ಡಾರ್ಲಿಂಗ್ ಕೃಷ್ಣಗೆ ಜನ್ಮದಿನದ ಸಂಭ್ರಮ.. ದಿಲ್ ಪಸಂದ್ ಗ್ಲಿಂಪ್ಸ್ ಬಿಡುಗಡೆ

Darling Krishna Birthday: 'ದಿಲ್ ಪಸಂದ್' ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕೃಷ್ಣ ಅವರಿಗೆ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದೆ.

Written by - Chetana Devarmani | Last Updated : Jun 12, 2022, 05:33 PM IST
  • ಸ್ಯಾಂಡಲ್‌ವುಡ್‌ನ ಡಾರ್ಲಿಂಗ್ ಕೃಷ್ಣ
  • ಡಾರ್ಲಿಂಗ್ ಕೃಷ್ಣಗೆ ಜನ್ಮದಿನದ ಸಂಭ್ರಮ
  • ದಿಲ್ ಪಸಂದ್ ಗ್ಲಿಂಪ್ಸ್ ಬಿಡುಗಡೆ
ಡಾರ್ಲಿಂಗ್ ಕೃಷ್ಣಗೆ ಜನ್ಮದಿನದ ಸಂಭ್ರಮ.. ದಿಲ್ ಪಸಂದ್ ಗ್ಲಿಂಪ್ಸ್ ಬಿಡುಗಡೆ title=
ಡಾರ್ಲಿಂಗ್ ಕೃಷ್ಣ

Darling Krishna Birthday: ಸ್ಯಾಂಡಲ್‌ವುಡ್‌ನ ನಟ ಡಾರ್ಲಿಂಗ್ ಕೃಷ್ಣಗೆ ತಮ್ಮ 37ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.  ಅವರ ಹುಟ್ಟುಹಬ್ಬದ ಅಂಗವಾಗಿ 'ದಿಲ್ ಪಸಂದ್' ಚಿತ್ರದ ಗ್ಲಿಂಪ್ಸ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ನಯನತಾರಾ ಹಿಂದೆ ಸುತ್ತಿದ್ದರು ಆ ಇಬ್ಬರು ನಟರು! ವಿಘ್ನೇಶ್ ಅವರನ್ನೇ ನಟಿ ವರಿಸಲು ಕಾರಣವೇನು?

'ದಿಲ್ ಪಸಂದ್' ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಕೃಷ್ಣ ಅವರಿಗೆ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದೆ. ಈಗಾಗಲೇ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಅಲ್ಲದೆ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. 

ಶಿವ ತೇಜಸ್ ನಿರ್ದೇಶನದ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ. ಅಲ್ಲದೆ ಜೊತೆಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಸಹ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದಲ್ಲದೇ ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಹರೀಶ್ ದೇವಿತಂದ್ರೆ, ಚಿತ್ಕಲ ಬಿರಾದಾರ್, ಅರುಣಾ ಬಾಲರಾಜ್ ತಾರಾಗಣವಿದೆ. 

ಇದನ್ನೂ ಓದಿ: Kiccha Sudeep: ಸುದೀಪ್‌ ಧರಿಸಿದ್ದ ವಿಕೆಟ್ ಕೀಪಿಂಗ್ ಗ್ಲೌಸ್ ನೀಡುವಂತೆ ಕೇಳಿದ ರಾಜಸ್ಥಾನ್‌ ರಾಯಲ್ಸ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News