ನವದೆಹಲಿ: ಐಡಿಯಾ ಸೆಲ್ಯುಲಾರ್ ಮತ್ತು ವೊಡಾಫೋನ್ ಇಂಡಿಯಾ ವಿಲೀನಕ್ಕಾಗಿ ಅಂತಿಮ ಅನುಮೋದನೆಯನ್ನು ಅಂಗೀಕರಿಸಲಾಗಿದೆ. ಈಗ ಕಂಪನಿಗಳು ಅಗತ್ಯ ಬದಲಾವಣೆಗಳನ್ನು ಮಾಡುತ್ತಿವೆ. ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗ ಹೊರಟಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ನಲ್ಲಿ ಯಾವ ಯಾವ ಬದಲಾವಣೆ ಇರುತ್ತದೆ ಎಂಬುದರ ಬಗ್ಗೆ ಇದುವರೆಗೂ ಕಂಪನಿಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಕಂಪನಿಯು ಹೊಸ ಹೆಸರಿನ ಹೊಸ ಸಿಮ್ ಬಿಡುಗಡೆ ಮಾಡುತ್ತದೆಯೇ ಅಥವಾ ಗ್ರಾಹಕರಿಗೆ ಹೊಸ ಕೊಡುಗೆಗಳು ಲಭ್ಯವಾಗಬಹುದೇ? ಇದರ ಬಗ್ಗೆ ಪ್ರತಿಯೊಬ್ಬ ಗ್ರಾಹಕರ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುವುದು ಸಹಜ. Idea-Vodafone ಕಂಪನಿಗಳ ವಿಲೀನದ ನಂತರ ಗ್ರಾಹಕರಿಗೆ ಏನೆಲ್ಲಾ ಪ್ರಯೋಜನಗಳು ಸಿಗಲಿವೆ ಎಂದು ತಿಳಿಯುವುದೂ ಕೂಡ ಮುಖ್ಯವಾಗಿದೆ.
ಸಿಮ್ ಬದಲಿಸುವ ಅಗತ್ಯವಿಲ್ಲ
ಐಡಿಯಾ ಮತ್ತು ವೊಡಾಫೋನ್ ವಿಲೀನದ ನಂತರ ಹಳೆಯ ಸಿಮ್ ಗಳನ್ನು ಬದಲಿಸುವ ಅಗತ್ಯವಿರುವುದಿಲ್ಲ. ಕಂಪನಿಯು ಸಿಸ್ಟಂ ನಲ್ಲಿ ಸಿಮ್ ನ ಹಳೆಯ ಡಾಟಾವನ್ನು ನವೀಕರಿಸುತ್ತದೆ. ಅದೇ ಸಮಯದಲ್ಲಿ ಗ್ರಾಹಕರು ಹೊಸ ಕೊಡುಗೆಗಳನ್ನು ಪಡೆಯುತ್ತಾರೆ.
ಆದಾಗ್ಯೂ, ಇದು ಸಾಮಾಜಿಕ ಮಾಧ್ಯಮದ ಬಗ್ಗೆ ಚರ್ಚೆಯಾಗುತ್ತಿದ್ದು, ಕಂಪನಿಯು ಹೊಸ ಹೆಸರಿನೊಂದಿಗೆ ಒಂದು ಹೊಸ ಸಿಮ್ ಬಿಡುಗಡೆ ಮಾಡುತ್ತದೆ. ವಿಲೀನದ ನಂತರ ಗ್ರಾಹಕರು ಹೊಸ ಸಿಮ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ ಎನ್ನಲಾಗುತ್ತಿದೆ. ಆದರೆ ಹೊಸ ಹೆಸರಿನಿಂದ ಬರುವ ಸಿಮ್ ಹೊಸ ಗ್ರಾಹಕರಿಗೆ ಮಾತ್ರ. ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರ ಸಿಮ್ ಗಳನ್ನು ಬದಲಾಯಿಸಬೇಕಿಲ್ಲ. ಎರಡೂ ಕಂಪನಿಗಳು ಈಗಾಗಲೇ 4 ಜಿ ಸೇವೆಯ ಪ್ರಕಾರ ವ್ಯವಸ್ಥೆಯನ್ನು ನವೀಕರಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ದೇಶದ ಅತಿದೊಡ್ಡ ದೂರಸಂಪರ್ಕ ಕಂಪೆನಿ ನೆಟ್ ವರ್ಕ್ ಸುಧಾರಿಸುವ ಆಶಯವನ್ನು ಕೂಡಾ ಹೊಂದಿದೆ. ನೆಟ್ ವರ್ಕ್ ಸುಧಾರಿಸುವುದರಿಂದ ಕಾಲ್ ಡ್ರಾಪ್ ಮತ್ತು ಸಂಪರ್ಕ ಸಮಸ್ಯೆಗಳು ಉದ್ಭವಿಸುವುದಿಲ್ಲ. ವಿಶೇಷ ವಿಷಯವೆಂದರೆ ವೊಡಾಫೋನ್ ಮತ್ತು ಐಡಿಯ ಕಂಪನಿಗಳು ಹಳ್ಳಿ ಮತ್ತು ನಗರ ಪ್ರದೇಶಗಳೆರಡರಲ್ಲೂ ನೆಟ್ ವರ್ಕ್ ಸುಧಾರಿಸಲು ಪ್ರಯತ್ನಿಸುತ್ತಿದೆ. 4 ಜಿ ಕನೆಕ್ಟಿವಿಟಿ ದೊಡ್ಡ ಸುಧಾರಣೆಗಳನ್ನು ಸಹ ಕಾಣಬಹುದಾಗಿದ್ದು, ಗ್ರಾಹಕರು ದೊಡ್ಡ ಪ್ರಯೋಜನ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಹೆಚ್ಚು ಗ್ರಾಹಕರನ್ನು ಒಳಗೊಂಡಿರುವ ವೊಡಾಫೋನ್-ಐಡಿಯಾ ಕಂಪನಿಗಳು ವಿಲೀನದ ನಂತರ, ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡಲಿವೆ ಎಂದು ನಿರೀಕ್ಷಿಸಲಾಗಿದೆ.