿಗಳಿಗೆ ಹಿಂಸೆ ನೀಡುವವರ ವಿರುದ್ದ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. 

ಇದನ್ನೂ ಓದಿ : ಆಮ್‌ ಆದ್ಮಿ ಪಾರ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ಹಿರಿಯ ನಟ ಮುಖ್ಯಮಂತ್ರಿ ಚಂದ್ರು

ಇನ್ನು ಮುಂದೆ ಬೀದಿನಾಯಿಗಳಿಗೆ ಹಿಂಸೆ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದರೆ ಕ್ರಿಮಿನಲ್ ಮೊಕದ್ದಮೆ ಜೊತೆಗೆ 75 ಸಾವಿರ ದಂಡವನ್ನು ವಿಧಿಸಲಾಗುವುದು. ಮಾತ್ರವಲ್ಲ, ಮೂರರಿಂದ ಐದು ವರ್ಷ ಜೈಲು ಶಿಕ್ಷೆಯನ್ನು ಕೂಡಾ  ಅನುಭವಿಸಬೇಕಾಗುತ್ತದೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿ ತರಲು ಬಿಬಿಎಂಪಿ ಮುಂದಾಗಿದೆ. ಪಿಸಿಎ ಆಕ್ಟ್ ಮೂಲಕ ಹೊಸ ನಿಯಮ ಜಾರಿಗೆ ಎಲ್ಲಾ ತಯಾರಿ ಪೂರ್ಣಗೊಳಿಸಿದೆ. ಈ  ಸಂಬಂಧ ಕಾಯ್ದೆ ಪ್ರತಿ ಸಿದ್ದವಾಗಿದ್ದು, ಜಾರಿ ಮಾಡುವುದಷ್ಟೇ ಬಾಕಿಯಿದೆ. ಬಿಬಿಎಂಪಿ ಪಶುಸಂಗೋಪನಾ ಇಲಾಖಾ ಅಧಿಕಾರಿ ಮಂಜುನಾಥ್ ಶಿಂಧೆ ಈ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Suspected terrorist arrested: ಯುವಕರ ಬ್ರೈನ್​ ವಾಶ್ ಮಾಡುತ್ತಿದ್ದ ತಾಲೀಬ್​ ಹುಸೇನ್!?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News