Body Hair Astrology: ಪುರುಷರಷ್ಟೇ ಅಲ್ಲ ಮಹಿಳೆಯರಿಗೂ ಕೂಡ ದೇಹದ ಈ ಭಾಗಗಳಲ್ಲಿ ರೋಮಗಳಿದ್ದರೆ ಅದು ಅತ್ಯಂತ ಶುಭ ಸಂಕೇತ

Hair On Body Astrology - ಶರೀರದ ಮೇಲೆ ರೋಮಗಳಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಕೆಲ ಜನರ ಶರೀರದ ಮೇಲೆ ಕಡಿಮೆ ರೋಮಗಳಿದ್ದರೆ, ಇನ್ನೂ ಕೆಲವರ ಮೈಮೇಲೆ ಅಧಿಕ ರೋಮಗಳಿರುತ್ತವೆ. ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಶರೀರದ ಮೇಲೆ ಇರುವ ರೋಮಗಳ ಸ್ಥಿತಿಯನ್ನು ಆಧರಿಸಿ ಹಲವು ಶುಭ ಹಾಗೂ ಅಶುಭ ಸಂಕೇತಗಳ ಕುರಿತು ವರ್ಣಿಸಲಾಗಿದೆ.   

Written by - Nitin Tabib | Last Updated : Jun 13, 2022, 01:38 PM IST
  • ಶರೀರದ ಮೇಲೆ ರೋಮಗಳಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ.
  • ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಶರೀರದ ಮೇಲೆ ಇರುವ ರೋಮಗಳ ಸ್ಥಿತಿಯನ್ನು ಆಧರಿಸಿ
  • ಹಲವು ಶುಭ ಹಾಗೂ ಅಶುಭ ಸಂಕೇತಗಳ ಕುರಿತು ವರ್ಣಿಸಲಾಗಿದೆ.
Body Hair Astrology: ಪುರುಷರಷ್ಟೇ ಅಲ್ಲ ಮಹಿಳೆಯರಿಗೂ ಕೂಡ ದೇಹದ ಈ ಭಾಗಗಳಲ್ಲಿ ರೋಮಗಳಿದ್ದರೆ ಅದು ಅತ್ಯಂತ ಶುಭ ಸಂಕೇತ title=
Hair On Body Astrology

Hair On Body Astrology - ಸಾಮಾನ್ಯವಾಗಿ ಮಹಿಳೆಯರ ಹೋಲಿಕೆಯಲ್ಲಿ ಪುರುಷರ ಶರೀರದ ಮೇಲೆ ಅಧಿಕ ರೋಮಗಳಿರುತ್ತವೆ. ಶಾರೀರದ ಮೇಲೆ ರೋಮಗಳು ಕಡಿಮೆಯಾಗಿವೆ ಅಥವಾ ಹೆಚ್ಚಾಗಿವೆ ಅಥವಾ ಯಾವ ಅಂಗದ ಮೇಲೆ ರೋಮಗಳಿವೆ ಎಂಬುದರ ಆಧಾರದ ಮೇಲೆ ವ್ಯಕ್ತಿಯ ಕುರಿತಾದ ಹಲವು ಸಂಗತಿಗಳನ್ನು ಹೇಳಬಹುದು. ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಈ ಕುರಿತು ವಿಸ್ತೃತವಾಗ ಚರ್ಚಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಶರೀರದ ಕೆಲ ಭಾಗಗಳ ಮೇಲೆ ರೋಮಗಳಿರುವುದು ಅತ್ಯಂತ ಶುಭಕರ ಎಂದು ಹೇಳಲಾಗಿದ್ದು, ಕೆಲ ಭಾಗಗಳ ಮೇಲೆ ರೋಮಗಳಿರುವುದು ಅಶುಭ ಸಂಕೇತ ಹೇಳಲಾಗಿದೆ. 

ಮಹಿಳೆಯರ ಶರೀರದ ಮೇಲೆ ರೋಮಗಳಿರುವುದು ಶುಭ ಸಂಕೇತ
ಮಹಿಳೆಯರು ಅನಗತ್ಯ ರೋಮಗಳನ್ನು ತೆಗೆಯಲು ತುಂಬಾ ಚಿಂತಿಸುತ್ತಿದ್ದರೂ ಕೂಡ, ಮಹಿಳೆಯರ ದೇಹದ ಕೆಲವು ಭಾಗಗಳಲ್ಲಿ ರೋಮಗಳು ಇರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಮಹಿಳೆಯರು ತಮ್ಮ ಕಂಕುಳ ಭಾಗದಲ್ಲಿ ಹೆಚ್ಚು ಕೂದಲನ್ನು ಹೊಂದುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕಂಕುಳ ಭಾಗದಲ್ಲಿ ಹೆಚ್ಚು ರೋಮಗಳಿರುವ ಮಹಿಳೆಯರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಇಂತಹ ಮಹಿಳೆಯರಿಗೆ ಒಪ್ಪಿಸಿದ ಕೆಲಸವನ್ನು ಅವರು ಸಂಪೂರ್ಣ ಶ್ರದ್ಧೆಯಿಂದ ಪೂರ್ಣಗೊಳಿಸುತ್ತಾರೆ. ಹಣಕಾಸಿನ ವಿಷಯದಲ್ಲಿ ಇವರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ ಮತ್ತು ಇವರ ಬಳಿ ಅಪಾರ ಹಣವಿರುತ್ತದೆ. ಅಷ್ಟೇ ಅಲ್ಲ, ಕೆಲವು ಮಹಿಳೆಯರಿಗೆ ಎದೆಯ ಮೇಲೂ ರೋಮಗಳಿರುತ್ತವೆ. ಇದನ್ನು ಸಮುದ್ರಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ಸ್ವಭಾವದಿಂದ ತುಂಬಾ ತೃಪ್ತರಾಗಿರುತ್ತಾರೆ.

ಇದನ್ನೂ ಓದಿ-Mobile Wallpaper Vastu: ಮೊಬೈಲ್ ನಲ್ಲಿ ಯಾವ ವಾಲ್ ಪೇಪರ್ ಬಳಸಿದರೆ ಯಶಸ್ಸು ನಿಮ್ಮದಾಗುತ್ತದೆ?

ಕಿವಿಗಳ ಮೇಲೆ ರೋಮಗಳಿರುವುದು ಶುಭ ಸಂಕೇತವೇ ಅಥವಾ ಅಶುಭ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಿವಿಗಳ ಮೇಲೆ ರೋಮಗಳಿರುವುದು ಕೂಡ ಶುಭ ಸಂಕೇತ ಎಂದು ಹೇಳಲಾಗುತ್ತದೆ. ಇಂತಹ ಜನರು ಸಾಕಷ್ಟು ಹಣವನ್ನು ಹೊಂದಿರುತ್ತಾರೆ ಮತ್ತು ಐಶಾರಾಮಿ ಜೀವನವನ್ನು ನಡೆಸುತ್ತಾರೆ. ಈ ಜನರು ಬಹಳ ಕಡಿಮೆ ಪ್ರಯತ್ನದಿಂದ ಎಲ್ಲವನ್ನೂ ಪಡೆಯುತ್ತಾರೆ. ಇದಲ್ಲದೆ, ಈ ಜನರು ತುಂಬಾ ಪ್ರತಿಭಾವನ್ತರಾಗಿರುತ್ತಾರೆ ಮತ್ತು ಅವರ ಮೇಲೆ ಯಾವಾಗಲೂ ದೇವರ ವಿಶೇಷ ಕೃಪೆ ಇರುತ್ತದೆ. ಇದೇ ವೇಳೆ, ಪುರುಷರ ಎದೆಯ ಮೇಲೆ ರೋಮಗಳಿರುವುದು ಕೂಡ ಒಳ್ಳೆಯ ಸಂಗತಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ-Shani Gochar 2022: ಇಂದಿನಿಂದ ಬರೋಬ್ಬರಿ ಒಂದು ತಿಂಗಳ ಬಳಿಕ ಈ ಜನರ ಕೆಟ್ಟ ಕಾಲ ಆರಂಭ, ಪಾರಾಗಲು ಈ ಉಪಾಯ ಮಾಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News