Karnataka MLC Election Results 2022 : ವಿಧಾನ ಪರಿಷತ್ ಫಲಿತಾಂಶ : 8ನೇ ಬಾರಿ ಗೆದ್ದು ಬಿಗಿದ ಬಸವರಾಜ್ ಹೊರಟ್ಟಿ

ಬಿಜೆಪಿಯ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರು 8 ಭಾರಿ ಗೆಲುವು ಸಾಧಿಸಿ, ಸೊಲ್ಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಆದ್ರೆ, ಅಧಿಕೃತ ಘೋಷಣೆ ಬಾಕಿ ಇದೆ. 

Written by - Zee Kannada News Desk | Last Updated : Jun 15, 2022, 01:12 PM IST
  • ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ಫಲಿತಾಂಶ
  • ಬಿಜೆಪಿಯ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರು 8 ಭಾರಿ ಗೆಲುವು
  • ಸೊಲ್ಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ
Karnataka MLC Election Results 2022 : ವಿಧಾನ ಪರಿಷತ್ ಫಲಿತಾಂಶ : 8ನೇ ಬಾರಿ ಗೆದ್ದು ಬಿಗಿದ ಬಸವರಾಜ್ ಹೊರಟ್ಟಿ title=

ಬೆಳಗಾವಿ : ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು  ಬಿಜೆಪಿಯ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರು 8 ಭಾರಿ ಗೆಲುವು ಸಾಧಿಸಿ, ಸೊಲ್ಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಆದ್ರೆ, ಅಧಿಕೃತ ಘೋಷಣೆ ಬಾಕಿ ಇದೆ.

ಬಸವರಾಜ್ ಹೊರಟ್ಟಿ ಅವರು 7501 ಕೋಟಾ ರೀಚ್ ಆಗಿದ್ದಾರೆ. ಅಲ್ಲದೆ, 7900 ಮತ ಪಡೆದ ಕೋಟಾ ರೀಚ್ ಆಗಿದ್ದಾರೆ. ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಬಸವರಾಜ್ ಹೊರಟ್ಟಿ ಅವರು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಿಡದಿನ್ನಿಗೆ ಮುಖಭಂಗವಾಗಿದೆ. ಅಧಿಕ ಮತಗಳು ತಿರಸ್ಕಾರದಿಂದ ಹೊರಟ್ಟಿ ಲೀಡ್ ಪ್ರಮಾಣ ಕುಸಿತ ಕಂಡಿದೆ. ತಿರಸ್ಕಾರಗೊಂಡ ಬಹುತೇಕ ಮತಗಳು ಹೊರಟ್ಟಿಗೆ ಚಲಾವಣೆಗೊಂಡಿವೆ. 

ಇದನ್ನೂ ಓದಿ : Covid-19: ಕೋವಿಡ್‌ ಪಾಸಿಟಿವ್‌ ಬಂದ ವಿದ್ಯಾರ್ಥಿಗಳಿಗೆ ಇಂದು ಮತ್ತೆ ಟೆಸ್ಟ್‌: ಮುಂದೇನು?

ಈ ಕುರಿತು ಮಾತನಾಡಿದ ಬಸವರಾಜ ಹೊರಟ್ಟಿ, ಯಾವ ದಾಖಲೆ ಗೊತ್ತಿಲ್ಲ, 7070 ಮತಗಳ ಬಂದಿವೆ. ನಮ್ಮ ನಿರೀಕ್ಷೆಯಷ್ಟು ಮತ ಬಂದಿವೆ,ಇನ್ನೂ 2 ಸಾವಿರ ಮತಗಳು ಬರೋ ಸಾಧ್ಯತೆ ಇದೆ. ಶಿಕ್ಷಕರ ತಪ್ಪು ಮಾರ್ಕ್ ಹಾಕಿದ್ದು  ಮತಗಳ ತಿರಸ್ಕಾರ ಆಗಿದೆ. ನೋಟಾ ಇಲ್ಲ, ಹೀಗಾಗಿ ಈ ರೀತಿ ಮಾಡಿದ್ದಾರೆ. ಭಾರತ ದೇಶದಲ್ಲಿ ಯಾರು 8 ಸಲ ಗೆದ್ದಿಲ್ಲ. ಖರ್ಗೆ 8 ಸಲ ಗೆದ್ದಿದ್ದು, ಮದ್ಯದಲ್ಲಿ ಅವಧಿ ಮುಗಿದಿತ್ತು. ನಿರೀಕ್ಷೆಯಂತೆ ಮತಗಳು ಬಂದಿವೆ. ಸಭಾಪತಿ ಸ್ಥಾನದ ಫೋಟೋ ಬಳಕೆ ಬಗ್ಗೆ ನೋಟಿಸ್ ಬಂದಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಯಲಿದೆ. ಸಚಿವನಾಗುತ್ತೇನೋ ಅಥವಾ ಸಭಾಪತಿ ಆಗುತ್ತೇನೋ ಗೊತ್ತಿಲ್ಲ. ಪಕ್ಷದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ನಮ್ಮ ಅಭಿಲಾಷೆ ದೇವರು ಈಡೇರಿಸಬೇಕು ಎಂದು ಸಚಿವನಾಗೋ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News