ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಬಿಬಿಎಂಪಿಗೆ ದಾಖಲೆ ಸಲ್ಲಿಸಿದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್

ಚಾಮರಾಜಪೇಟೆಯ ಈದ್ಗಾ ಮೈದಾನ ಯಾತ ಆಸ್ತಿ ಅನ್ನೋ ವಿಚಾರದ ವಿವಾದ ದಿನೇ ದಿನೇ ಹೆಚ್ಚಾಗ್ತಿದೆ. ಇದರ ಬಿಸಿ ನಡುವೆ ಮೈಸೂರು ಆಡಳಿತ ಕಾಲದಿಂದಲೂ ಇದ್ದ ದಾಖಲೆಗಳನ್ನು ಬಿಬಿಎಂಪಿಗೆ ಕರ್ನಾಟಕದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​(ಸಿಎಂಎ) ಸಲ್ಲಿಸಿದೆ.

Written by - Manjunath Hosahalli | Edited by - Manjunath N | Last Updated : Jun 10, 2022, 06:14 PM IST
  • ಸಿಎಂಎ ಪ್ರಧಾನ ಕಾರ್ಯದರ್ಶಿ ಜಹೀರುದ್ದೀನ್ ಅಹ್ಮದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈದ್ಗಾ ಮೈದಾನ ನಮ್ಮದು, ಇದರ ಅಧಿಕೃತ ದಾಖಲೆಗಳನ್ನ ನಾವು ಬಿಬಿಎಂಪಿ ವಿಶೇಷ ಆಯುಕ್ತರಿಗೆ ದಾಖಲೆಗಳನ್ನು ನೀಡಿದ್ದೇವೆ ಎಂದಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಬಿಬಿಎಂಪಿಗೆ ದಾಖಲೆ ಸಲ್ಲಿಸಿದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ title=

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ಯಾತ ಆಸ್ತಿ ಅನ್ನೋ ವಿಚಾರದ ವಿವಾದ ದಿನೇ ದಿನೇ ಹೆಚ್ಚಾಗ್ತಿದೆ. ಇದರ ಬಿಸಿ ನಡುವೆ ಮೈಸೂರು ಆಡಳಿತ ಕಾಲದಿಂದಲೂ ಇದ್ದ ದಾಖಲೆಗಳನ್ನು ಬಿಬಿಎಂಪಿಗೆ ಕರ್ನಾಟಕದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​(ಸಿಎಂಎ) ಸಲ್ಲಿಸಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಶ್ರೀನಿವಾಸ ಅವರಿಗೆ ಸುಪ್ರೀಂಕೋರ್ಟ್ ಆದೇಶ ಮಾಡಿದ್ದು, ಮೈಸೂರು ರಾಜ್ಯ ವಕ್ಫ್ ಮಂಡಳಿಯಿಂದ 1965 ರ ಅಧಿಕೃತ ಗೆಜೆಟ್ ಅಧಿಸೂಚನೆ ಸೇರಿದಂತೆ ಇನ್ನಿತರ ಹಳೇ ದಾಖಲೆಗಳ ಪ್ರತಿಗಳನ್ನು ಕಳುಹಿಸಲಾಗಿದೆ.

1965 ರ ಜೂನ್ 7 ರಂದೇ ವಕ್ಫ್ ಗೆಜೆಟ್ ಅಧಿಸೂಚನೆಯ ಅಡಿಯಲ್ಲಿ ಈದ್ಗಾ ಪ್ರದೇಶವನ್ನು ವಕ್ಫ್ ಆಸ್ತಿಯಾಗಿ ನೋಂದಾಯಿಸಲಾಗಿದೆ ಎಂದು ಅಸೋಸಿಯೇಷನ್ ​​ತಮ್ಮ ವಾದ ಮಂಡಿಸಿದೆ. ದಾಖಲೆಗಳ ಪ್ರಕಾರ, ಕ್ರಮಸಂಖ್ಯೆ 137ರಲ್ಲಿ ಚಾಮರಾಜಪೇಟೆಯ ಈದ್ಗಾ ಸುನ್ನಿ 2 ಎಕರೆ 5 ಗುಂಟೆ ಜಮೀನು ಇದ್ದು, ಇದರ ಮಾಲೀಕತ್ವ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​ಆಫ್ ಕರ್ನಾಟಕದ  ಕಾರ್ಯದರ್ಶಿಗೆ ವಹಿಸಲಾಗಿದೆ.

ಇದನ್ನೂ ಓದಿ: ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ಕ್ರಿಕೆಟರ್‌ ಬಟ್ಲರ್..!‌

ಸಿಎಂಎ ಪ್ರಧಾನ ಕಾರ್ಯದರ್ಶಿ ಜಹೀರುದ್ದೀನ್ ಅಹ್ಮದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈದ್ಗಾ ಮೈದಾನ ನಮ್ಮದು, ಇದರ ಅಧಿಕೃತ ದಾಖಲೆಗಳನ್ನ ನಾವು ಬಿಬಿಎಂಪಿ ವಿಶೇಷ ಆಯುಕ್ತರಿಗೆ ದಾಖಲೆಗಳನ್ನು ನೀಡಿದ್ದೇವೆ ಎಂದಿದ್ದಾರೆ.

ಈ ಮೊದಲು ಗೌರವಾನ್ವಿತ ನ್ಯಾಯಾಲಯವು ರಂಜಾನ್ ಮತ್ತು ಬಕ್ರೀದ್ ಪ್ರಾರ್ಥನೆಗೆ ಮಾತ್ರ ಅನುಮತಿ ನೀಡಿತು ಮತ್ತು ಸ್ಥಳವನ್ನು ಸಾರ್ವಜನಿಕರಿಗೆ ಆಟದ ಮೈದಾನವಾಗಿ ಬಳಸಲು ಅವಕಾಶ ನೀಡಲಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು 9000 ರೂ.ಮೌಲ್ಯದ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದ ಈ ನಟಿ..!

ಈ ಹಿಂದೆ ನಡೆದ ಕಾನೂನು ಹೋರಾಟದಲ್ಲಿಯೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿಂದಲೂ ತಮಗೆ ಜಯವಾಗಿತ್ತು. ಇದಾಗ್ಯೂ ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News