Diabetes: ಸಕ್ಕರೆ ಕಾಯಿಲೆಯಿಂದ ಬಾಯಿಗೆ ಸಂಬಂಧಿಸಿದ ಈ ಸಮಸ್ಯೆಗಳು ಎದುರಾಗಬಹುದು

Mouth Related Problems Due To Diabetes: ಮಧುಮೇಹವು ಬಾಯಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಧುಮೇಹ ಇರುವಾಗ ಬಾಯಿಗೆ ಸಂಬಂಧಿಸಿದ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Jun 16, 2022, 07:51 PM IST
  • ಮಧುಮೇಹವು ಬಾಯಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.
  • ಮಧುಮೇಹವು ಯಾವುದೇ ಚಿಕಿತ್ಸೆ ಇಲ್ಲದ ಒಂದು ಕಾಯಿಲೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ,
  • ಮಧುಮೇಹದಿಂದಾಗಿ, ಒಸಡುಗಳು ಊದಿಕೊಳ್ಳುವುದು, ಪಯೋರಿಯಾ, ಒಣ ಬಾಯಿ ಮುಂತಾದ ಸಮಸ್ಯೆಗಳು ಎದುರಾಗುತ್ತವೆ.
Diabetes: ಸಕ್ಕರೆ ಕಾಯಿಲೆಯಿಂದ ಬಾಯಿಗೆ ಸಂಬಂಧಿಸಿದ ಈ ಸಮಸ್ಯೆಗಳು ಎದುರಾಗಬಹುದು title=
Diabetes Related Mouth Problems

Mouth Related Problems Due To Diabetes: ಮಧುಮೇಹವು ಬಾಯಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಧುಮೇಹದಿಂದಾಗಿ, ಒಸಡುಗಳು ಊದಿಕೊಳ್ಳುವುದು, ಪಯೋರಿಯಾ, ಒಣ ಬಾಯಿ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಈ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಮಧುಮೇಹವು ಯಾವುದೇ ಚಿಕಿತ್ಸೆ ಇಲ್ಲದ ಒಂದು ಕಾಯಿಲೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ, ಆದ್ದರಿಂದ ಮಧುಮೇಹದ ಸಮಸ್ಯೆ ಇದ್ದರೆ, ನಿಮ್ಮ ಆರೋಗ್ಯ, ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ನಿಮಗೆ ಮಧುಮೇಹ ಇರುವಾಗ ಬಾಯಿಗೆ ಸಂಬಂಧಿಸಿದ ಯಾವ ಯಾವ ಸಮಸ್ಯೆಗಳು ಏರುಗಾಗುತ್ತವೆ ತಿಳಿದುಕೊಳ್ಳೋಣ ಬನ್ನಿ.

ಮಧುಮೇಹದಿಂದ ಬಾಯಿಗೆ ಸಂಬಂಧಿಸಿದ ಈ ಸಮಸ್ಯೆಗಳು ಎದುರಾಗುತ್ತವೆ
ಒಣ ಬಾಯಿ ಸಮಸ್ಯೆ

ಸಾಮಾನ್ಯವಾಗಿ ಮಧುಮೇಹದಿಂದ ಬಳಲುತ್ತಿರುವವರು ಬಾಯಿ ಒಣಗುವಿಕೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಏಕೆಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಬಾಯಿಯಲ್ಲಿನ ಹೆಚ್ಚಿನ ಪ್ರಮಾಣದ ಲಾಲಾರಸ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದು ಬಾಯಿಯಲ್ಲಿ ಶುಷ್ಕತೆಗೆ ಕಾರಣವಾಗುತ್ತದೆ. ಮತ್ತೊಂದೆಡೆ, ಬಾಯಿ ಒಣಗಿದಾಗ, ಅಲ್ಸರ್, ಹಲ್ಲು ಕೊಳೆತದಂತಹ ಸಮಸ್ಯೆಗಳು ಸಹ ಉದ್ಭವಿಸುತ್ತವೆ. 

ಮಧುಮೇಹದಲ್ಲಿ ಪೆರಿಯೊಡಾಂಟೈಟಿಸ್
ಪೆರಿಯೊಡಾಂಟೈಟಿಸ್ ಒಂದು ರೀತಿಯ ಬ್ಯಾಕ್ಟೀರಿಯಾದ ಸೋಂಕು ಕಾಯಿಲೆಯಾಗಿದೆ, ಇದರಲ್ಲಿ ಒಸಡುಗಳು ಹಾನಿಗೊಳಗಾಗುತ್ತವೆ ಮತ್ತು ದವಡೆಯ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆದರೆ, ಸಮಯಕ್ಕೆ ಸರಿಯಾಗಿ ಇದಕ್ಕೆ ಚಿಕಿತ್ಸೆ ನೀಡಬಹುದು. ಪೆರಿಯೊಡಾಂಟೈಟಿಸ್ ನಿಂದ ಹಲ್ಲುಗಳು ಒಡೆಯಲು ಪ್ರಾರಂಭಿಸುತ್ತವೆ.

ಜಿಂಗೈವಿಟಿಸ್
ಮಧುಮೇಹ ಕಾಯಿಲೆ ಇರುವವರಲ್ಲಿ ಒಸಡುಗಳು ಊದಿಕೊಳ್ಳುವ ಸಮಸ್ಯೆಯೂ ಇರುತ್ತದೆ. ಊದಿಕೊಂಡ ಒಸಡುಗಳು ಸಹ ಪೌಷ್ಟಿಕಾಂಶದ ಕೊರತೆಗೆ ಕಾರಣವಾಗಬಹುದು. ಮಧುಮೇಹ ನಿಯಂತ್ರಣದಲ್ಲಿಲ್ಲದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ಇದನ್ನೂ ಓದಿ-Cholesterol Lowering Diet: ಈ ಡ್ರೈ ಫ್ರೂಟ್ ತಿಂದರೆ ಹೆಚ್ಚಾಗುವುದಿಲ್ಲ ಕೊಲೆಸ್ಟ್ರಾಲ್

ಮಧುಮೇಹ ಇರುವವರಲ್ಲಿ ಒರಲ್ ಹೆಲ್ತ್ ಡಿಸೀಸ್ ನಿಂದ ಪಾರಾಗುವ ಉಪಾಯಗಳು
1. ನೀವು ಮಧುಮೇಹ ಹೊಂದಿದ್ದರೆ ಮತ್ತು ಸಕ್ಕರೆ ಮಟ್ಟವು ನಿಯಂತ್ರಣದಲ್ಲಿಲ್ಲದಿದ್ದರೆ, ನಿಮ್ಮ ಹಲ್ಲಿನ ಚಿಕಿತ್ಸೆಯನ್ನು ಮುಂದೂಡಿ.
2. ಬಾಯಿಯ ಆರೋಗ್ಯವನ್ನು ಉತ್ತಮವಾಗಿಡಲು, ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ.
3. ಮಧುಮೇಹ ಇರುವವರು ಬಾಯಿಯ ಸಮಸ್ಯೆಗಳನ್ನು ತಪ್ಪಿಸಲು, ಆಹಾರ ಸೇವನೆಯ ಬಳಿಕ ಬಾಯಿ ಮುಕ್ಕಳಿಸಲು ಮರೆಯಬೇಡಿ.

ಇದನ್ನೂ ಓದಿ-Weight Loss Tips: ಜಿಮ್‌ಗೆ ಹೋಗಬೇಕಾಗಿಲ್ಲ, ಈ ತರಕಾರಿ ಸೇವಿಸಿದರೂ ಕಡಿಮೆ ಆಗುತ್ತೆ ತೂಕ

(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News